ಬೈರಪ್ಪನವರೇ ನಮ್ಮ ಧರ್ಮಗ್ರಂಥ ಅಂದರೆ ಯಾವುದು?: ಚಿಂತಕ ಸಿ.ಎಸ್. ದ್ವಾರಕಾನಾಥ್ ಪ್ರಶ್ನೆ

ಬೈರಪ್ಪನವರೇ ನಮ್ಮ ಧರ್ಮಗ್ರಂಥ ಅಂದರೆ ಯಾವುದು?: ಚಿಂತಕ ಸಿ.ಎಸ್. ದ್ವಾರಕಾನಾಥ್ ಪ್ರಶ್ನೆ

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾಹಿತಿ ಎಸ್.ಎಲ್.ಬೈರಪ್ಪ ನಮ್ಮ ಧರ್ಮಶಾಸ್ತ್ರವೇ ನಮ್ಮ ಧರ್ಮ ಗ್ರಂಥ. ಆದರೆ ಈಗಿನ ನಮ್ಮ ಸಂವಿಧಾನದಲ್ಲಿ ಪರಂಪರೆಯೇ ಒಳಗೊಂಡಿಲ್ಲ ಎಂದು ಹೇಳಿರುವುದಕ್ಕೆ ಚಿಂತಕ, ಹಿರಿಯ ವಕೀಲ ಸಿ.ಎಸ್.ದ್ವಾರಕಾನಾಥ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

          ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್.ಬೈರಪ್ಪನವರು ಸಂವಿಧಾನದ ಬಗ್ಗೆ, ತಮ್ಮ 'ಧರ್ಮಶಾಸ್ತ್ರ'ದ ಬಗ್ಗೆ ತಮ್ಮ ಸಹಜ ಅಭಿಪ್ರಾಯಗಳನ್ನು ಹೇಳುತ್ತಾ  ಹಿಂದೂಗಳಲ್ಲಿನ ಗಂಡುಹೆಣ್ಣಿನ ಸಂಬಂಧದ ಬಗ್ಗೆ, ನಮ್ಮ ನ್ಯಾಯಾಲಯ, ನ್ಯಾಯಾಲಯದ ತೀರ್ಪುಗಳ ಬಗ್ಗೆಯೂ ಕೀಟಲೆಯ ದ್ವನಿಯಲ್ಲಿ ಮಾತನಾಡಿದ್ದಾರೆ!

           ಪ್ರಗತಿಪರರು ಸಾಮಾಜಿಕ ಜಾಲತಾಣಗಳಲ್ಲಿ ಬೈರಪ್ಪನವರ ಮಾತುಗಳನ್ನು ಉಗ್ರವಾಗಿ ವಿರೋಧಿಸುತ್ತಾ ಎಸ್.ಎಲ್.ಬೈರಪ್ಪನವರ ವೈಯಕ್ತಿಕ ನಿಂದೆಗೆ ಇಳಿದಿದ್ದಾರೆ.!

           ಬೈರಪ್ಪನವರು ಇದನ್ನು ಬಿಟ್ಟು ಮತ್ತೇನು ಮಾತಾಡಲು ಸಾದ್ಯ..? ಅವರು ನಂಬಿದ ಸಿದ್ದಾಂತಕ್ಕೆ ಅವರು ತೋರುವ ಕಾಳಜಿ, ಬದ್ದತೆಗಳು ನಿಜಕ್ಕೂ ಶ್ಲಾಘನೀಯ!  ಅವರು ಮಾತಾಡಿರುವುದಾದರೂ ಎಲ್ಲಿ? ಅವರ ಜಾತಿಯವರೇ ಆದವರೊಬ್ಬರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ, ಅವರದೇ ಪರಿಸರದಲ್ಲಿ, ಅವರ ಅನುