ಎಣ್ಣಿ ಮಂತ್ರಿ ಹೆಣ್ಮಕ್ಕಳು  ಕೊಟ್ಟಿರೋ ಡೋಜಿನಿಂದ  ಇನ್ನು ಒಂದ್ ವರ್ಷ ಉಚಿಗೊಳ್ಳತಾನ. ... !

ಎಣ್ಣಿ ಮಂತ್ರಿ ಹೆಣ್ಮಕ್ಕಳು  ಕೊಟ್ಟಿರೋ ಡೋಜಿನಿಂದ  ಇನ್ನು ಒಂದ್ ವರ್ಷ ಉಚಿಗೊಳ್ಳತಾನ. ... !

ನಿಲ್ಲೋ.... ಬಸಣ್ಣಾ ಯಾಕ ಹಂಗ್ಯ ಅವಸ್ರ್ದಾಗ ಹೊಂಟೀದಿ....? ಗಣಪತಿ ಹಬ್ಬದಾಗಿನ ಕಡ್ಬು ಇನ್ನು ಕರಗಿಲ್ಲನೂ.....?. "ಹೋದ ಬೇಸ್ತ್ಯಾರ್ ರೇಣಾಕಾಚಾರೀನ್ ಕರ್ಕೋಂಡ್ ಬರ್ತನೀ , ನಮ್ಮ ತಾಲೂಕಿನ್ಯಾಗ ಮತ್ತ ಹೊಳಿ ಬಂದೈತಿ ಅಂತ್ ಹೇಳಿಹೋದ ಆಸಾಮಿ ನಾಪಾತ್ತೆ ಆಗಿಬಿಟ್ಟೀ"....! ಏನ್ ನಿನ್ನ ಹಕಿಕತ್ತು..? ರೇಣುಕಾಚಾರಿ ಭಟ್ಯಾಗಿತ್ತೋ... ಇಲ್ಲೋ..?

ಹೌದ್ರೀ...ಕಾಕಾ ರೇಣುಕಾಚಾರಿನ ಭಟ್ಟಿಆಗಾಕ್ ಅಂತ್ ಹೊನ್ನಾಳಿಗೆ ಹೋಗಿದ್ದೆ, ಅಷ್ಟರಾಗ್ ಅವ್ರೂ ಬೆಂಗಳೂರ್ಗೆ ಹೋಗ್ಯಾರ ಅಂತ್ ಗೊತ್ತಾತು.....ಅಲ್ಗೆ ಹೋದ್ರ "ರೇಣುಕಾಚಾರಿನ ಸಿಎಮ್ ಸಾಹೇಬ್ರು ತಮ್ಮ ರಾಜಕೀಯ ಕಾರ್ಯದರ್ಶಿ ಮಾಡಿ" ತಗೋ ತಮ್ಮ ನಿಂಗೂ  ಒಂದ್ "ಗೂಟದಕಾರು, ಮ್ಯಾಲ್ ವಿಧಾನಸೌಧದಾಗ ಒಂದ ಕಚೇರಿ, ಒಂದಿಷ್ಟ ಸಿಬ್ಬಂದಿ, ಕ್ಯಾಬಿನೆಟ್ ದರ್ಜೆ ಸ್ಥಾನ, ಮ್ಯಾಲೇ ಮಾನ" ಕೊಟ್ಟು ಇನ್ನರ್ ಸುಮ್ಕ ಇರಪ್ಪಾ ಅಂತ್ ಕಿವಿ ಹಿಂಡಿ ಹೇಳಿ ಕಳ್ಸ್ಯಾರಂತ್ ನೋಡ್ರೀ...?.

