ಕೊರಿಯಾ ಓಪನ್: ಸೆಮಿಫೈನಲ್ ಗೆ ಪ್ರವೇಶಿಸಿದ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಪರುಪಲ್ಲಿ ಕಶ್ಯಪ್

ಕೊರಿಯಾ ಓಪನ್: ಸೆಮಿಫೈನಲ್ ಗೆ ಪ್ರವೇಶಿಸಿದ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಪರುಪಲ್ಲಿ ಕಶ್ಯಪ್

ದಕ್ಷಿಣ ಕೊರಿಯಾ:  ಕೊರಿಯಾ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ವಿಶ್ವದ ನಂ.2 ಆಟಗಾರ ಡೆನ್ಮಾರ್ಕ್‌ನ ಜಾನ್ ಒ ಜೋರ್ಗೆನ್ಸನ್‌ರನ್ನು ಸೋಲಿಸಿ ಭಾರತೀಯ ಬ್ಯಾಡ್ಮಿಂಟನ್  ಆಟಗಾರ ಪರುಪಲ್ಲಿ ಕಶ್ಯಪ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಪರುಪಲ್ಲಿ ಕಶ್ಯಪ್  24-22, 21-8ರಿಂದ ನೇರ ಪಂದ್ಯಗಳಲ್ಲಿ ಜೋರ್ಗೆನ್ಸನ್‌ರನ್ನು ಸೋಲಿಸಿದ್ದು, ನಾಳೆ(ಸೆ.28) ನಡೆಯಲಿರುವ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಸೆಪ್ಟೆಂಬರ್ 26, ಗುರುವಾರ ಕಶ್ಯಪ್ ಅವರು ಮಲೇಷ್ಯಾದ ಲೀವ್ ಡೇರೆನ್ ವಿರುದ್ಧ 21-17, 11-21, 21-12 ಅಂತರದ ಗೆಲುವು ದಾಖಲಿಸಿ ನಂತರ ಕ್ವಾರ್ಟರ್ಸ್ ಗೆ ಆಯ್ಕೆಯಾಗಿದ್ದರು. ಪರುಪಲ್ಲಿ ಕಶ್ಯಪ್ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 500 ಪಂದ್ಯಾವಳಿಯ ಕಣದಲ್ಲಿ ಉಳಿದಿರುವ ಏಕೈಕ ಭಾರತೀಯರಾಗಿದ್ದಾರೆ.

2015 ರ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಜೋರ್ಗೆನ್ಸನ್ ವಿರುದ್ಧ 2-4 ದಾಖಲೆಯೊಂದಿಗೆ ಭಾರತೀಯರು ಪಂದ್ಯವನ್ನು ಪ್ರವೇಶಿಸಿದರು.