ವಿಶ್ವಕಪ್ ಕ್ರಿಕೆಟ್ 2019: ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ರೋಹಿತ್ ಶರ್ಮ ವಿಶ್ವದಾಖಲೆ

ವಿಶ್ವಕಪ್ ಕ್ರಿಕೆಟ್ 2019: ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ರೋಹಿತ್ ಶರ್ಮ ವಿಶ್ವದಾಖಲೆ

ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ರೋಹಿತ್‌ ಶರ್ಮ ಅವರ ವಿಶ್ವದಾಖಲೆಯ ಶತಕ ಹಾಗೂ ಕೆ.ಎಲ್‌. ರಾಹುಲ್‌ ಅವರ ಮೊದಲ ವಿಶ್ವಕಪ್‌ ಶತಕದ ನೆರವಿನಿಂದ ಭಾರತ 7 ವಿಕೆಟ್‌ಗಳ ಜಯ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗಿಳಿದ ಶ್ರೀಲಂಕಾ 264 ರನ್ ಗಳಿಸಿತ್ತು. ಆರಂಭದಲ್ಲಿ ಶ್ರೀಲಂಕಾ ಎಡವಿತ್ತು. 8 ಓವರ್ ನಲ್ಲಿಯೇ ಶ್ರೀಲಂಕಾ ಎರಡು ವಿಕೆಟ್ ಕಳೆದುಕೊಂಡಿತ್ತು. ನಂತ್ರ ಶ್ರೀಲಂಕಾ ಆಟಗಾರರು 264 ರನ್ ಗಳಿಸುವಲ್ಲಿ ಯಶಸ್ವಿಯಾದ್ರು.

ಗುರಿ ಬೆನ್ನು ಹತ್ತಿದ ಭಾರತ 43.3 ಓವರ್ ಗೆ ಮೂರು ವಿಕೆಟ್ ಕಳೆದುಕೊಂಡು 265 ರನ್ ಗಳಿಸಿ ಜಯಸಾಧಿಸಿದೆ.
ರೋಹಿತ್‌ ಶರ್ಮ 94 ಎಸೆತಗಳಿಂದ 103 ರನ್‌ ಬಾರಿಸಿದರು (14 ಬೌಂಡರಿ, 2 ಸಿಕ್ಸರ್‌). ಇದು ಈ ವಿಶ್ವಕಪ್‌ನಲ್ಲಿ ರೋಹಿತ್‌ ಬಾರಿಸಿದ ಸರ್ವಾಧಿಕ 5 ಶತಕಗಳ ವಿಶ್ವದಾಖಲೆ ಬರೆದರು. ಇನ್ನೊಂದೆಡೆ ಕೆ.ಎಲ್‌. ರಾಹುಲ್‌ 111 ರನ್‌ ಸೂರೆಗೈದು ವಿಶ್ವಕಪ್‌ನಲ್ಲಿ ಮೊದಲ ಶತಕ ಸಂಭ್ರಮವನ್ನಾಚರಿಸಿದರು. 118 ಎಸೆತ ಎದುರಿಸಿದ ರಾಹುಲ್‌ 11 ಫೋರ್‌, ಒಂದು ಸಿಕ್ಸರ್‌ ಚಚ್ಚಿದರು. ಇವರಿಬ್ಬರಿಂದ ಮೊದಲ ವಿಕೆಟಿಗೆ 30.1 ಓವರ್‌ಗಳಿಂದ 189 ರನ್‌ ಹರಿದು ಬಂತು. ನಾಯಕ ವಿರಾಟ್‌ ಕೊಹ್ಲಿ ಔಟಾಗದೆ 34 ರನ್‌ ಮಾಡಿದರು.

ಟೀಂ ಇಂಡಿಯಾ ವಿಶ್ವಕಪ್ ನಲ್ಲಿ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದರೂ ಅಂಕಪಟ್ಟಿಯಲ್ಲಿ ಅಗ್ರಪಟ್ಟ ಗುರಿಯಾಗಿರಿಸಿಕೊಂಡು ಅದ್ಭುತ ಪ್ರದರ್ಶನ ನೀಡಿದೆ. ಇದೀಗ ಮಗದೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವು ದಾಖಲಿಸಿದರೆ ಭಾರತ ಅಗ್ರಸ್ಥಾನಕ್ಕೇರಲಿದೆ. ಹೀಗಾಗಿ ಸೆಮಿಫೈನಲ್‌ನಲ್ಲಿ ಭಾರತ ಯಾವ ತಂಡ ಎದುರಿಸಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.