ಭಾರೀ ಆತಲ್ಲಲೇ ಇದು.... "ಅಂತು-ಇಂತು ಹೊನ್ನಾಳಿ ಹೋರಿಕರಕ್ಕ ಒಂದ್ ಹುದ್ದೆ ಸಿಕ್ಕಂಗ್ ಆತಲ್ಲಲೇ"....!, ರೇಣುಕಾಚಾರಿ ಹೊನ್ನಾಳಿಯಿಂದ್ ಬೆಂಗಳೂರ್ಗೆ ಹೆಂಗ್ಯ ಹೋಗಿತ್ತಂತ್.....?. "ಕಾರಿನ್ಯಾಗ ಹೋಗಿತ್ತ...  ಹಿಡ್ದ ಮಳೆ ಬಿಟ್ಟಿಲ್ಲಾ..... ಮಳಿ ನೀರಾಗ ತೆಪ್ಪಾ ಹುಟ್ಟುಹಾಕ್ಕೊಂತ್ ಹೋತ ಹೆಂಗ್ಯ.".?

"ಅದೇಂಗ್ ರಸ್ತೆದಾಗ ತೆಪ್ಪಾ ಹುಟ್ಟು ಹಾಕ್ಕೊಂಡು ಹೋಗಾಕ್ ಆಕೈತ್ರೀ"..? ನೀವು ಹಂಗ್..... ನಾಲ್ಕ ಅಲ್ರೀ....ಎಂಟ್‍ಗಾಲಿ ಕಾರಿನ್ಯಾಗ ಹೋಗಿತ್ರೀ..!. ಆದ್ರ ನನ್ಗ ಅದ್ನ ಭೇಟ್ಟಿ ಆಗಾಕ ಆಗಲಿಲ್ರ ನೋಡ್ರೀ....? "ವಿಧಾನಸೌಧಕ್ಕ ಪ್ರವೇಶ ಇಲ್ಲ ಆಂತ್ ಪೊಲೀಸ್ರೂ ಗೇಟ್ ಹತ್ರಾನ ತಡ್ದು'!, ನೋಡ್ಪಾ ಬಸಣ್ಣ ನೀನು ನಿಮ್ಮ ಊರಾಗ ನೀ ದೊಡ್ಡ ವ್ಯಕ್ತಿ ಇರ್ಬಹುದು, "ಆದ್ರ ನಮ್ಮ ಊರಾಗ ಪಾಸ್ ಇದ್ರ ಅಷ್ಟ ನೀ ಪಾಸ್...., ಪಾಸ್ ಇಲ್ಲಾಂದ್ರ ನೀ ಫೇಲ್" ಅಂತ್ ಪಾಸ್ ತಗೋಂಬಾ ಅಂತ ಅಂದ್ರು..... "ಅದು ಹಳ್ದಿ ಪಾಸು, ಕರೆ ಪಾಸು, ಕೆಂಪನ್ ಪಾಸು, ಯಲೋಪಾಸು ಅ-ಪಾಸು-ಇ ಪಾಸು ಅಂತ್ ವಿಧಾನಸೌಧದ ಒಳ್ಗ ಬೀಡಾಕ ನೋರಾ ಎಂಟ್ ಪಾಸ್ ಕೇಳಾಕ ಹತ್ತಿದ್ರು".....! ಈಸೌಧದ ಸಹವಾಸಾನ್ ಬ್ಯಾಡ್ ಅಂತ್ ಊರುಕಡಿಗೆ ಬಂದೆ ನೋಡ್ರೀ....!

"ಹೌದು ಊರಕಡಿಗೆ ಬಂದವಾ ಹಿಂಗ್ಯಾಕ ಬಯಲಕಡಿಗೆ ಹೊಂಟೀದಿ"....!. ಬಾ ಇಲ್ಲೇ, ಅದೇನಾತು ಅನ್ನೋದನ್ನ ಬಿಡ್ಸಿ ಹೇಳಿ ಹೋಗುವಂತಿ ಬಾ....

