ಕ್ಷಯರೋಗ ಚಿಕಿತ್ಸೆಗಾಗಿ ಹೊಸ ಪ್ರತಿಜೀವಕ ಔಷಧಿಯೊಂದಕ್ಕೆ ಅನುಮೋದನೆ.

ನಮ್ಮ ಜಾಗತಿಕ ಸಂಶೋಧನಾ ವಿಭಾಗವು ಈ ದಿಶೆಯಲ್ಲಿ ಪರಿಣಾಮಕಾರಿಯಾದ ಹೆಜ್ಜೆ ಇಡದಿದ್ದರೆ ಔಷಧಿ ಪ್ರತಿರೋಧಕ ಸೋಂಕುಕಾರಕ ರೋಗಗಳಿಂದ 2050ನೇ ಇಸ್ವಿಯ ವರೆಗೆ ಪ್ರತಿವರ್ಷ 10 ಮಿಲಿಯನ್ ರೋಗಿಗಳು ಮರಣಹೊಂದಬಹುದೆಂದು ಅಮೆರಿಕ ಸಂಯುಕ್ತ ಸಂಸ್ಥಾನವು ಅಂದಾಜು ಯೋಜನೆ ರೂಪಿಸಿದೆ.

ಕ್ಷಯರೋಗ ಚಿಕಿತ್ಸೆಗಾಗಿ ಹೊಸ ಪ್ರತಿಜೀವಕ ಔಷಧಿಯೊಂದಕ್ಕೆ ಅನುಮೋದನೆ.

ಅಮೆರಿಕೆಯ ಆಹಾರ ಮತ್ತು ಔಷಧ ಆಡಳಿತ (Food and Drug Administration) ವಿಭಾಗವು ಇದೇ ಅಗಸ್ಟ್ ತಿಂಗಳ 14ನೇ ದಿನಾಂಕದಂದು ಔಷಧಿ ಪ್ರತಿರೋಧಕ (Drug Resistant Tuberculosis) ಕ್ಷಯರೋಗ ಚಿಕೆತ್ಸೆಗೆ ಪ್ರಿಟೋಮ್ಯಾನಿಡ್ (Pretomanid) ಎಂಬ ಹೆಸರಿನ ಹೊಸ ಔಷಧಿಗೆ ಅನುಮೋದನೆ ನೀಡಿರಿವುದು ವರದಿಯಾಗಿದೆ. ಔಷಧಿ ಪ್ರತಿರೋಧಕ ಕ್ಷಯವು ಜಗತ್ತಿನ ಅತ್ಯಂತ ಪ್ರಮುಖ ಮಾರಣಾಂತಿಕ ಸೋಂಕುಕಾರಕ ರೋಗವಾಗಿದೆ.

ಔಷಧಿ ಪ್ರತಿರೋಧಕ ಕ್ಷಯರೋಗವು ಮಾಮೂಲು ಕ್ಷಯರೋಗಕ್ಕಿಂತ ಅತಿ ಹೆಚ್ಚು ಮಾರಕವಾಗಿದ್ದು ಅದು ಐದು ಲಕ್ಷ ರೋಗಿಗಳಲ್ಲಿ ವರ್ಷಕ್ಕೆ 1.6 ಮಿಲಿಯನ್ ರಷ್ಟು ಜನರನ್ನು ಬಲಿಪಡೆಯುತ್ತದೆ ಎನ್ನುತ್ತವೆ ಜಾಗತಿಕ ಆರೋಗ್ಯ ಸಂಸ್ಥೆ (World Health Organization)ಯ ಅಂಕಿಅಂಶಗಳು.

