ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಯುವರಾಜ್ ಸಿಂಗ್

ಭಾರತದ ಹಿರಿಯ ಆಟಗಾರ ಯುವರಾಜ್‌ ಸಿಂಗ್‌ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ತಮ್ಮ ನಿವೃತ್ತಿ ಘೋಷಿಸಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಯುವರಾಜ್ ಸಿಂಗ್

ಬೆಂಗಳೂರು: ಭಾರತದ ಆಲ್‍ರೌಂಡರ್‍ ಆಟಗಾರ ಯುವರಾಜ್‍ ಸಿಂಗ್‍ ಅಂತರಾಷ್ಟ್ರೀಯ ಕ್ರಿಕೆಟ್‍ನ ಎಲ್ಲಾ ವಿಭಾಗಗಳಿಗೆ ನಿವೃತ್ತಿ ಘೋಷಿಸಿದ್ದಾರೆ.

“ನನ್ನ ಕ್ರಿಕೆಟ್‍ ಪ್ರಯಾಣ ರೋಚಕತೆಯಿಂದ ಕೂಡಿದ ಸುಂದರ ಕತೆಯಾದರೂ ಒಂದು ದಿನ ವಿದಾಯ ಹೇಳಲೇ ಬೇಕಲ್ವೇ?“ ಎಂದು ನಿವೃತ್ತಿ ಘೋಷಿಸಿದ ಕಾರ್ಯಕ್ರಮದಲ್ಲಿ ಯುವರಾಜ್‍ ಹೇಳಿದ್ದಾರೆ.

ಎಡಗೈ ಬ್ಯಾಟ್ಸ್‍ಮನ್‍ ಯುವರಾಜ್‍ ಸಿಂಗ್‍ ಅಕ್ಟೋಬರ್ 2000ನೇ ಇಸವಿಯಲ್ಲಿ ಭಾರತ ಕ್ರಿಕೆಟ್‍ ತಂಡಕ್ಕೆ ಕಾಲಿಟ್ಟಿದ್ದರು. ಯುವರಾಜ್‍ ಇಲ್ಲಿವರೆಗೆ 304 ಏಕದಿನ, 40 ಟೆಸ್ಟ್, 58 ಟ್ವೆಂಟಿ-ಟ್ವೆಂಟಿ ಪಂದ್ಯಗಳನ್ನು ಭಾರತ ತಂಡಕ್ಕಾಗಿ ಆಡಿದ್ದಾರೆ.

38 ರ ಹರೆಯದ ಯುವರಾಜ್‍ ಸಿಂಗ್‍ ತಮ್ಮ ಕ್ರಿಕೆಟ್‍ ಪಯಣದಲ್ಲಿ 8701 ಏಕದಿನ ರನ್‍ ,1900 ಟೆಸ್ಟ್ ಕ್ರಿಕೆಟ್‍ ರನ್‍ ಹಾಗೂ 1177 ಟ್ವೆಂಟಿ-ಟ್ವೆಂಟಿ ರನ್‍ ಗಳಿಸಿದ್ದಾರೆ.

2007ರ ಟಿ-20 ವಿಶ್ವಕಪ್‍ನಲ್ಲಿ ಒಂದು ಓವರ್‍ನ ಎಲ್ಲಾ ಎಸೆತಗಳನ್ನು ಸಿಕ್ಸರ್‍ ಕಳುಹಿಸಿದ ಹೆಗ್ಗಳಿಕೆ ಯುವರಾಜ್‍ ಸಿಂಗ್‍ರದ್ದು.  2011 ರ ವಿಶ್ವಕಪ್‍ನಲ್ಲಿ ಭಾರತದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್‍ ಸಿಂಗ್‍ 8 ಇನ್ನಿಂಗ್ಸ್‍ಗಳನ್ನು ಆಡಿ 15 ವಿಕೆಟ್‍ ಪಡೆದಿದ್ದರು.