ಪ್ರೇಮಿ ಜೊತೆ ಸೇರಿ ಪತಿ ಹತ್ಯೆಗೈದ ಪತ್ನಿ

ಪ್ರೇಮಿ ಜೊತೆ ಸೇರಿ ಪತಿ ಹತ್ಯೆಗೈದ ಪತ್ನಿ

ದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ಅಶೋಕ್ ನಗರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪ್ರೇಮಿ ಜೊತೆ ಸೇರಿ ಪತಿ ಹತ್ಯೆಗೈದ ಪತ್ನಿ ನಂತ್ರ ಕೊರೊನಾ ನಾಟಕವಾಡಿದ್ದಾಳೆ. ಪತಿ ಕೊರೊನಾದಿಂದ ಮೃತಪಟ್ಟಿದ್ದಾನೆಂಬುದನ್ನು ಸಾಭೀತುಪಡಿಸಲು ಪ್ರಯತ್ನಿಸಿದ್ದಾಳೆ.

ಮನೆಯಲ್ಲಿಯೇ ಪತಿ ಹತ್ಯೆಗೈದ ಮಹಿಳೆ ಬೆಳಿಗ್ಗೆ ಪತಿ ಏಳಲಿಲ್ಲವೆಂದು ಅಕ್ಕಪಕ್ಕದವರಿಗೆ ಹೇಳಿದ್ದಾಳೆ. ಕೊರೊನಾದಿಂದ ಪತಿ ಸಾವನ್ನಪ್ಪಿರಬಹುದು ಎಂದಿದ್ದಾಳೆ. ನಂತ್ರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಮರಣೋತ್ತದ ಪರೀಕ್ಷೆ ನಡೆಸಿದಾಗ ಹತ್ಯೆ ಸುದ್ದಿ ಹೊರಬಂದಿದೆ.

ಹತ್ಯೆ ಎಂಬುದು ಗೊತ್ತಾಗ್ತಿದ್ದಂತೆ ಪೊಲೀಸರು ಪತ್ನಿ ವಿಚಾರಣೆ ನಡೆಸಿದ್ದಾರೆ. ಆಗ ಪತ್ನಿ ಎಲ್ಲವನ್ನೂ ಬಾಯ್ಬಿಟ್ಟಿದ್ದಾಳೆ.