ಗೋವಾ ಬಿಜೆಪಿ ಶಾಸಕನ ಮೇಲೆ ಅತ್ಯಾಚಾರದ ಆರೋಪ

ಗೋವಾ ಬಿಜೆಪಿ ಶಾಸಕನ ಮೇಲೆ ಅತ್ಯಾಚಾರದ ಆರೋಪ

ಉನ್ನಾವೊ ಪ್ರಕರಣದ ಬಳಿಕ ಇದೀಗ ಮತ್ತೊಬ್ಬ ಬಿಜೆಪಿ ಶಾಸಕ ಅಪ್ರಾಪ್ತೆಯ ಅತ್ಯಚಾರ ಗೈದ ಆರೋಪವನ್ನು ಎದುರಿಸುತ್ತಿದ್ದಾನೆ. ಗೋವಾದ ಪನಾಜಿಯಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾದ ಆಡಳಿತರೋಢ ಬಿಜೆಪಿ ಶಾಸಕ ಅಟಾನಾಸಿಯೊ ಮೋನ್ ಸೆರೆಟ್ ವಿರುದ್ದ ಅತ್ಯಚಾರದ ಅರೋಪ ಸ್ಥಳೀಯ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಕ್ಟೋಬರ್ 17 ರಿಂದ ವಿಚಾರಣೆ ಹೆಚ್ಚುವರಿ ಜಿಲ್ಲಾ ಸೆಷನ್ ನ್ಯಾಯಲಯದಲ್ಲಿ ಪ್ರಾರಂಭವಾಗಲಿದೆ.
 
16 ವರ್ಷದ ಬಾಲಕಿಯನ್ನು ಮಾದಕ ದ್ರವ್ಯನೀಡಿ ಅತ್ಯಾಚಾರವೆಸಗಿದ ಅರೋಪವನ್ನು ಹೊತ್ತಿರುವ ಮೋನ್ ಸೆರೆಟ್ ಮೇಲೆ 2016 ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಯ ಕಾಯ್ದೆಯ ಅಡಿ ಪ್ರಕರಣವನ್ನು ದಾಖಲಿಸಲಾಗಿತ್ತು.

2018 ರ ಪನಾಜಿ ಚುನಾವಣೆಯಲ್ಲಿ ಮೋನ್ ಸರೇಟ್ ಕಾಂಗ್ರೇಸ್ ನಿಂದ ಸ್ಪರ್ಧಿಸಿ ಗೆದ್ದಿದ್ದರು. ಗೋವಾದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದ ಈ ವರ್ಷದ ಜುಲೈನಲ್ಲಿ ಹತ್ತು ಅನ್ಯ ಕಾಂಗ್ರೇಸ್ನ ಶಾಸಕರೊಂದಿಗೆ ಬಿಜೆಪಿಯನ್ನು ಸೇರಿಕೊಂಡಿದ್ದರು.