‘ಬೆಲ್ ಬಾಟಂ’ ಅಂತ ಯಾಕೆ ಹೆಸರಿಟ್ರು? ಬೆಳ್ಳಿ …ಮಾತಿನಲ್ಲಿ ಟಾಪ್ ಟು ಬಾಟಂ ಉತ್ತರ

ರಿಷಭ್ ಶೆಟ್ಟಿಯವ್ರು ಜಗ್ಗೇಶ್ ಅವ್ರನ್ನು ಅನುಕರಿಸಿದಂತಿದೆ ಅನ್ನೋ ಮಾತನ್ನು ಕೂಡ ಹೇಳಿದ್ರು. ಈ ಮಾತಿಗೆ ಪ್ರತಿಕ್ರಿಯಿಸಿದ ರಿಷಬ್ ಶೆಟ್ಟಿ, ಇದನ್ನು ನಾನು ಕಾಂಪ್ಲಿಮೆಂಟ್ ಆಗಿ ತಗೊತಿನಿ. ಜಗ್ಗೇಶ್ ಸರ್ ಅವ್ರ ಅಭಿಮಾನಿ ನಾನು. ಕೋಟ್ಯಾಂತರ ಜನ ಮೆಚ್ಚಿಕೊಳ್ಳೋ ಅದ್ಭುತ ಕಲಾವಿದ ಅವ್ರು. ಅವ್ರ ರೀತಿ ನಾನು ನಿಮಗೆ ಕಾಣಿಸಿದ್ದೀನಿ ಅಂದ್ರೆ ಖುಷಿಯ ವಿಚಾರ.

‘ಬೆಲ್ ಬಾಟಂ’ ಅಂತ ಯಾಕೆ ಹೆಸರಿಟ್ರು? ಬೆಳ್ಳಿ …ಮಾತಿನಲ್ಲಿ ಟಾಪ್ ಟು ಬಾಟಂ ಉತ್ತರ

ಈ ವರ್ಷ ಶತದಿನೋತ್ಸವ ಆಚರಿಸಿದ ಮೊದಲ ಸಿನಿಮಾ ಜಯತೀರ್ಥ ನಿರ್ದೇಶನದ ಬೆಲ್ ಬಾಟಂ. ಈ ಸಿನಿಮಾ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ಬೆಳ್ಳಿ ಸಿನಿಮಾ ಬೆಳ್ಳಿ ಮಾತು ಕಾರ್ಯಕ್ರಮಕ್ಕೆ ಆಯ್ಕೆಯಾಗಿತ್ತು. ಶನಿವಾರ ( ಜೂನ್ 8 ) ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋನಲ್ಲಿ ನಡೆದ ಸಿನಿಮಾ ಪ್ರದರ್ಶನ ಹಾಗೂ  ಚರ್ಚೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ನಾಗತಿಹಳ್ಳಿ ಚಂದ್ರಶೇಖರ್, ರಿಜಿಸ್ಟಾರ್ ದಿನೇಶ್, ಬೆಲ್ ಬಾಟಂ ಚಿತ್ರತಂಡ, ಕಥೆಗಾರ ಟಿ.ಕೆ ದಯಾನಂದ್, ವಿವಿಧ ಲೇಖಕರು, ಸಾಹಿತ್ಯಾಸಕ್ತರು ಭಾಗಿಯಾಗಿದ್ರು. ಸಿನಿಮಾ ಪ್ರದರ್ಶನದ ಬಳಿಕ ಸದಭಿರುಚಿಯ ಬೆಲ್ ಬಾಟಂ ಸಿನಿಮಾದ ಬಗ್ಗೆ ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡ್ರು.