ನಿಮ್ಮದೇನ್ರೀ ಕರ್ಮಾ...! ನಾನು ಅರ್ಜಂಟಾಗಿ ತಾಂಡೇದಕಡಿಗೆ ಹೋಗ್ಬೇಕು, "ಹಾಲು ಕೊಟ್ಟಂಗ್  ತಾಂಡೇದಾಗಿನ ಮನಿ-ಮನಿಗೆ ಎಣ್ಣಿ ಕಳ್ಸಿಕೊಡ್ತವಿ ಅಂತ್ ಆ ಎಣ್ಣಿ ಮಂತ್ರಿ  ಹೇಳ್ಯಾನ್"! . ಅರ್ಜಂಟಾಗಿ ಈರಪ್ಪನ್ ಭೇಟ್ಟಿ ಆಗಬೇಕು, ನಿಮ್ಮನ್ನ ನಾಳೆ ಭೆಟ್ಟಿ ಆಕ್ಕೇನಿ....

ಲೇ...ಲೇ ಅವ್ಸರಗೇಡಿ ಬಸ್ಯಾ, ತಡಿಯಲೇ....ನೀ ಈರಪ್ಪ ಲಮಾಣಿ  ಬೆಟ್ಟಿ ಆಗಾಕ ಹೊಂಟಿ ಹೌದಲ್ಲ...?

ಹೌದ್ರೀ...ಹೌದು.... ಅವನ್ ನಾ ಭಟ್ಟಿಆಗಾಕ ಹೊಂಟಿದ್ದೇ......!

ಏ...ಬಾರೋ ಇಲ್ಲೆ, ಇದೀಗರ.... "ಈರಪ್ಪ ಹತ್ತಾರಮಂದಿನ ಜೀಪನ್ಯಾಗ ಕರ್ಕಂಡೋ ಹಾವೇರಿ ಕಡಿಗೆ ಹೋದಾ..., ಅಲ್ಲೇನ ಡಿಕೆಶಿನ ಅರೇಷ್ಟ ಮಾಡಿರೋದನ್ನ ಖಂಡ್ಸಿ ಹರ್ತಾಳಾ ಮಾಡ್ತಾರಂತ್. ಇವ್ನು ಹರ್ತಾಳಾ ಮಾಡಾಕಂತ್ ಜೀಪಿನ್ಯಾಗ್ ಕೈಮಾಡ್ತಾ ಹಾವೇರಿ ಪ್ಯಾಟಿಕಡಿಗೆ ಹೋದಾ ನೋಡು'. ಹೌದು ಈರಪ್ಪನ್ ಭೇಟ್ಟಿ ಆಗುವಂತಾ ರಾಜಕಾರ್ಯಾ ಏನಿತ್ಪಾ ಅಂತಾದ್ದೂ...?

