ಯುಗಾದಿ ಪ್ರಯುಕ್ತ ದೇಶದ ಜನತೆಗೆ ಶುಭಕೋರಿದ ನರೇಂದ್ರ ಮೋದಿ

ಯುಗಾದಿ ಪ್ರಯುಕ್ತ ದೇಶದ ಜನತೆಗೆ   ಶುಭಕೋರಿದ  ನರೇಂದ್ರ ಮೋದಿ

ದೆಹಲಿ: ಹೊಸ ವರ್ಷ ಯುಗಾದಿ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.\

ಕನ್ನಡ ಭಾಷೆಯಲ್ಲಿ ಕರ್ನಾಟಕ ಜನತೆಗೆ ಶುಭಾಶಯ ಕೋರಿರುವ ಪ್ರಧಾನಿ, ಯುಗಾದಿ ಹೊಸ ವರ್ಷ ಬಂದಿದೆ! ಈ ವರ್ಷ ಆಕಾಂಕ್ಷೆಗಳನ್ನು ಈಡೇರಿಸಲಿ, ವಿಪತ್ತುಗಳಿಂದ ಹೊರಬರಲು ಹೊಸ ಚೈತನ್ಯ ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಪ್ರತಿಯೊಬ್ಬರಿಗೂ ಸಂತಸ ಮತ್ತು ಅದಕ್ಕಿಂತ ಮಿಗಿಲಾಗಿ ಉತ್ತಮ ಆರೋಗ್ಯದ ಆಶಿರ್ವಾದವಿರಲಿ ಎಂದಿದ್ದಾರೆ.

 

ಯುಗಾದಿ ಹೊಸ ವರ್ಷ ಬಂದಿದೆ!

ಈ ವರ್ಷ ಆಕಾಂಕ್ಷೆಗಳನ್ನು ಈಡೇರಿಸಲಿ, ವಿಪತ್ತುಗಳಿಂದ ಹೊರಬರಲು ಹೊಸ ಚೈತನ್ಯ ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಪ್ರತಿಯೊಬ್ಬರಿಗೂ ಸಂತಸ ಮತ್ತು ಅದಕ್ಕಿಂತ ಮಿಗಿಲಾಗಿ ಉತ್ತಮ ಆರೋಗ್ಯದ ಆಶಿರ್ವಾದವಿರಲಿ.

— Narendra Modi (@narendramodi) March 25, 2020

 

ದೇಶ ಕೊವಿಡ್-19 ಎಂಬ ಮಾರಕ ರೋಗವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನಾವು ಯುಗಾದಿ ಆಚರಿಸುತ್ತಿದ್ದೇವೆ. ಎಲ್ಲಾ ಹಬ್ಬಗಳ ಸಮಯದಂತೆ ವರ್ಷ ಪರಿಸ್ಥಿತಿ ಅನುಕೂಲವಾಗಿಲ್ಲ, ಆದರೂ ಪರಿಸ್ಥಿತಿಯನ್ನು ಎದುರಿಸಿ ಗೆಲ್ಲುವ ಶಕ್ತಿಯನ್ನು ನಮಗೆ ನೀಡಲಿದೆ. ಕೊರೋನಾ ವೈರಸ್ ವಿರುದ್ಧ ಧೈರ್ಯವಾಗಿ ಹೋರಾಡೋಣ. ಕೊರೋನಾ ಸೋಂಕಿನ ನಿವಾರಣೆಯಲ್ಲಿ ನಿರತರಾಗಿರುವವರಿಗೆ ಸುರಕ್ಷತೆ, ಆರೋಗ್ಯವನ್ನು ಭಗವಂತ ನೀಡಲಿ ಎಂದು ಪ್ರಧಾನಿ ತಿಳಿಸಿದ್ದಾರೆ