ಸಿನಿಮಾ ಪ್ರದರ್ಶನದ ಬಳಿಕ ಪ್ರೇಕ್ಷಕರೊಬ್ರು ಸಿನಿಮಾಕ್ಕೆ ಬೆಲ್ ಬಾಟಂ ಅನ್ನೋ ಹೆಸರಿಡೋಕೆ ಕಾರಣವೇನು ಅನ್ನೋದಕ್ಕೆ ಚಿತ್ರತಂಡ ಕೊಟ್ಟ ಉತ್ತರ ಹೀಗಿತ್ತು. ಟೈಟಲ್ ನ ಪದೇ ಪದೇ ಸಿನಿಮಾದಲ್ಲಿ ಬಳಸಿ ಪ್ರೇಕ್ಷಕರಿಗೆ ಅದು ಕ್ಲೀಷೆ ಅನ್ನಿಸಬಾರದು ಅನ್ನೋ ವಿಚಾರ ನಿರ್ದೇಶಕ ಜಯತೀರ್ಥ ಅವ್ರ ಮನಸ್ಸಿನಲ್ಲಿ ಇತ್ತಂತೆ. ಹಾಗಾಗಿ ಕಥೆಯ ಕೊನೆ ಕೊನೆಯಲ್ಲಿ ಸಿನಿಮಾಕ್ಕೆ ಟೈಟಲ್ ಅನ್ನು ರಿಲೇಟ್ ಮಾಡಲಾಗಿದೆ. ಕಥೆಯ ಆರಂಭದಲ್ಲಿ ಕಾಣಿಸೋ ಒಂದು ಮರಕ್ಕೆ ಬೆಲ್ ಕಟ್ಟಿರ್ತೀವಿ. ಕಳ್ಳತನವಾಗೋ ಮಾಲ್ ಗಳು ಆ ಮರದ ಕೆಳಗಿರತ್ತೆ. ಅಲ್ಲಿಯೂ ಟೈಟಲ್ ರಿಲೇಟ್ ಅದನ್ನು ಹೊರತು ಪಡೆಸಿದ್ರೆ 80 ರ ದಶಕದಲ್ಲಿ ಫೇಮಸ್ ಆಗಿದ್ದ ಬೆಲ್ ಬಾಟಂ ಪ್ಯಾಂಟ್‌ ನ್ನು ಅಂಧರ ಕೈಯಲ್ಲಿ ಹೊಲಿಸೋ ಚಿತ್ರಣವನ್ನು ಕೂಡ ಇಲ್ಲಿ ತೋರಿಸಲಾಗಿದೆ ಅಂದ್ರು.

ಅದಲ್ದೇ ಸಿನಿಮಾದ ಕ್ಯಾಪ್ಶನ್ ಅಲ್ಲಿ ಬೆಲ್ ಬಾಟಂ, ಅಡ್ವೆಂಚರ್ಸ್ ಆಫ್ ಡಿಟೆಕ್ಟಿವ್ ದಿವಾಕರ್ ಅಂತಿದೆ. ಒಂದು ಪ್ಯಾಂಟ್ ನ್ನು ಕ್ಯಾರೆಕ್ಟರ್ ಮಾಡೋದಕ್ಕೆ ಆಗೋದಿಲ್ಲ. ಸಿನಿಮಾದ ಶೀರ್ಷಿಕೆ ಪ್ರೇಕ್ಷಕರಿಗೆ ಆಕರ್ಷಣೀಯವಾಗಿರಬೇಕು. ಅದು ಬಹಳ ಕಾಲ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಬೇಕು ಅನ್ನೋ ಉದ್ದೇಶದಿಂದ ಈ ಟೈಟಲ್ ಇಡಲಾಗಿದೆ ಅಂದ್ರು. ಇನ್ನು ಇದೇ ವಿಚಾರ ಮಾತನಾಡ್ತಾ ಸಿನಿಮಾದ ನಾಯಕ ರಿಷಬ್ ಶೆಟ್ಟಿ, ಬೆಲ್ ಬಾಟಂ ಪ್ಯಾಂಟ್ ಬಗ್ಗೆ ತಮಗಿರೋ ನೆನಪನ್ನ ಹಂಚಿಕೊಂಡ್ರು. ಕಾಲೇಜು ದಿನಗಳಲ್ಲಿದ್ದಾಗ ರಿಷಬ್ ಶೆಟ್ಟಿ ಬೆಲ್ ಬಾಟಂ ತೊಟ್ಟಿದ್ರಂತೆ. ನಮ್ಮಮ್ಮ ಎಲ್ಲಾ ಪ್ಯಾಂಟ್ ಗಳನ್ನು ತೊಳೆಯೋದಕ್ಕೆ ಹಾಕಿದ್ರು. ಆಗ ಯಾವ್ದೇ ಪ್ಯಾಂಟ್ ಇಲ್ಲ ಅನ್ನೋ ಕಾರಣಕ್ಕೆ ಮದುವೆಯಲ್ಲಿ ಅಪ್ಪನಿಗಾಗಿ ಹೊಲಿಸಿದ್ದ ಬೆಲ್ ಬಾಟಂ ಪ್ಯಾಂಟ್ ತೊಟ್ಟಿದ್ದೆ ಅಂದ್ರು. ಇನ್ನು ಬೇರೆ ಭಾಷೆಗಳಲ್ಲೂ ಬೆಲ್ ಬಾಟಂ ಚಿತ್ರ ಮೂಡಿಬರಲಿದೆ. ಹಿಂದಿ ಹಾಗೂ ತೆಲುಗು ಭಾಷೆಯವ್ರು ಟೈಟಲ್ ಸಮೇತ ಚಿತ್ರವನ್ನು ಕೊಂಡುಕೊಂಡಿದ್ದಾರಂತೆ. ಇನ್ನು ಪ್ರೇಕ್ಷಕರೊಬ್ರು ಜೀನ್ ಪ್ಯಾಂಟ್ ಅಂಥಲೂ ಒಂದು ಸಿನಿಮಾ ಮಾಡಿ ಅಂತ ನಿರ್ದೇಶಕ ಜಯತೀರ್ಥರವರಿಗೆ ಸೂಚಿಸಿದ್ರು. ಅದ್ಕೆ ನಿರ್ದೇಶಕರು ಈಗಾಗ್ಲೇ ಆ ಹೆಸರಿನ ಸಿನಿಮಾ ಬಂದಿದೆ ಅಂತ ನಕ್ಕರು.


ಪ್ರೇಕ್ಷಕರ ಪ್ರಕಾರ ಬೆಲ್ ಬಾಟಂ ಸಿನಿಮಾಕ್ಕೆ ಸ್ಟಾರ್ ಬೇಕಾಗಿರಲಿಲ್ಲ., ಬದಲಾಗಿ ಕಲಾವಿದರು, ಪರ್ಫಾಮರ್ಸ್ ಬೇಕಿತ್ತು ಅದ್ರ ಆಯ್ಕೆಯನ್ನು ನಿರ್ದೇಶಕರು ಬಹಳ ಚೆನ್ನಾಗಿ ಮಾಡಿದ್ದಾರೆ. ಶಿವಮಣಿ, ರಿಷಭ್ ಶೆಟ್ಟಿ ಹಾಗೂ ಇನ್ನಿತರ ಮೇರು ಕಲಾವಿದರು, ಸಂಗೀತ, ಹಿನ್ನೆಲೆ ಸಂಗೀತವೇ ಸಿನಿಮಾದ ಪ್ಲಸ್ ಪಾಯಿಂಟ್ . ಜಯತೀರ್ಥರವ್ರ ಆರು ಸಿನಿಮಾಗಳನ್ನು ನಾವು ನೋಡಿದ್ದೇವೆ ಸಿನಿಮಾದಿಂದ ಸಿನಿಮಾಕ್ಕೆ ವೈವಿಧ್ಯತೆಯಿದೆ . ಇದು ಜಯತೀರ್ಥರ ಅಸ್ತಿತ್ವ ಅಂದ್ರು. ಇನ್ನು ಕಾದಂಬರಿ ಓದುವಾಗ ಸಿಗೋ ಖುಷಿ ಈ ಇಂಥ ಸಿನಿಮಾಗಳನ್ನು ನೋಡಿದಾಗ ಸಿಗತ್ತೆ ಅಂದ್ರು.