ರಾಜಾನ ಕಾರ್ಯಾ ಅಲ್ರೀ ಅದು... , ಜೀವಾ ಉಳ್ಸೋ ಕಾರ್ಯಾ..?.  "ಅಲ್ರೀ... ಈಮಾನಗೇಡಿ ಏಣ್ಣಿ ಮಂತ್ರಿಗೆ ಸ್ವಲ್ಪನಾ ಮಾನಾ-ಮರ್ಯಾದಿ ಐತೇನ್ರೀ... ಇದ್ಕ" !. "ಇದ್ರ ಮುಸಡ್ಯಾಗ ಮದ್ದ ಅರೀಯಾ"?. ಅಲ್ರೀ ಮೊದ್ಲ ಬರಾ, ಆಮ್ಯಾಲ್ ಸಿಕ್ಕಾಪಟ್ಟೆ ಮಳಿ ಬಂದು ಇದ್ದ-ಬದ್ದ ಬೆಳೆಎಲ್ಲಾ ಹಾಳಾಗಿ ಹೋಗ್ಯಾವೂ!. "ಇರೋ ಬರೋ ಬೆಳಿನ ಉಳ್ಸಿಕೊಳ್ಳಾಕ ನಮ್ಮ ರೈತ್ರು ಮನ್ಯಾಗ ಹೆಂಡ್ರ ಕೊಳ್ಳಾಗಿನ ತಾಳಿಸರಗಳ್ನ ಬ್ಯಾಂಕಿನ್ಯಾಗ ಅಡವಿಟ್ಟು ಸಾಲ ತಗೋಂಡ್ ಬಂದು ಯೂರಿಯಾ ಗೊಬ್ರಾ ತಂದು ಗೊಂಜಾಳ, ಹತ್ತಿ ಬೆಳಿಗೆ ಹಾಕ್ಯಾರ್'. ಮಳಿ ನೋಡಿದ್ರ ಒಂದ್ ಸಮ್ನಾ ಹಿಡ್ಕೊಂಡಿದ್ದು ಬಿಡಾಕ ಒಲ್ದು...!. ಇಂತಾದ್ರಾಗ "ತಾಂಡೆದಾಗಿನ ಮನಿ, ಮನಿಗೆ ಹಾಲ ಕೊಟ್ಟಂಗ್ ಎಣ್ಣಿ ಕೊಡ್ತವಿ" ಅಂತ್  ಹೇಳ್ಕಿ ಕೊಟ್ಟಾನಲ್ಲ..... ಇವ್ಗ ಹೆಂಗ್ಯ ಹೆಟ್ಟಬೇಕು ಅನ್ನೋದು ಗೊತ್ತಾಗವಲ್ದು ನೋಡ್ರೀ..!.

ಅಲ್ಲೋ ನಿಯಾಕ ಹೆಟ್ಟಾಕ್  ಹೊಕ್ಕಿ ಅವಗ್?, "ಹೆಣ್ಮಕ್ಕಳು ಸಗಣಿ ತಗೋಂಡು ಕುಳ್ಳತಟ್ಟಿದಂಗ್ ತಟ್ಯಾರಲ್ಲ ಸಾಕು ಬಿಡೂ.  ಅವ್ರೂ ಕೊಟ್ಟಿರೋ ಡೋಜಿನಿಂದ ಆ ಮಂತ್ರಿ ಇನ್ನು ಒಂದ್ ವರ್ಷ ಉಚಿಗೊಳ್ಳತಾನ್ ಅವ್ರ ಹೊಡ್ತಾನ ಸುದಾರ್ಸಿಕೊಳ್ಳಾಕ ಅವಂಗ್ ಒಂದ ವರ್ಷ ಬೇಕು"!. 'ಇನ್ ನೀನೂ ಹೋಗಿ ಅವಂಗ್ ಡೋಜ್ ಕೊಟ್ರ ಅವ್ನ ಗತಿ ಏನಾಗಬೇಕು"?. ಹಾಳಾಗಿ ಹೋಗ್ಲಿ ಬಿಡೂ...!

ಇವ್ರೇಲ್ಲೆ ಹಾಳಾಗಿ ಹೊಕ್ಕಾರೀ.... ಇವ್ರ ಚರ್ಮಾ ದಪ್ಪ ಇರತೈತಿ!. ಯಾರರ ಮನಿನ ಹಾಳಾಮಡ್ತಾರ ಇವ್ರು?. ಅದ್ಕ ಈರಪ್ಪನ್ ಕಂಡ್ "ತಾಂಡೇದಾಗ ಎಣ್ಣಿ ಬರಾಕ ಅವಕಾಶ ಕೊಡಬ್ಯಾಡ್ರೀ" ಅಂತ್ ಹೇಳ್ಯಾಕ್ ಅರ್ಜೇಂಟಾಗಿ ಹೊಂಟಿದ್ದೆ, ಅಷ್ಟರಾಗ್ ನೀವು ನನ್ನ ಕರ್ದು ಈರಪ್ಪ ತಾಂಡೇದಾಗ್ ಇಲ್ದ ವಿಷ್ಯಾ ತಿಳ್ಸಿ ಒಳ್ಲೇದ ಮಾಡಿದ್ರೀ.... ನೋಡ್ರೀ. ಅವ್ನ ಊರಿಗೆ ಹೋಗಿ ಹಂಗ್ ಬರಬೇಕಾಗಿತ್ತು.... 

