ವಿಶ್ವ ಭೂ ದಿನ – ಉಳಿಸುವೆವು ನಾವು

ವಿಶ್ವ ಭೂ ದಿನ – ಉಳಿಸುವೆವು ನಾವು

ಮಹದೇವ ಸಿ.ಕೋಣನೂರು

ಉಳಿಸುವೆವು ನಾವು ನೀರನ್ನು

ಬೆಳೆಸುವೆವು ನಾವು ಕಾಡನ್ನು

ಕರೆತರುವೆವು ನಾವು ಮಳೆಯನ್ನು

ರಕ್ಚಿಸುವೆವು ನಾವು ಜೀವಿಗಳನ್ನು.

 

ನೀರು ಇದ್ದರೆ ನಾವು ಇಲ್ಲಿ

ಕಾಡು ಇದ್ದರೆ ನಾವು ಇಲ್ಲಿ

ಗಾಳಿ ಇದ್ದರೆ ನಾವು‌ ಇಲ್ಲಿ

ಇಲ್ಲದಿದ್ದರೆ ಸಾವೆ ಇಲ್ಲಿ

ಇಲ್ಲದಿದ್ದರೆ ಸಾವೆ ಇಲ್ಲಿ.

 

ಇರುವುದು ಒಂದೇ ಭೂಮಿಯು ನಮಗೆ

ಜೀವ ಸಂಕುಲಕೆ ವರವು ಅದುವೆ

ಉಳಿಸದಿದ್ದರೆ ಪರಿಸರವನ್ನು

ಕಳೆದು ಕೊಳ್ಳುವೆವು ಭೂಮಿಯನ್ನು

ಪಡೆದು ಕೊಳ್ಳುವೆವು ಸಾವನ್ನು

ನಾವು ಪಡೆದು ಕೊಳ್ಳುವೆವು ಸಾವನ್ನು...