ಬಿಡುಗಡೆಯಾಯ್ತು ಆಟಕ್ಕುಂಟು ಲೆಕ್ಕಕ್ಕಿಲ್ಲ ಟ್ರೇಲರ್!

ಬಿಡುಗಡೆಯಾಯ್ತು ಆಟಕ್ಕುಂಟು ಲೆಕ್ಕಕ್ಕಿಲ್ಲ ಟ್ರೇಲರ್!

ರಾಮ್ ಜೆ ಚಂದ್ರ ನಿರ್ದೇಶನ ಮಾಡಿರೋ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರ ಈಗಾಗಲೇ ಕ್ರಿಯೇಟಿವ್ ಪೋಸ್ಟರುಗಳು ಮತ್ತು ಹಾಡಿನಿಂದ ಪ್ರೇಕ್ಷಕರರನ್ನು ಆವರಿಸಿಕೊಂಡಿದೆ. ಸೈಕಾಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಸುಳಿವಿನೊಂದಿಗೆ ಎಲ್ಲ ವರ್ಗದ ಪ್ರೇಕ್ಷಕರ ಆಸಕ್ತಿಯನ್ನು ಸೆಳೆದುಕೊಂಡಿದ್ದ ಈ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಇಡೀ ಸಿನಿಮಾದ ನಿಗೂಢವನ್ನು ಬಿಟ್ಟೂ ಬಿಡದಂತೆ ಹಿಡಿದಿಟ್ಟುಕೊಳ್ಳುತ್ತಲೇ ನೋಡುಗರನ್ನು ಮತ್ತಷ್ಟು ಕಾತರರಾಗುವಂತೆ ಮಾಡುವಂತಿರೋ ಈ ಟ್ರೇಲರ್ ಮೂಲಕ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರ ಮತ್ತಷ್ಟು ಮಿರುಗಿದೆ.

ವಸುಂಧರಾ ಕೃತಿಕ್ ಫಿಲಂಸ್ ಲಾಂಚನದಡಿಯಲ್ಲಿ ನಿರ್ಮಾಣಗೊಂಡಿರೋ ಆಟಕ್ಕುಂಟು ಲೆಕ್ಕಕ್ಕಿಲ್ಲ ಮನೋ ವೈಜ್ಞಾನಿಕ ವಿಚಾರದಲ್ಲಿ ಆಳವಾದ ಅಧ್ಯಯನ ನಡೆಸಿ, ಪ್ರತಿಯೊಬ್ಬರೂ ಬೆರಗಾಗುವಂಥಾ ಕಥಾ ಎಳೆಗಳೊಂದಿಗೆ ಈ ಚಿತ್ರವನ್ನು ರೂಪಿಸಲಾಗಿದೆ. ಅದರ ನಿಜವಾದ ಖದರ್ ಏನಿದೆ ಅನ್ನೋದರ ಸ್ಪಷ್ಟ ಸುಳಿವು ಇದೀಗ ಬಿಡುಗಡೆಯಾಗಿರೋ ಟ್ರೇಲರ್ ಮೂಲಕ ಅನಾವರಣಗೊಂಡಿದೆ. ಒಂದೊಂದು ಪಾತ್ರಗಳೂ ಚಿತ್ರವಿಚಿತ್ರ ಚಹರೆ ಹೊಂದಿರೋ ಸುಳಿವಿನೊಂದಿಗೆ ಕುತೂಹಲವನ್ನು ಕಾಪಿಟ್ಟುಕೊಳ್ಳುವಂಥಾ ಪರಿಣಾಮಕಾರಿ ಶೈಲಿಯಲ್ಲಿ ಈ ಟ್ರೇಲರ್ ಮೂಡಿ ಬಂದಿದೆ.

ತಾಂತ್ರಿಕವಾಗಿಯೂ ಈ ಚಿತ್ರ ಹೊಸಾ ಪ್ರಯೋಗಗಳೊಂದಿಗೆ ಮೂಡಿ ಬಂದಿದೆ ಎಂಬ ವಿಚಾರವನ್ನು ಚಿತ್ರತಂಡ ಈ ಹಿಂದೆಯೇ ಹೇಳಿಕೊಂಡಿತ್ತು. ಅದಕ್ಕೆ ಪೂರಕವಾದ ದೃಶ್ಯಗಳೇ ಈ ಟ್ರೇಲರ್‍ನಲ್ಲಿಯೂ ಗೋಚರಿಸಿವೆ. ಈ ಮೂಲಕ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುದು ವಿಭಿನ್ನ ಕಥೆ ಹೊಂದಿರೋ ಚಿತ್ರ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ. ನಿರ್ದೇಶಕ ರಾಮ್ ಜೆ ಚಂದ್ರ ಹಲವಾರು ವರ್ಷಗಳಿಂದ ಕನಸು ಕಟ್ಟಿಕೊಂಡು, ಮನೋವೈಜ್ಞಾನಿಕ ವಿಷಯದ ಬಗ್ಗೆ ಪ್ರಾಕ್ಟಿಕಲ್ ಆಗಿಯೇ ಅಧ್ಯಯನ ನಡೆಸಿ, ಅಚ್ಚರಿದಾಯಕ ಮಾಹಿತಿಗಳೊಂದಿಗೆ ರೂಪಿಸಿರೋ ಕಥೆ ಇಲ್ಲಿದೆ. ಅದರದ್ದೊಂದು ಝಲಕ್ ಟ್ರೇಲರ್ ಮೂಲಕ ಅನಾವರಣಗೊಂಡಿದೆ. ಈ ಚಿತ್ರ ಶೀಘ್ರದಲ್ಲಿಯೇ ತೆರೆಗಾಣಲು ರೆಡಿಯಾಗಿದೆ.