ಈ ಮಾತುಗಳನ್ನು ಕೇಳ್ತಿದ್ದಂತೆ  ನಿರ್ದೇಶಕರು ನಿಮ್ಮ ಮಾತುಗಳೇ ನಮಗೆ ಸ್ಫೂರ್ತಿ. ನಮ್ಮ ಕೆಲಸ ನಿಮಗೆ ಖುಷಿ ಕೊಟ್ಟಿದೆ ಅಂದ್ರೆ ನಿಜಕ್ಕೂ ಸಂತಸ ಅಂದ್ರು.  ಹಾಗೆಯೇ ಸಿನಿಮಾದ ಹೈಲೈಟ್ ಪಾಯಿಂಟ್ ಆಗಿರೋ ಲೊಕೇಷನ್, ಕಾಸ್ಟ್ಯೂಮ್ಸ್ ಬಗ್ಗೆ ಮಾತನಾಡಿದ್ರು. ಬೆಲ್ ಬಾಟಂ ಸಿನಿಮಾದ ಕಲಾವಿದರಿಗೆ ವಸ್ತ್ರ ವಿನ್ಯಾಸ ಮಾಡಿದ್ದು ರಿಷಭ್ ಶಟ್ಟಿಯವ್ರ ಪತ್ನಿ ಪ್ರಗತಿ ಶೆಟ್ಟಿ. ಚಿತ್ರಗಳಲ್ಲಿರೋ ತಿರುವು, ಸನ್ನಿವೇಶ, ದೃಶ್ಯಗಳನ್ನು ಕಂಡಾಗ ಹಳೆಯ ಕಾದಂಬರಿ ಓದಿದಾಗ ಸಿಗೋ ಫೀಲ್ ಸಿಗಬೇಕು ಅನ್ನೋ ಉದ್ದೇಶದಿಂದಲೇ ಈ ರೀತಿ ಸಿನಿಮಾ ಮಾಡಿದ್ದು ಅಂದ್ರು. ಸಿನಿಮಾದಲ್ಲಿ ಅಂಧರ ಬಳಕೆ ಮಾಡಿರೋದು ಆಂಖೇನ್ ಸಿನಿಮಾ ಪ್ರಭಾವಾನಾ ಅಂಥ ನಿರ್ದೇಶಕರಿಗೆ ಪ್ರೇಕ್ಷಕರೊಬ್ರು ಪ್ರಶ್ನಿಸಿದ್ದಕ್ಕೆ ನಾನು ಆಂಖೇನ್  ಸಿನಿಮಾ ನೋಡಿಲ್ಲ. ಸಿನಿಮಾ ನೋಡಿದವ್ರೊಬ್ರು ನನಗೂ ಆ ರೀತಿ ಕೇಳಿದ್ರು. ಆದ್ರೆ ದಯಾನಂದ್ ಅವ್ರು ಕಥೆಯಲ್ಲಿಯೇ ಅದನ್ನು ಸೃಷ್ಟಿಸಿದ್ರು ಅಂದ್ರು.


ಬೆಲ್ ಬಾಟಂ ಸಿನಿಮಾ ಚೆನ್ನಾಗಿ ಓಡ್ತಿದೆ ಅಂಥ ಜನ ಮಾತನಾಡಿಕೊಳ್ತಿದ್ರು ಆದ್ರೆ ಸಿನಿಮಾ ನೋಡೋಕೆ ಆಗಿರಲಿಲ್ಲ. ಈಗ ಬೆಲ್ ಬಾಟಂ ನೂರು ದಿನ ಪೂರೈಸಿದೆ. ಇವತ್ತು ಸಿನಿಮಾ ನೋಡೋ ಭಾಗ್ಯ ಸಿಕ್ತು. ಸಿನಿಮಾ ಇಷ್ಟು ಚೆನ್ನಾಗಿರೋದಕ್ಕೆನೆ ನೂರು ದಿನ ಪೂರೈಸಿದೆ. ಹಾಗಾಗಿಯೇ ಜನ ಸಿನಿಮಾ ಬಗ್ಗೆ ಮಾತನಾಡ್ತಿದ್ದಾರೆ ಅಂಥ ಪ್ರೇಕ್ಷಕರೊಬ್ರು ಅಭಿಪ್ರಾಯ ಪಟ್ರು. ಜತೆಗೆ ಸಿನಿಮಾದ ಆರಂಭದಲ್ಲಿ ರಿಷಭ್ ಶೆಟ್ಟಿಯವ್ರು ಜಗ್ಗೇಶ್ ಅವ್ರನ್ನು ಅನುಕರಿಸಿದಂತಿದೆ ಅನ್ನೋ ಮಾತನ್ನು ಕೂಡ ಹೇಳಿದ್ರು. ಈ ಮಾತಿಗೆ ಪ್ರತಿಕ್ರಿಯಿಸಿದ ರಿಷಬ್ ಶೆಟ್ಟಿ, ಇದನ್ನು ನಾನು ಕಾಂಪ್ಲಿಮೆಂಟ್ ಆಗಿ ತಗೊತಿನಿ. ಜಗ್ಗೇಶ್ ಸರ್ ಅವ್ರ ಅಭಿಮಾನಿ ನಾನು. ಕೋಟ್ಯಾಂತರ ಜನ ಮೆಚ್ಚಿಕೊಳ್ಳೋ ಅದ್ಭುತ ಕಲಾವಿದ ಅವ್ರು. ಅವ್ರ ರೀತಿ ನಾನು ನಿಮಗೆ ಕಾಣಿಸಿದ್ದೀನಿ ಅಂದ್ರೆ ಖುಷಿಯ ವಿಚಾರ. ಆದ್ರೆ ಬೆಲ್ ಬಾಟಂ ಸಿನಿಮಾ ವಿಚಾರಕ್ಕೆ ಬಂದ್ರೆ ದಿವಾಕರನ ಕ್ಯಾರೆಕ್ಟರ್ ನಲ್ಲಿ ಬಹಳ ನಟರ ಹಾವ-ಭಾವಗಳಿವೆ. ಸಿನಿಮಾ ಕಥೆಯಲ್ಲೂ ಕೂಡ ನಾಯಕ ಬಾಲ್ಯದಿಂದಲೂ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿರ್ತಾನೆ. ಸಿನಿಮಾ ನಟರ ಪ್ರಭಾವ ದಿವಾಕರನ ಮೇಲಿರತ್ತೆ . ಇಂಥ ಐಡಿಯಾಗಳನ್ನೇ ಬಳಸಿಕೊಂಡು ಸಿನಿಮಾ ಮಾಡಲಾಗಿದೆ ಅಂದ್ರು.


ಇನ್ನು ಸಿನಿಮಾ ಸಂಪುರ್ಣ ಚಿತ್ರೀಕರಣವಾಗಿದ್ದು ಕರ್ನಾಟಕದಲ್ಲಿಯೇ ಅದ್ರಲ್ಲೂ ಮಲೆನಾಡು ಭಾಗಗಳಲ್ಲಿ. ಸಿನಿಮಾದ ಬಹುತೇಕ ದೃಶ್ಯಗಳು ಜೋಗದ್ದು. ಉಳಿದಂತೆ ಹಳೆಯ ಪೊಲೀಸ್ ಸ್ಟೇಷನ್ ಗಳ ದೃಶ್ಯಗಳು ಉಡುಪಿಯದ್ದು. ಕೆಲವೊಂದು ದೃಶ್ಯಗಳು ಹೊಸನಗರ ಶಿವಪ್ಪನ ಕೋಟೆಯಲ್ಲಿ ಶೂಟ್ ಮಾಡಿದ್ದು ಅಂಥ ನಿರ್ದೇಶಕ ಜಯತೀರ್ಥ ಹೇಳಿದ್ರು. ಬೆಲ್ ಬಾಟಂ ಸಿನಿಮಾ ಸದ್ಯ 116 ದಿನಗಳನ್ನು ಪೂರೈಸಿದೆ. ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಬೆಳ್ಳಿ ಸಿನಿಮಾ ಬೆಳ್ಳಿ ಮಾತು ಕಾರ್ಯಕ್ರಮದಲ್ಲೂ ಬೆಲ್ ಬಾಟಂ ಸಿನಿಮಾ ನೋಡೋಕೆ, ಸಿನಿಮಾದ ಬಗ್ಗೆ ಮಾತನಾಡೋಕೆ ಸ್ಟುಡಿಯೋ ತುಂಬಿ ಜನ ಇದ್ರು. ನಿರ್ದೇಶಕ ಜಯತೀರ್ಥ ಇಡೀ ಹೊಸಬರ ಜತೆ ಸಿನಿಮಾ ಮಾಡಿ ಗೆದ್ದಿದ್ದಾರೆ. ಇಂಥ ಮತ್ತಷ್ಟು ಸಿನಿಮಾಗಳನ್ನು ನಿರ್ದೇಶಿಸಲಿ ಅಂಥ ಪ್ರೇಕ್ಷಕರು ಅಭಿಪ್ರಾಯ ಪಟ್ಟರು. ಬೆಲ್ ಬಾಟಂ ಯಶಸ್ಸಿಗೆ ಕಾರಣರಾದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಸಿನಿಮ್ಯಾಟೋಗ್ರಾಫರ್ ಅರವಿಂದ್ ಕಶ್ಯಪ್, ನಿರ್ಮಾಪಕ ಸಂತೋಷ್, ಸಂಭಾಷಣೆ ಬರೆದಿರೋ ರಘು ನಿಡುವಳ್ಳಿ ಪ್ರತಿಯೊಬ್ರ ಪಾತ್ರ  ಬಹಳ ದೊಡ್ಡದು ಅನ್ನೋದು ನಟ ರಿಷಬ್ ಶೆಟ್ಟಿಯವ್ರ ಮಾತು.


ಚರ್ಚೆಯ ಕೊನೆಯಲ್ಲಿ ಅಕಾಡೆಮಿ ಅಧ್ಯಕ್ಷರು ನಾಗತಿಹಳ್ಳಿ ಚಂದ್ರಶೇಖರ್, ಸಿನಿಮಾ ತಂಡಕ್ಕೆ ವಂದಿಸಿದ್ರು. ಬೆಲ್ ಬಾಟಂ ಸಿನಿಮಾವನ್ನು ಬೆಳ್ಳಿ ಸಿನಿಮಾ ಅಂಥ ಆಯ್ಕೆ ಮಾಡಿದಾಗ ಒಂದಿಷ್ಟು ಆಕ್ಷೇಪಗಳು ಕೇಳಿ ಬಂದ್ವು. ನೂರ್ ದಿನ ಪೂರೈಸಿದೆ ಅಂಥ ಈ ಸಿನಿಮಾ ಆಯ್ಕೆ ಮಾಡಿದ್ರಾ, ನಿಮ್ಮ ಸ್ನೇಹಿತರ ಸಿನಿಮಾ ಅಂಥ ಸೆಲೆಕ್ಟ್ ಮಾಡಿದ್ರಾ ಅಂಥ ಪ್ರಶ್ನಿಸಿದ್ರು. ಆಗ ನಾನು ಹೇಳ್ದೆ ಒಂದು ಚಿತ್ರ ಶತದಿನೋತ್ಸವ ಹೋಗೋದು ಅಂದ್ರೆ ಖುಷಿಯ ವಿಚಾರವೇ. ಅದ್ರಲ್ಲೂ ಇದು ಸದಭಿರುಚಿ ಸಿನಿಮಾ. ಪ್ರತಿಯೊಬ್ರು ಈ ಸಿನಿಮಾ ನೋಡಿಕೊಂಡು ಬಂದು ಸಿನಿಮಾ ಚೆನ್ನಾಗಿದೆ ಅಂಥ ಹೇಳ್ತಿದ್ರು. ನನ್ನಲ್ಲಿ ಸಿನಿಮಾ ನೋಡಿಲ್ಲ ಅನ್ನೋ ಅಳುಕಿತ್ತು. ಆದ್ರೆ ಇಂದು ಸಿನಿಮಾ ನೋಡಿ ಖುಷಿಯಾಯ್ತು ಅಂತ ಹರ್ಷ ವ್ಯಕ್ತ ಪಡಿಸಿದ್ರು.