ನಾಳೆಯಿಂದ ಬೆಂಗಳೂರಿನಲ್ಲಿ 2 ದಿನ ಐಸಿಎಸ್‍ಐ ಸಮ್ಮೇಳನ

ನಾಳೆಯಿಂದ ಬೆಂಗಳೂರಿನಲ್ಲಿ 2 ದಿನ ಐಸಿಎಸ್‍ಐ ಸಮ್ಮೇಳನ

ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಇನ್ ಇಂಡಿಯಾದ(ಐಸಿಎಸ್‍ಐ) 20 ನೇ ರಾಷ್ಟ್ರೀಯ ಸಮ್ಮೇಳನ  ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿದ್ದು. ನಾಳೆ ಹಾಗೂ ನಾಡಿದ್ದು ( ಜುಲೈ 5,6) ವಂಡರ್ ಲಾ ರೆಸಾರ್ಟ್ ನಲ್ಲಿ ಆಯೋಜಿಸಲಾಗಿದೆ.  

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದದ ಐಸಿಎಸ್ಐ ಅಧ್ಯಕ್ಷ ಸಿ.ಎಸ್ ರಂಜಿತ್ ಪಾಂಡೆ, ಭಾರತೀಯ ಕಾರ್ಪೋರೇಟ್  ವಲಯದಲ್ಲಿ ಕಾರ್ಯನಿರತರಾಗಿರುವ ವೃತ್ತಿಪರರೆಲ್ಲರ ಉಪಸ್ಥಿತಿಯನ್ನು ನೀರಿಗೆ ಹೋಲಿಸಬಹುದು. ಉದ್ದಿಮೆ ಬದಲಾದಂತೆ ವೃತ್ತಿಪರರು ಬದಲಾಗ್ತಾರೆ. ಕಾನೂನಿನ ಚೌಕಟ್ಟು ಹಾಗೂ ಪ್ರಸ್ತುತ ಸಾಮಾಜಿಕ ರಾಜಕೀಯ ಬದಲಾವಣೆಗಳಿಗೆಕೂಡ ಅವರು ಹೊಂದಿಕೊಳ್ಳುತ್ತಾರೆ. ವೃತ್ತಿಪರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪೆನಿ ಸೆಕ್ರೆಟರಿಗಳು ಹಾಗೂ ಪ್ರಸ್ತುತ ಪ್ರಾಕ್ಟೀಸ್ ಮಾಡುತ್ತಿರುವ  ಕಂಪೆನಿ ಸೆಕ್ರೆಟರಿಗಳಿಗೆ ವೃತ್ತಿಬದುಕಿನಲ್ಲಿ ಉತ್ತಮ ಆಡಳಿತ ಅಂಶಗಳನ್ನು ಅಳವಡಿಸಿಕೊಳ್ಳಲು ಈ ಸಮ್ಮೇಳನ ನೆರವಾಗಲಿದೆ. ಜತೆಗೆ ಈ ಸಮ್ಮೇಳನದಲ್ಲಿ ಕಂಪೆನಿ ಸೆಕ್ರೆಟರಿಗಳ ಕೌಶಲ್ಯವನ್ನು ವೃದ್ಧಿಸುವತ್ತ ಮತ್ತು ತನ್ನ ಸದಸ್ಯರು ತಮಗೆ ಒಪ್ಪಿಸಲಾಗಿರುವ ಹೊಣೆಗಾರಿಕೆಯನ್ನು ಅತ್ಯಂತ ಕ್ಷಮತೆಯಿಂದ ನಿರ್ವಹಿಸುವ ನಿಟ್ಟಿನಲ್ಲಿ ತರಬೇತಿಗೊಳಿಸಲಾಗುತ್ತದೆ ಎಂದರು.

ಈ ವರ್ಷದ ಸಮ್ಮೇಳನದಲ್ಲಿ ಕಾರ್ಪೋರೇಟ್ ವಲಯದಲ್ಲಿ ಉಂಟಾಗುತ್ತಿರುವ ಬದಲಾವಣೆಗಳು ಹಾಗೂ ಎದುರಾಗುತ್ತಿರುವ ಹೊಸ ಸವಾಲುಗಳನ್ನು ಹೇಗೆ ಎದುರಿಸಬಹುದು ಅಂತ ಮಾರ್ಗದರ್ಶನ ನೀಡಲಾಗುತ್ತದೆ. ವೃತ್ತಿ ಪರತೆಯನ್ನು ವಿಸ್ತರಿಸುವ ಅಂಗವಾಗಿ ನಡೆಸುತ್ತಿರುವ ಈ ಸಮ್ಮೇಳನದಲ್ಲಿ ಹಲವಾರು ಕಂಪೆನಿ ಸೆಕ್ರೆಟರಿಗಳು, ಪ್ರಾಕ್ಟೀಸ್ ಮಾಡುತ್ತಿರುವ ಕಂಪೆನಿ ಸೆಕ್ರೆಟರಿಗಳು ವಿವಿಧೆಡೆಯಿಂದ ಭಾಗವಹಿಸಲಿದ್ದಾರೆ. ಇದೇ ಸಮ್ಮೇಳನದಲ್ಲಿ ತಜ್ಞರು, ವೃತ್ತಿಪರರು ಹಾಗೂ ನಿಯಂತ್ರಕ ವಿಭಾಗದಲ್ಲಿನ ತಮ್ಮ ಸಂಬಂಧಿತ ಕ್ಷೇತ್ರಗಳ ಕುರಿತು ವಿಚಾರಗಳನ್ನು ಮಂಡಿಸಲಿದ್ದಾರೆ. ಸಮ್ಮೇಳನದಲ್ಲಿ ಸೆಕ್ರೆಟರಿಯಲ್ ಆಡಿಟ್, ಕಂಪನಿ ಕಾಯ್ದೆಗಳು, ಸೆಬಿ(ನೋಂದಣಿ ಪ್ರಕ್ರಿಯೆ ಮತ್ತು ಪ್ರಕಟಿಸಬೇಕಾದ ಅಗತ್ಯ ವಿಷಯಗಳು) ನಿಯಮಾವಳಿಗಳು, ಸ್ಟಾರ್ಟ್ ಅಪ್ ಕಂಪೆನಿಗಳು, ಕೃತಕ ಬುದ್ಧಿಮತ್ತೆ, ನಿಯಂತ್ರಣ ನಿರೀಕ್ಷೆಗಳು, ಆಡಳಿತ ಹೀಗೆ ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ. ಪ್ರಸ್ತುತ ಐಸಿಎಸ್ಐ ಸಂಸ್ಥೆಯಲ್ಲಿ 58,000ಕ್ಕೂ ಅಧಿಕ ಸದಸ್ಯರು ಹಾಗೂ 3.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ.  

ಐಸಿಎಸ್‍ಐ ಕೌನ್ಸಿಲ್ ಸದಸ್ಯರಾದ ಸಿಎಸ್ ಮನೀಷ್ ಗುಪ್ತಾ, ಸಿಎಸ್ ನಾಗೇಂದ್ರ ರಾವ್, ಸಿಎಸ್ ಪ್ರದೀಪ್ ಕುಲಕರ್ಣಿ ಸೇರಿದಂತೆ ಸಂಸ್ಥೆಯ ಪ್ರಮುಖರು ಭಾಗಿಯಾಗಿದ್ದರು.