ಮುಂದಿನ ಪೀಳಿಗೆಯ ಪ್ರತಿಜೀವಕ (Next generation Antibiotics) ಔಷಧಿಗಳ ಸಂಶೋಧನಾ ನಿರತ ಅಮೆರಿಕೆಯ ಕೆಲವೇ ಕೆಲವು ಲಾಭರಹಿತ ಸಂಸ್ಥೆಗಳ   ದುಬಾರಿ ವೆಚ್ಚದ ಅವಿರತ ಪ್ರಯತ್ನಗಳ ನಡುವೆ ಟಿಬಿ ಅಲೈಯನ್ಸ್ ಎಂಬ ಹೆಸರಿನ ಲಾಭರಹಿತ ಸಮೂಹ ಸಂಸ್ಥೆಯು ಪ್ರಿಟೋಮ್ಯಾನಿಡ್ ಎಂಬ ಹೊಸ ಪ್ರತಿಜೀವಕ ಔಷಧಿಯೊಂದನ್ನು ಅಭಿವೃದ್ಧಿಪಡಿಸಿದೆ. 

ಔಷಧಿ ಪ್ರತಿರೋಧಕ  ಕ್ಷಯರೋಗ ಮತ್ತು ಇತರ ಸೋಂಕುಕಾರಕ ರೋಗಗಳ ಬೆಳೆಯುತ್ತಿರುವ ಅಪಾಯವನ್ನು ದ್ರಷ್ಟಿಯಲ್ಲಿಟ್ಟುಕೊಂಡು ಆರೋಗ್ಯ ಪ್ರಾಧಿಕಾರಗಳು ಎಚ್ಚರಿಸುತ್ತಿರುವುದರ ನಡುವೆ ಟಿಬಿ ಅಲೈಯನ್ಸನಂತ ಲಾಭರಹಿತ ಸಂಸ್ಥೆಗಳು ಹೊಸ ಪ್ರತಿಜೀವಕ ಔಷಧಿಗಳ ಅಭಿವ್ರದ್ಧಿಯಲ್ಲಿ ತೊಡಗಿಸಿಕೊಂಡಿರುವುದು ಮಾದರಿ ನಡೆ ಎನ್ನಲಾಗುತ್ತಿದೆ.

ನಮ್ಮ ಜಾಗತಿಕ ಸಂಶೋಧನಾ ವಿಭಾಗವು ಈ ದಿಶೆಯಲ್ಲಿ ಪರಿಣಾಮಕಾರಿಯಾದ ಹೆಜ್ಜೆ ಇಡದಿದ್ದರೆ ಔಷಧಿ ಪ್ರತಿರೋಧಕ ಸೋಂಕುಕಾರಕ ರೋಗಗಳಿಂದ 2050ನೇ ಇಸ್ವಿಯ ವರೆಗೆ ಪ್ರತಿವರ್ಷ 10 ಮಿಲಿಯನ್ ರೋಗಿಗಳು ಮರಣಹೊಂದಬಹುದೆಂದು ಅಮೆರಿಕ ಸಂಯುಕ್ತ ಸಂಸ್ಥಾನವು ಅಂದಾಜು ಯೋಜನೆ ರೂಪಿಸಿದೆ.

ನಮ್ಮ ಈ ಸಂಶೋಧನೆಯು ಕ್ಷಯರೋಗವನ್ನು ಸಂಪೂರ್ಣವಾಗಿ ತೊಡೆದುಹಾಕುವಲ್ಲಿ ಮತ್ತು ಕ್ಷಯರೋಗಿಗಳ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎನ್ನುತ್ತಾರೆ ಟಿಬಿ ಅಲೈಯನ್ಸ್ ಸಮೂಸ ಸಂಸ್ಥೆಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಮೆಲ್ ಸ್ಪೈಜಲ್ಮೆನ್. ಜಾಗತಿಕ ಆರೋಗ್ಯ ರಕ್ಷಣೆಯ ಮಹತ್ವದ ಹೆಜ್ಜೆಯಾದ ಇಂತಹ ಲಾಭರಹಿತ ಸಂಶೋಧನೆಗಳ ಮುಖ್ಯ ಅನುಕೂಲವೆನೆಂದರೆ ಈ ಸಂಶೋಧನೆಯ ಮುಖ್ಯ ಫಲಾನುಭವಿಗಳನ್ನು ನಮಗೆ ಲಾಭದ ರೂಪದಲ್ಲಿ ದೊರಕಿಸಿಕೊಡುವುದು ಎನ್ನುತ್ತಾರೆ ಮೆಲ್ ಸ್ಪೈಜಲ್ಮೆನ್.

