ವೇಗ ಹೆಚ್ಚಿಸಿಕೊಂಡಿದೆ ಉತ್ತರ ಕಾಂತೀಯ ಧ್ರುವ!

ವೇಗ ಹೆಚ್ಚಿಸಿಕೊಂಡಿದೆ ಉತ್ತರ ಕಾಂತೀಯ ಧ್ರುವ!

ಉತ್ತರ ಕಾಂತೀಯ ಧ್ರುವ ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಚಲನೆಯಾಗುತ್ತಿದೆ ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಸಜಾತಿಯ ಧ್ರುವಗಳು ಆಕರ್ಷಿತವಾಗಲ್ಲ, ವಿಜಾತಿಯ ಧ್ರುವಗಳು ಆಕರ್ಷಣೆಗೊಳಗಾಗುತ್ತವೆ. ಪ್ರತಿಯೊಂದು ಕಾಂತಕ್ಕೂ(ಮ್ಯಾಗ್ನೆಟ್) ಉತ್ತರ ಮತ್ತು ದಕ್ಷಿಣ ಧ್ರುವ ಇರುತ್ತೆ. ಭೂಮಿ ಕೂಡ ಒಂದು ಕಾಂತ ಎಂಬ ಪ್ರತಿಪಾದನೆಗಳಿವೆ. ಕುರಿಗಾಹಿಯಾಗಿದ್ದ ಮ್ಯಾಗ್ನಸ್ ಎಂಬಾತ ಮೆಗ್ನಿಷಿಯಾ ಸ್ಥಳದಲ್ಲಿ ಇದನ್ನು ಕಂಡುಹಿಡಿದಿದ್ದರಿಂದ `ಮ್ಯಾಗ್ನಟ' ಎಂದೂ, `ಆಯಾಸ್' ಎಂಬ ಕಬ್ಬಿಣ ಅದನ್ನು ಆಕರ್ಷಿಸುವುದರಿಂದ ಆಯಸ್ಕಾಂತ ಎಂಬುದು ಬಂದಿದೆ. ಭೂಮಿ ಗೋಳಾರ್ಧವನ್ನು ದಕ್ಷಿಣ ಮತ್ತು ಉತ್ತರ ಕಾಂತೀಯ ಧ್ರುವಗಳನ್ನಾಗಿಸಲಾಗಿದೆ.  ಭೂ ಮೇಲ್ಮೈ ಗೋಳಾರ್ಧದಲ್ಲಿ ಮಹತ್ವ ಪಡೆದಿರುವ ಉತ್ತರ ಕಾಂತೀಯ ಧ್ರುವ ಕೆನಡಾಡಿಂದ ಸೈಬೀರಿಯಾದೆಡೆಗೆ ಚಲನೆಯಾಗುತ್ತಿರುವ ವೇಗ ಜಾಸ್ತಿಯಾಗಿದೆ ಎಂಬುದು ಇತ್ತೀಚೆಗೆ ವಿಜ್ಞಾನಿಗಳು ಗುರುತು ಮಾಡಿದ್ದಾರೆ.

ವಿಶ್ವ ಆಯಸ್ಕಾಂತೀಯ ಪದ್ದತಿ(ಡಬ್ಲ್ಯುಎಂಎಂ) ಎಂಬ ವೈಜ್ಞಾನಿಕ ಸಂಸ್ಥೆ ಪ್ರತೀ ಐದು ವರ್ಷಕ್ಕೊಮ್ಮೆ ಧ್ರುವಗಳ ಚಲನೆ ಬಗ್ಗೆ ವಿವರಕೊಡುತ್ತೆ. ಅದರಂತೆ 1831 ರಲ್ಲಿ ಧ್ರುವ ಪತ್ತೆಮಾಡಿದಾಗ ಇದ್ದದ್ದಕ್ಕಿಂತ ಈಗ  1400 ಕಿಮೀ ಚಲನೆಯಾಗಿಬಿಟ್ಟಿದೆ. 2000 ಇಸವಿಯಲ್ಲಿ ಚಲನೆಯ ವೇಗ ವರ್ಷಕ್ಕೆ 10 ಕಿಮೀ ಇತ್ತು, ಈಗಿದು ವರ್ಷಕ್ಕೆ 50 ಕಿಮೀ ಆಗಿಬಿಟ್ಟಿದೆ.

ಉತ್ತರ ಆಯಸ್ಕಾಂತೀಯ ಧ್ರುವ ಚಲನೆಯಿಂದಾಗಿ ವಿಮಾನ ನಿಲ್ದಾಣಗಳೂ, ಸ್ಮಾರ್ಟ್‍ಫೋನುಗಳಿಗೆ ಜಿಪಿಎಸ್ ಅಳವಡಿಕೆ, ಸಮುದ್ರಯಾನ ಇತ್ಯಾದಿಗಳೆಲ್ಲದರ ಮೇಲೂ ಬದಲಾವಣೆ ತರುತ್ತೆ. ಇದರಿಂದಾಗಿ ಕಾಂತೀಯ  ಧ್ರುವದ ಚಲನೆ ಕೂಡ, ಇಂದಿನ ವೈಜ್ಞಾನಿಕ ತಾಂತ್ರಿಕತೆಯ ಬಳಕೆಯ ಮೇಲೆ  ಪರಿಣಾಮ ಬೀರುವುದರಿಂದ ಇವುಗಳ ಚಲನೆಯನ್ನು ಅಳೆಯಲಾಗುತ್ತಲೇ  ಇರುತ್ತೆ.