ಏಕ್ ಲವ್ ಯಾ ಚಿತ್ರಕ್ಕೆ ತಾರಾಮೆರಗು

ಏಕ್ ಲವ್ ಯಾ ಚಿತ್ರಕ್ಕೆ ತಾರಾಮೆರಗು

ರಕ್ಷಿತಾ ಪ್ರೇಮ್ ತಮ್ಮ ರಾಣಾ ಅಭಿನಯಿಸ್ತಿರೋ  ಏಕ್ ಲವ್ ಯಾ ಸಿನಿಮಾ ಸ್ಟಾರ್ ಕಾಸ್ಟ್ ನಿಂದ ಪದೇ ಪದೇ ಸುದ್ದಿಯಾಗ್ತಿದೆ. ಈ ಹಿಂದೆ ಏಕ್ ಲವ್ ನಿರ್ದೇಶಕ ಪ್ರೇಮ್ ಕೊಡವತಿ ರೀಷ್ಮಾ ನಾಣಯ್ಯರನ್ನು ಹೀರೋ ಆಗಿ ಆಯ್ಕೆ ಮಾಡಿದ್ರು. ಅದಾದ ಬಳಿಕ ಡಿಂಪಲ್ ಕ್ವೀನ್  ರಚಿತಾ ರಾಮ್ ಹಾಗೂ ಯಶ್ ಶೆಟ್ಟಿ ಸಿನಿಮಾ ತಂಡಕ್ಕೆ ಎಂಟ್ರಿಯಾಗಿದ್ರು. ಇದೀಗ ಮಾಡೆಲ್  ಅಂಕಿತಾ ನಾಯಕ್ "ಏಕ್ ಲವ್ ಯಾ" ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ರಾಣಾ ಮೂಖ್ಯಭೂಮಿಕೆಯ ಈ ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶನವಿದೆ. ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ.  22 ದಿನಗಳ ಕಾಲ ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಸಿರೋ ಚಿತ್ರತಂಡ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಎರಡನೇ ಹಂತದ ಶೂಟಿಂಗ್ ಮೈಸೂರಿನಲ್ಲಿ ನಡೆಯಲಿದೆ.