ಹಲವಾರು ಔಷಧ ಕಂಪನಿಗಳು ಪ್ರತಿಜೀವಕ ಔಷಧಿಗಳ ಅಭಿವೃದ್ಧಿಯಲ್ಲಿ ತೊಡಗಿವೆ. ಅಂತಹ ಕಂಪನಿಗಳು ಒಂದು ಪ್ರತಿಜೀವಕ ಔಷಧಿ ಮಾರುಕಟ್ಟೆಗೆ ತರಲು 1ಮಿಲಿಯನ್ ಅಮೆರಿಕನ್ ಡಾಲರ್ ಖರ್ಚು ಮಾಡುತ್ತವಾದರೂ ಅದರಿಂದ ಬರುವ ಲಾಭ ಬಹಳ ಕಡಿಮೆ. ಅದೇ ದೀರ್ಘ ಕಾಲಿನ ತೊಂದರೆಗಳಾದ ಅತಿ ರಕ್ತದೊತ್ತಡˌ ಅತಿ ಕೊಬ್ಬಿನಾಂಶ ಮುಂತಾದ ರೋಗಗಳ ಚಿಕಿತ್ಸೆಗೆ ಬಳಸುವ ಔಷಧಿಗಳು 100 ರಿಂದ 1000 ಡಾಲರ್ ಗಳಷ್ಟು ಹೆಚ್ಚಿನ ಲಾಭವನ್ನು ನೀಡಬಲ್ಲವು.

ಏಕೆಂದರೆˌ ಪ್ರತಿಜೀವಕ ಔಷಧಿಗಳು ತುಲನಾತ್ಮಕವಾಗಿ ಅಗ್ಗದ ದರದಲ್ಲಿ ಲಭ್ಯವಿದ್ದು ಅವುಗಳನ್ನು ಕೆಲವು ದಿನˌ ವಾರಗಳ ವರೆಗೆ ಸೇವಿಸಲು ಶಿಫಾರಸ್ಸು ಮಾಡಲಾಗುತ್ತದೆ.  ದೀರ್ಘ ಕಾಲಿನ ರೋಗಗಳಾದ ಕ್ಯಾನ್ಸರ್ˌ ಕ್ಷಯ ಮುಂತಾದವುಗಳಿಗೆ ತಿಂಗಳು ಮತ್ತು ವರ್ಷಗಳ ವರೆಗೆ  ಶಿಫಾರಸ್ಸು ಮಾಡಲಾಗುತ್ತದೆ.

ಕಳೆದ ದಶದಲ್ಲಿ ಮಾನ್ಯತೆ ಪಡೆದ ಎಲ್ಲ ಪ್ರತಿಜೀವಕ ಔಷಧಿಗಳು ನಿರಾಶಾದಾಯಕ ಮಾರಾಟದಿಂದ ಬಳಲಿವೆ. ಅಚಾಜೆನ್ ಎಂಬ ಔಷಧಿ ಕಂಪನಿಯು ಅಭಿವೃದ್ಧಿಪಡಿಸಿ ಅನುಮೋದನೆ ಪಡೆದಿದ್ದ ಪ್ರತಿಜೀವಕ ಔಷಧಿಯೊಂದು ಕಳೆದ ಏಪ್ರಿಲ್ ತಿಂಗಳಲ್ಲಿ ನಿರಾಶಾದಾಯಕ ಮಾರಾಟವಾದ್ದರಿಂದ ದಿವಾಳಿ ಘೋಷಿಸಿಕೊಂಡಿದೆ.