ಆತು ಬಿಡ್ಪಾ, ಅವ್ರ್ಸಗೇಡೀ..."ಮತ್ತೇನ್ಪಾ ನಿಮ್ಮ ಗೌರ್ನಮೆಂಟ್ ಟೇಕಾಪ್ ಆಗಿಲ"್ಲ ಅಂತ್ ಸಿದ್ರಾಮಣ್ಣ ಹೇಳಾಕಹತ್ತೇತಂತ್!. ನಿಮ್ಮ "ಸಿಎಂಗ ಪ್ರಧಾನಮಂತ್ರಿ ಹತ್ರಾ ಗಟ್ಟಸಿ ಮಾತಾಡೋ ಧೈರ್ಯಾನ ಇಲ್ಲಾ"!. "ಮೋದಿ ಸಾಹೇಬ್ರು ಬೆಂಗಳೋರ್ಗೆ ಬಂದ್ರು,   ನಿಮ್ಮ ಸಿಎಂ ಯಡೆಯೂರ್ಸು ಮತ್ತ ಅವ್ರ ಸಂಪುಟದ ಮಂತ್ರಿಗಳೆಲ್ಲಾ ಕೈಕಟ್-ಬಾಯಿಮುಚ್ ಅನ್ನೊಹಂಗ್ ಇದ್ರಂತ್" ಯಾಕ....?

ಹೌದ್ರೀ ಕಾಕಾ "ಈ ಸಿಎಂ, ಈ ಮಂತ್ರಿಗಳನ್ನ ನೋಡಿದ್ರ ಸಿದ್ರಾಮಣ್ಣ ಹೇಳೋದ್ರಾಗ ಕರೆ ಐತಿ ಅಂತ್ ಅನಸಾಕ ಹತ್ತೇತಿ"!. "ಆರಂಭದಾಗ ಅಗ್ಸಾ ಹರ್ಯಾರಿ ಒಗ್ದನಂತ್" ಅನ್ನೋಹಂಗ್ ಜಿಗಜಿಗ್ದು ಈ ಮಂತ್ರಿಗಳು ಅತೀವೃಷ್ಠಿಯಿಂದಾ ಹಾನಿಯಾಗಿರೋ ಪ್ರದೇಶಕ್ಕ ಭೇಟ್ಟಿಕೊಟ್ಟು ಸಂತ್ರಸ್ತ ಜನಗಳಿಗೆ "ನಿಮ್ಗ ಮನಿಕಟ್ಟಿಸಿ ಕೊಡ್ತವಿ, ನಿಮ್ಗ ಊಣ್ಣಾಕ ಹಾಕತೇವಿ", "ನಿಮ್ಮ ಮಕ್ಕಳಿಗೆ ಶಾಲಿ ಕಟ್ಟಿಸಿ ಕೊಡ್ತವಿ ಅಂತ್" ಹೇಳಿ ಬಂದರೋ ಮತ್ತ ಆಕಡಿಗೆ ತಲಿಹಾಕಿ ಮಲಗಿಲ್ಲಾ!. ಅಲ್ಲೆ ನೋಡಿದ್ರ "ಮತ್ತ ಮಳಿ ಬಂದು ಹೊಳಿಗೆ ಪ್ರವಾಹ ಬಂದು ನದಿ ನೀರು ಜನ್ರ ಬಾಳೆನ ಮುರಾಬಟ್ಟಿ ಮಾಡೇತಿ". ಆದ್ರ "ಈ ಮಂತ್ರಿಗಳೂ ಜನ್ರ ಕಷ್ಟಕ್ ಆಗೋದ್ ಬಿಟ್ಟು ಒಬ್ರಮ್ಯಾಗ ಒಬ್ರು ರಾಡಿ ಚಲ್ಲಿಕೋತ ಹೊಂಟಾರ್ ನೋಡ್ರೀ"...?

