“ನೀವು ಇಲ್ಲಾಂದ್ರೆ ನಾವು ಏನು ಅಲ್ಲ”: ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ವಿರಾಟ್ ಕೊಹ್ಲಿ

“ನೀವು ಇಲ್ಲಾಂದ್ರೆ ನಾವು ಏನು ಅಲ್ಲ”: ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ವಿರಾಟ್ ಕೊಹ್ಲಿ

ಬೆಂಗಳೂರು: ‘ಈ ಬಾರಿಯಾದರೂ ಕಪ್ ನಮ್ಮದಾಗುತ್ತೆ’ ಎಂಬ ನಂಬಿಕೆಯಲ್ಲೇ ಇದ್ದ ತನ್ನ ಅಭಿಮಾನಿಗಳನ್ನು  ಆರ್ ಸಿ ಬಿ ಬಳಗ ನಿರಾಶೆಗೊಳಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಬಂದು ನಿಂತು, ಹೀನಾಯ ಸ್ಥಿತಿಯಲ್ಲಿ 2019ರ ಐಪಿಎಲ್ ಸರಣಿಯಿಂದ ಹೊರನಡೆದಿದೆ.

ಸರಣಿಯಿಂದಲೇ ಹೊರ ಬಂದಿರುವ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿ ಬಿ) ತಂಡದ ನಾಯಕ ವಿರಾಟ್ ಕೊಹ‍್ಲಿ, ಈ ಕುರಿತು ಟ್ವೀಟ್ ಮಾಡಿದ್ದು, “ನೀವು ಇಲ್ಲಾಂದ್ರೆ ನಾವು ಏನು ಅಲ್ಲ” ಎಂದು ಸತತ ಸೋಲಿನ ಬಳಿಕವು ಆರ್ ಸಿಬಿಯ ತಂಡದ ಬಗ್ಗೆ ಅಪಾರ ಅಭಿಮಾನ, ಪ್ರೀತಿ ಇಟ್ಟುಕೊಂಡೇ ಇರುವ ಅಭಿಮಾನಿಗಳನ್ನು ಇನ್ನಷ್ಟು ಹುರಿದುಂಬಿಸಿ, ಅವರು ನೀಡಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಹಾಗೆ “ ನಮಗೆ ಪ್ರೀತಿ ತೋರಿಸಿದ ಹಾಗೂ ನಮ್ಮನ್ನು ಬೆಂಬಲಿಸಿರುವ ಪ್ರತಿ ಒಬ್ಬ ಅಭಿಮಾನಿಗೂ, ಎಲ್ಲಾ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ,  ಮುಂದಿನ ಸಾರಿ ಇನ್ನಷ್ಟು ಬಲಿಷ್ಟವಾಗಿ ವಾಪಸ್ ಬರುತ್ತೇವೆ” ಎಂದು ಹೇಳಿ ಮುಂದಿನ 2010 ರ ಐಪಿಎಲ್ ಸರಣಿಯಲ್ಲೂ ಅಭಿಮಾನಿಗಳು “ಈ ಸಾರಿ ಕಪ್ ನಮ್ದೆ” ಎಂಬ ಘೋಷವಾಕ್ಯವನ್ನು ಬಿಡದೆ ಕೂಗಲು ಸ್ಪೂರ್ತಿ ತುಂಬಿದ್ದಾರೆ.

ಕೊಹ್ಲಿ ಬಳಗವು ಈ ಸಾರಿಯ ಸರಣಿಯ 14 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಮಾತ್ರ ಗೆದ್ದು 11 ಅಂಕ, ಹಾಗೂ -0.607 ರನ್ ಸರಾಸರಿಯೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