ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಕುಸ್ತಿಪಟು ವಿನೇಶ್ ಫೋಗಾಟ್

ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಕುಸ್ತಿಪಟು ವಿನೇಶ್ ಫೋಗಾಟ್

ನೂರ್-ಸುಲ್ತಾನ್ (ಕಜಕಿಸ್ತಾನ): ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕೆಲವು ಅತ್ಯುನ್ನತ ರಕ್ಷಣಾತ್ಮಕ ಪ್ರದರ್ಶನದೊಂದಿಗೆ ವಿಶ್ವದ ನಂಬರ್ ಒನ್ ಸಾರಾ ಆನ್ ಹಿಲ್ಡರ್  ಬ್ರಾಂಡ್ ಅವರನ್ನು ಸೊಲಿಸಿ, ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಫೋಗಾಟ್ ಪಾತ್ರರಾಗಿದ್ದಾರೆ.

ಮಂಗಳವಾರ ನಡೆದ ಕುಸ್ತಿ ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳೆಯರ 53 ಕೆ.ಜಿ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಾಬಲ್ಯ ಮೆರೆದ ಭಾರತದ ಕುಸ್ತಿಪಟು ವಿನೇಶ್‌ ಫೊಗಾಟ್‌, ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ ಸೋಫಿಯಾ ಮ್ಯಾಟ್ಸನ್ ವಿರುದ್ಧ 12-0 ಅಂತರದ ಭರ್ಜರಿ ಜಯ ದಾಖಲಿಸಿ, ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದರು.

ಮೊದಲು ಮಾಜಿ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತೆ ಉಕ್ರೇನ್‌ನ ಯುಲಿಯಾ ಖಲ್ವಾಡ್ಜಿ ವಿರುದ್ಧ ಫೋಗಟ್ 5-0ರ ಅಂತರದ ಗೆಲುವು ದಾಖಲಿಸಿದ್ದರು. ನಂತರ ವಿನೇಶ್ ಪೋಗಾಟ್ ಜಪಾನ್‌ನ ಮಯು ಮುಕೈದಾ ವಿರುದ್ಧ ಸೋತಿದ್ದರು. ಈ ಸೋಲು ನೂರ್ ಸುಲ್ತಾನ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವ ಭರವಸೆಯನ್ನು ಕೊನೆಗೊಳಿಸಿತು.

ಇದೀಗ ನಡೆಯಲಿರುವ ಕಂಚಿನ ಪದಕದ ಪ್ಲೇ-ಆಫ್ ಹೋರಾಟದಲ್ಲಿ ಗ್ರೀಸ್‌ನ ಎರಡು ಬಾರಿಯ ವಿಶ್ವ ಚಾಂಪಿಯನ್‌ಷಿಪ್ ಪದಕಧಾರಿ ಮರಿಯಾ ಪ್ರೆವೊಲರಕಿ ಸವಾಲನ್ನು ಎದುರಿಸಲಿದ್ದಾರೆ.

ಈ ಕುರಿತು ಮಾತನಾಡಿದ ವಿನೇಶ್ ಫೋಗಟ್, ನಾನು ಟೋಕಿಯೊಗೆ ಹೋಗುತ್ತಿದ್ದೇನೆ ಎಂದು ನನಗೆ ಸಂತೋಷವಾಗಿದೆ. ನನಗೆ ಪದಕ ಪಂದ್ಯವಿದೆ. ನಾನು ಅದನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದಿದ್ದಾರೆ.