ಜಾಮಾ ಮಸೀದಿ ಪಾಕಿಸ್ತಾನದಲ್ಲಿದೆಯೇ?: ದೆಹಲಿ ಪೊಲೀಸರಿಗೆ ಕೋರ್ಟ್ ತರಾಟೆ

ಜಾಮಾ ಮಸೀದಿ ಪಾಕಿಸ್ತಾನದಲ್ಲಿದೆಯೇ?: ದೆಹಲಿ ಪೊಲೀಸರಿಗೆ ಕೋರ್ಟ್ ತರಾಟೆ

ದೆಹಲಿ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರನ್ನು ಬಂಧಿಸಿದ ದೆಹಲಿ ಪೊಲೀಸರನ್ನು ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿತು. 

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ತೀಸ್ ಹಝಾರಿ ಕೋರ್ಟ್, ಧರಣಿ ಮತ್ತು ಪ್ರತಿಭಟನೆ ನಡೆಸುವುದರಲ್ಲಿ ತಪ್ಪೇನಿದೆ. ಪ್ರತಿಭಟನೆ ನಡೆಸಬಾರದು ಎನ್ನುವುದಕ್ಕೆ ಜಾಮಾ ಮಸೀದಿಯೇನು ಪಾಕಿಸ್ತಾನದಲ್ಲಿರುವ ಮಸೀದಿಯೇ ಎಂದು ಪ್ರಶ್ನಿಸಿದೆ. ಸಾಂವಿಧಾನಾತ್ಮಕ ಹಕ್ಕುಗಳಲ್ಲಿ ಪ್ರತಿಭಟನೆ ಮಾಡುವುದು ಕೂಡ ಒಂದಾಗಿದೆ ಎಂದು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ದೆಹಲಿ ಪೊಲೀಸರನ್ನು ಪ್ರಶ್ನಿಸಿದ ಅವರು ಪ್ರತಿಭಟನೆ ನಡೆಸಬಾರದು ಎನ್ನುವುದಕ್ಕೆ ಅದೇನು ಪಾಕಿಸ್ತಾನದಲ್ಲಿರುವ ಜಾಮಾ ಮಸೀದಿಯೇ ಎಂದು ಪ್ರಶ್ನಿಸಿದರು.

ಪ್ರತಿಭಟನೆ ನಡೆಸುವುದಕ್ಕೆ ಯಾರಾದಾರೊಬ್ಬರು ಅನುಮತಿ ಪಡೆಯಬೇಕೆಂದ ಪಬ್ಲಿಕ್ ಪ್ರಾಸಿಕ್ಯೂಟರ್ ರನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡ ನ್ಯಾಯಧೀಶರು, ಯಾವ ಅನುಮತಿ? ಸೆಕ್ಷನ್ 144 ಅನ್ನು ಪದೇ ಪದೇ ಹೇರುವುದು ಕಾನೂನಿನ ದುರುಪಯೋಗವೆಂದು ಸುಪ್ರೀಂಕೋರ್ಟ್ ಹೇಳಿದೆ. ಇಂತಹ ಹಲವು ಪ್ರಕರಣಗಳನ್ನು ನಾನು ನೋಡಿದ್ದೇನೆ. ಸಂಸತ್ ನ ಹೊರಗೂ ಪ್ರತಿಭಟನೆಗಳು ನಡೆದಿವೆ. ಈ ಪ್ರತಿಭಟನೆಗಳನ್ನು ನಡೆಸಿದವರು ಇಂದು ಹಿರಿಯ ರಾಜಕಾರಣಿಗಳಾಗಿದ್ದಾರೆ. ಮುಖ್ಯಮಂತ್ರಿಗಳಾಗಿದ್ದಾರೆ ಎಂದರು.

ಸಿಎಎ ವಿರೋಧಿಸಿ ದೆಹಲಿ ಗೇಟ್ ಬಳಿ ಪ್ರತಿಭಟನಾಕಾರರನ್ನು ಪೊಲೀಸರು ಮತ್ತು ಸಂಸದೀಯ ಸಿಬ್ಬಂದಿ ತಡೆದಾಗ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಚಂದ್ರಶೇಖರ್ ಅಜಾದ್ ಅವರನ್ನು ಬಂಧಿಸಿದ್ದರು.