ಹೌದೋ ನೀ ಹೇಳೋದ್ರಾಗೂ ಖರೆ ಐತಿ ನೋಡೂ !!. ಮೊನ್ನೆ ಚಂದ್ರನ್ ಮ್ಯಾಗ ರಾಕೇಟ್ ಇಳ್ಸೋದನ್ ನೋಡಾಕ ನಮ್ಮ ಪ್ರಧಾನಮಂತ್ರಿ ಮೋದಿ ಸಾಹೇಬ್ರು ಬೆಂಗಳೂರ್ಗೆ ಬಂದಿದ್ದ್ರಲ್ಲ,  ಆವಾಗ ಅವ್ರನ್ ಭೇಟ್ಟಿಯಾಗಿದ್ದ ಸಿಎಂ ಯಡೆಯೂರ್ಸು ಮತ್ತ ಅವರ ಕ್ಯಾಬಿನೇಟ್ ಮಂತ್ರಿಗಳು ರಾಜ್ಯದಾಗಿನ ಪ್ರವಾಹದ ಬಗ್ಗೆ ತುಟಿಪಿಟಿಕ್ ಅಂದಿಲ್ಲಂತ್!!!. ಮೋದಿ ಸಾಹೇಬ್ರು ಬಂದಾಗ್ ಅವ್ರ ಕೈಗೆ ಹೂವಿನ ಗುಚ್ಚಾಕೊಟ್ಟು ಬರಮಾಡಿಕೊಂಡವ್ರೂ , "ಮೋದಿ ಸಾಹೇಬ್ರು ಹೋಗೋ ಹೊತ್ತಿನ್ಯಾಗ ಹಲ್ಲಗಿಂಜಿಕೋತ ಅವ್ರನ್ ಹೋಗಿ ಬರೀ ಸಾಹೇಬ್ರ ಅಂತ್ ಬಿಳ್ಕೋಟ್ಟಾರ". ಅಲ್ಲೋ ಇವ್ರೇನೋ, ಅವ್ರಿಗೆ ಹೆದ್ರೀ ಏನೂ ಕೇಳಂಗಿಲ್ಲಾ!. ಆದ್ರ ಅವ್ರರ ಕೇಳಬೇಕಿತ್ತು... "ಹೆಂಗೈತಪಾ ರಾಜ್ಯದಾಗಿನ ಪ್ರವಾಹ,  ಸ್ಥಿತಿ-ಗತಿ. ಎಲ್ಲಾನು ಸರಿ ಐತೋ".. ಅಂತ್. ಆದ್ರ "ಮೋದಿ ಸಾಹೇಬ್ರೀಗೆ ಪುರಸೊತ್ತ ಇರ್ಲಿಲ್ಲಾಂತ್ ಕಾಣತೈತಿ"!. "ಚಂದ್ರಯಾನಕ್ಕ ಸ್ವಲ್ಪ ಅಡ್ಡಿ ಆಗಿದ್ಕ  ಅವ್ರು ವಿಜ್ಞಾನಿಗಳ್ನ ತಬ್ಬೊಂಡು ಅವ್ರಿಗೆ ಸಮಾದಾನ ಹೇಳ್ಯಾರ್".   "ಅದ್ ವೇಳ್ಯಾದಾಗ ಸ್ವಲ್ಪ ಟಾಯಿಮ್ ಮಾಡಿಕೊಂಡು ಪ್ರವಾಹ ಸಂತ್ರಸ್ತರನ್ನ ಕಂಡು ಅವ್ರನ್ನ ತಬ್ಬಕೋಳ್ಳದ್ ಬ್ಯಾಡ್! ಕನಿಷ್ಠ ದೂರದಿಂದಾದ್ರೂ  ಅವ್ರ ಕಷ್ಟಾನ ಕೇಳಿದ್ರ ಸಾಕಾಗಿತ್ತು"!. ಇದ್ನ ನೋಡಿದ್ರ  "ಈ ಬಡಪಾಯಿ ರೈತರ ಮ್ಯಾಲ್, ಮನಿ-ಮಠ ಕಳ್ಕೋಂಡಿರೋ ಜನಗಳಮ್ಯಾಲ್ ಇವ್ರ ಕಾಳ್ಜಿ ಎಂತಾದ್ದು ಅನ್ನೋದು  ಮೇಲ್ನೋಟಕ್ಕ ಗೊತ್ತಾಕ್ಕೈತಿ ಬಿಡೂ".

ಅಲ್ರೀ ಕಾಕಾ. "ರಾಜ್ಯದಾಗ ಅವ್ರದ್ದ ಸರ್ಕಾರ ಐತಿ..ಹೆಂಗ್ಯೂ ಜನ್ರ ಕಷ್ಟಕ್ಕ ಸ್ಪಂದಸತಾರ ಅಂತ್ ಮೋದಿ ಸಾಹೇಬ್ರು ಹಂಗ ಹೋಗಿರಬೇಕು'!, ಮುಂದ ಮತ್ತ ಯಾವಾಗರ ಅವ್ರಿಗೆ ಬಿಡ್ವು ಸಿಕ್ರ ಅವ್ರು ಬರ್ತಾರ ಬೀಡ್ರೀ.?

ಆತ ಬೀಡ್ಪಾ ಅವ್ರಿಗೆ ವೇಳ್ಯಾ ಸಿಕ್ಕಾಗ ಅವ್ರು ಬರ್ಲೀ.! ಇದೇನೋ ನಿಮ್ಮ "ಈಶರಪ್ಪಗ ಏನಾಗೇತಿ?. ಅದ್ಯಾಕ ಹಂಗ್ ಹೇಳ್ಕಿ ಕೊಡತೈತಿ"?... "ಅಲ್ಲಾ ಕಷ್ಟದಾಗಿರೋ ಜನ್ರ ಇನ್ನು ಹೆಚ್ಚಿನ ಸಹಾಯ ಮಾಡ್ರೀ ಅಂತ್ ಕೇಳೋದು ತಪ್ಪನೂ"..? ಜನಾ ಕೇಳ್ಯಾರ, ಆದ್ರ ಈ ಮನ್ಷಾ "ಈಗ ಕೊಟ್ಟಿರೋ ಹತ್ತಸಾವ್ರಾನ್ ಹೆಚ್ಚಾಗೇತಿ" ಅಂತ್ ಹೇಳೇತಿ. ಅದ್ಕ "ಜನಾನು ಈಶ್ವರಪ್ಪನ ಕಾರಿಗೆ ಗುದ್ದಿ, ನೀ ಏನ್ ನಿಮ್ಮ ಮನಿಂದ ಕೋಡಂಗಿಲ್ಲ.. ಸರ್ಕಾರದಿಂದ ಕೊಡ್ತಿದಿ" ಅಂತ್ ಈಶ್ವರಪ್ಪನ ಕಾರು ತಡ್ದು ಧಿಕ್ಕಾರ ಕೂಗ್ಯಾರ್ ಇದು ಬೇಕಾಗಿತ್ತ ಇದ್ಕ!.