ಟಿಬಿ ಅಲೈಯನ್ಸ್ ಅಭಿವೃದ್ಧಿಪಡಿಸಿ ಅನುಮೋದನೆ ಪಡೆದಿರುವ ಪ್ರಿಟೋಮ್ಯಾನಿಡ್ ಎಂಬ ಹೊಸ ಪ್ರತಿಜೀವಕ ಔಷಧಿಯು ಕಳೆದ ನಲವತ್ತು ವರ್ಷಗಳಲ್ಲಿ ಅಮೆರಿಕೆಯ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯ ಅನುಮೋದನೆ ಪಡೆದ ಮೂರನೇಯ ಔಷಧಿಯಾಗಿದೆ. ಇದೊಂದು ಮೂರು ಔಷಧಿಗಳ ಸಂಯೋಜನಾ ಕಟ್ಟಳೆ ಮಾದರಿ ಚಿಕಿತ್ಸೆಯ ಉಗ್ರ ಔಷಧಿ ಪ್ರತಿರೋಧಕ ಕ್ಷಯರೋಗವನ್ನು ಗುಣಪಡಿಸುವ ಪ್ರತಿಜೀವಕ ಔಷಧಿಯಾಗಿದೆ.

ಟಿಬಿ ಅಲೈಯನ್ಸ್ ಸಂಸ್ಥೆಯ ಮಾಹಿತಿಗಳು ಚಿಕಿತ್ಸೆಗೊಳಪಟ್ಟ ಪ್ರತಿ 107 ಕ್ಷಯರೋಗಿಗಳಲ್ಲಿ 95 ರೋಗಿಗಳು ಪ್ರಿಟೋಮ್ಯಾನಿಡ್ ಚಿಕಿತ್ಸೆಯಿಂದ ಯಶಸ್ವಿಯಾಗಿ ಗುಣವಾಗಿರುವುದಾಗಿ ಸಂಸ್ಥೆಯ ಕ್ಲಿನಿಕಲ್ ಟ್ರೈಯಲ್ ಫಲಿತಾಂಶಗಳ ವರದಿಯಾಧರಿಸಿ ಹೇಳಿವೆ. ಇದು ಐತಿಹಾಸಿಕ 34 % ಚಿಕಿತ್ಸಾ ಯಶಸ್ವಿ ದರವನ್ನು ಸೂಚಿಸುತ್ತದೆ ಎನ್ನುತ್ತವೆ ಸಂಸ್ಥೆಯ ಮೂಲಗಳು.

ಜಾಗತಿಕ ಆರೋಗ್ಯ ಸಂಸ್ಥೆಯ ಮೂಲಗಳ ಪ್ರಕಾರ 120 ದೇಶಗಳು ವರದಿ ಮಾಡಿರುವಂತೆ ಔಷಧಿ ಪ್ರತಿರೋಧಕ ಕ್ಷಯದ ಚಿಕಿತ್ಸೆಗೆ ಅಸಂಖ್ಯಾತ ಔಷಧಿಗಳನ್ನೊಳಗೊಂಡ ಸಾವಿರಾರು ಮಾತ್ರೆಗಳು ಬಳಸಲಾಗುತ್ತಿದೆ. ಬ್ಯಾಕ್ಟೇರಿಯಾ ಸೋಂಕುಕಾರಕ ರೋಗಗಳು ಪ್ರತಿಜೀವಕ ಔಷಧಿಗಳ ವಿರುದ್ಧ
ಔಷಧಿ ಪ್ರತಿರೋಧಕ ಗುಣ ಬೆಳೆಸಿಕೊಳ್ಳುತ್ತಿದ್ದು ಆ ಕಾರಣದಿಂದ ಸುಲಭವಾಗಿ ಗುಣಪಡಿಸಬಹುದಾದ ಕ್ಷಯವನ್ನೊಳಗೊಂಡಂತೆ ಇನ್ನೂ ಅನೇಕ ಸೋಂಕುಕಾರಕ ರೋಗಗಳು ಗುಣಪಡಿಸುವುದು ಕಷ್ಟಸಾಧ್ಯವಾಗುತ್ತಿದೆ. ಆದ್ದರಿಂದ ಅನೇಕ ಆರೋಗ್ಯತಜ್ಞರು ಪ್ರತಿಜೀವಕ ಔಷಧಿ ನಂತರದ ಕಾಲಮಾನದ ಮೇಲೆ ಕರಿನೆರಳು ಬಿದ್ದು ಅನೇಕ ಸೋಂಕುಕಾರಕ ರೋಗಗಳ ಚಿಕಿತ್ಸೆ ಅಸಾಧ್ಯವಾಗಬಹುದೆಂದು ಎಚ್ಚರಿಸಿದ್ದಾರೆ.

ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯ ಪ್ರಿಟೋಮ್ಯಾನಿಡ್ ಅನುಮೋದನೆಯು ಚೀನಾˌ ಭಾರತ ಮತ್ತು ದಕ್ಷಿಣ ಆಫ್ರಿಕಾದಂತ ದೇಶಗಳು ಕೂಡ ಈ ಔಷಧಿಯನ್ನು ತಮ್ಮ ದೇಶದ ಕ್ಷಯರೋಗಿಗಳಿಗೆ ಲಭ್ಯಗೊಳಿಸಬಹುದೆಂದು ಟಿಬಿ ಅಲೈಯನ್ಸ್ ಸಂಸ್ಥೆಯು ವಿಶ್ವಾಸ ವ್ಯಕ್ತಪಡಿಸಿದೆ.

ಕಳೆದ ಆಗಸ್ಟ್ ತಿಂಗಳ ಪ್ರತಿಷ್ಟಿತ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಷನ್ ನಲ್ಲಿ ಪ್ರಕಟವಾದ ಲೇಖನದಲ್ಲಿ ಅನೇಕ ಆರೋಗ್ಯ ವಿಜ್ಞಾನ ಸಂಶೋಧಕರು ಮತ್ತು ಸೋಂಕುಕಾರಕ ರೋಗಗಳ ತಜ್ಞರು ಔಷಧ ಉತ್ಪಾದನಾ ಕಂಪನಿಗಳು ಅನಗತ್ಯ ಪೈಪೋಟಿಗಿಳಿಯದೆ ಟಿಬಿ ಅಲೈಯನ್ಸ್ ಕಂಪನಿಯಂತೆ ಲಾಭರಹಿತ ಸಂಶೋಧನೆಗೆ ಮಹತ್ವ ನೀಡಬೇಕೆಂದು ಮನವಿ ಮಾಡಿದ್ದಾರೆ.

ಇನ್ನೂ ಕೆಲವು ಆರೋಗ್ಯ ವಿಜ್ಞಾನ ತಜ್ಞರು ಸರಕಾರವು ಈ ತರಹದ ಲಾಭರಹಿತ ಸಂಶೋಧನೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅಮೆರಿಕ ಸರಕಾರವು ಕೈಗೊಳ್ಳುತ್ತಿರುವ ಅತ್ಯುತ್ತಮ ಉತ್ತೇಜನ ಕಾರ್ಯಗಳಿಂದ ಅಲ್ಲಿನ ಔಷಧಿ ಉತ್ಪಾದನಾ ಕಂಪನಿಗಳು 2019 ಮಾರ್ಚ ತನಕ 42 ಪ್ರತಿಜೀವಕ ಔಷಧಿಗಳನ್ನು ಅಭಿವೃದ್ಧಿ ಪಡಿಸಿವೆ. 2004 ರಲ್ಲಿ ಕೇವಲ 6 ಪ್ರತಿಜೀವಕ ಔಷಧಿಗಳನ್ನು ಮಾತ್ರ ಅಭಿವ್ರದ್ಧಿಪಡಿಸಲಾಗಿತ್ತು. ಆದರೆ ಈ ಔಷಧಿ ಮುಖ್ಯವಾದ ಆರೋಗ್ಯ ಸಮಸ್ಸೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿರುವುದು ದುರಂತದ ಸಂಗತಿ.