ಲಾಕ್‌ ಡೌನ್ ವೇಳೆ ಮಾರ್ಗಸೂಚಿ ಪಾಲಿಸದ ಕ್ರೀಡಾಪಟುಗಳಿಗೆ ನೊಟೀಸ್‌

ಲಾಕ್‌ ಡೌನ್ ವೇಳೆ ಮಾರ್ಗಸೂಚಿ ಪಾಲಿಸದ ಕ್ರೀಡಾಪಟುಗಳಿಗೆ ನೊಟೀಸ್‌

ದೆಹಲಿ: ಲಾಕ್‌ಡೌನ್ ‌ ವೇಳೆ ತಮ್ಮ ವಾಸ್ತವ್ಯ ಮಾಹಿತಿಯನ್ನು ಸೂಚಿಸದ 25 ಕ್ರೀಡಾಪಟುಗಳಿಗೆ ನಾಡಾನೊಟೀಸ್‌ ಜಾರಿ ಮಾಡಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಯಾವುದೇ ಕ್ರೀಡಾಪಟುಗಳ ಸ್ಯಾಂಪಲ್‌ ಪಡೆಯುವುದಿಲ್ಲ ಎಂದು ನಾಡಾ ಸ್ಪಷ್ಟಪಡಿಸಿತ್ತು. ಆದರೆ ಮಾರ್ಗಸೂಚಿಯನ್ನು ಪಾಲಿಸುವಂತೆ ಸೂಚಿಸಿತ್ತು.

ಪ್ರತೀ 3 ತಿಂಗಳಿಗೊಮ್ಮೆ, ಕ್ರೀಡಾಳುಗಳು ಯಾವ ಸ್ಥಳದಲ್ಲಿ ತಂಗುತ್ತಾರೆಂಬುದನ್ನು ಮುಂಚಿತವಾಗಿ ಎನ್‌ಆರ್‌ ಟಿಪಿಯಲ್ಲಿ ಕಡ್ಡಾಯವಾಗಿ ದಾಖಲಿಸುವುದೂ ಒಂದು ನಿಯಮವಾಗಿತ್ತು.

ದೇಶದಲ್ಲಿ ಬಹುತೇಕ ಲಾಕ್ ಡೌನ್ ಸಡಿಲವಾದ ಕಾರಣ ಇನ್ನು ಉದ್ದೀಪನ ಪರೀಕ್ಷೆಗಾಗಿ ಸ್ಯಾಂಪಲ್ ಪಡೆಯಲಿದೆ. ನಿಯಮ ಪಾಲಿಸದ 20ರಿಂದ 25 ಕ್ರೀಡಾ ಪಟುಗಳಿಗೆ ನೋಟೀಸ್ ನೀಡಿದ್ದರೂ, ನಾಡಾ ಅವರ ಹೆಸರನ್ನು ಬಹಿರಂಗಗೊಳಿಸಿಲ್ಲ.