ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‍ ಶಿಪ್‍: ಕಂಚಿನ ಪದಕಕ್ಕೆ ತೃಪ್ತಿಪಟ್ಟ ಮೇರಿ ಕೋಮ್

ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‍ ಶಿಪ್‍: ಕಂಚಿನ ಪದಕಕ್ಕೆ ತೃಪ್ತಿಪಟ್ಟ ಮೇರಿ ಕೋಮ್

ಉಡಾನ್ (ರಷ್ಯಾ) ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‍ ಶಿಪ್‍ನ 51 ಕೆ.ಜಿ ವಿಭಾಗದ ಸೆಮಿ ಫೈನಲ್‌ನಲ್ಲಿ ಮೇರಿ ಕೋಮ್ ದ್ವಿತೀಯ ಶ್ರೇಯಾಂಕದ ಟರ್ಕಿಯ ಬುಸೆನಾಝ್ ಕಾಕಿರೊಗ್ಲು ವಿರುದ್ಧ ಸೋಲನುಭವಿಸಿ, ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಇದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೇರಿ ಕೋಮ್‌ಗೆ ಲಭಿಸಿದ 8ನೇ ಪದಕವಾಗಿದೆ.

ಮೂರನೇ ಶ್ರೇಯಾಂಕಿತ ಮೇರಿ ಕೋಮ್ ದ್ವಿತೀಯ ಶ್ರೇಯಾಂಕಿತೆಯಾದ ಕ್ಯಾಕಿರೊಗ್ಲು ಅವರ ವಿರುದ್ಧ 1-4 ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.  ಆರು ವಿಶ್ವ ಪ್ರಶಸ್ತಿಗಳಲ್ಲದೆ, ಒಲಿಂಪಿಕ್ ಕಂಚಿನ ಪದಕ (2012), ಐದು ಏಷ್ಯನ್ ಪ್ರಶಸ್ತಿಗಳು, ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳು ಮತ್ತು ಹಲವಾರು ಅಂತರರಾಷ್ಟ್ರೀಯ ಉನ್ನತ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.