"ಸುಮ್ನ ಇರ್ಲಾರ್ದ ಇರುವಿ ಬಿಟ್ಕೊಂಡ್ರು ಅಂತಾರಲ್ಲ" ಇದ್ಕ ನೋಡ್ರೀ. ಇದರ್ದು ಒಂದ್ ಕಡೆಯಾದ್ರ ಈ ಲಾ ಮಿನಿಸ್ಟರ್ ಮಿಸ್ಟರ್ ಮಾದುಸ್ವಾಮಿ ನೋಡ್ರೀ... ಅದು ಹೆಂಗ್ ಆಡೇತಿ.. ಅಲ್ಲಾ ಆ "ಡಿಸಿಎಂ ಸವ್ದಿ ಸಾವ್ಕಾರು, ವಿಧಾನಸೌಧದ ಒಳ್ಗ ನೀಲಿ ಚಿತ್ರ ನೋಡಿದ್ದು ದೇಶದ್ರೋಹಾ ಅಲ್ಲಾ ಅಂತ್" ಅದ್ನ ಸಮರ್ಥಿಸಿಕೊಂಡೈತಿ. "ಇವ್ಗೇನೂ ತಲಿ ಸರಿ ಐತೋ... ಇಲ್ಲೋ ಒಂದು ಗೊತ್ತಾಗವಲ್ದು ನೋಡ್ರೀ.!.

"ತಲಿಯಾಕ ಸರಿಯಿಲ್ಲೋ...  ಅವ್ರ ತಲಿ ಸರಿನ ಇರತೈತಿ'!. "ಕೆಟ್ಟಿರೋದು ಜ್ರನ ತಲಿನೋ ತಮ್ಮಾ... ಜನ್ರ ತಲಿ'. "ಇವ್ರ ಅಧಿಕಾರ್ದಾಗ ಇದ್ದಾಗ ಒಂದ್ ನಮೂನಿ ಮಾತಾಡ್ತಾರ್, ಅಧಿಕಾರ ಇಲ್ದಾಗ ಒಂದ್ ನಮೂನಿ ಮಾತಾಡ್ತಾರ್". ಅಂದಗ್ ಡಿಕೆಶಿ ಕೇಸ್ ಎಲ್ಗೆಬಂತ್ಪಾ. 

"ಇನ್ನು ಎಲ್ಗಿ ಬಂದಿಲ್ರೀ. ಅದು ದಿಲ್ಯಾಗ ಅಲ್ಗೆ ನಿಂತೈತಿ". "ಸ್ಟ್ರೈಕ್ ಮಾಡೋರು ಎಷ್ಟಂತ್ ಹೊಯ್ಯಕೊಳ್ಳತಾರಾ. ಕೂಗಾಡಿ.. ಕೂಗಾಡಿ ಅವ್ರಿಗೂ ಸಾಕಾಗಿ ಸುಮ್ನ ಆಗ್ಯಾರ್"! "ಅತ್ಲಾಗ ದಿಲ್ಲಿಯೋಳ್ಗ ಡಿಕೆಶಿ ಇಡಿ ಜೇಲಿಂದ್ ಹೊರ್ಗ ಬರಕಾ ಬೇಲಿಗೆ ಪ್ರಯತ್ನಾ ನಡೆಸೇತಿ". "ಇತ್ಲಾಗ ಉಪಚುನಾವಣೆಗೆ ಪ್ಯಾಂಟ್‍ಲೆಸ್ ಪಕ್ಷದವ್ರು, ತಯಾರಿನಡಸ್ಯಾರ್" ನೋಡ್ರೀ. ಆತು ಬಿಡ್ಪಾ ಒಟ್ಟಿನ್ಯಾಗ್ ಮನಿ ಮನಿಗೆ ಎಣ್ಣಿ ನೀಡೋ ಸ್ಕೀಮ್ ಸದ್ದಕಂತು ಬಂದಾಗೇತಿ. ಮುಂದ್ ಮತ್ತೇನು ಬರತೈತೋ ಏನೋ ನಡಿ...ನಡಿ ಮಳಿ ಹಿಡಿದೈತಿ ಲಗೂ ಮನಿಗೆ ಹಗೋಣು ನಡಿ...ಎನ್ನುತ್ತಾ ಇಬ್ರು ತಮ್ಮ ಮಾತಿಗೆ ವಿರಾಮ ನೀಡಿದರು.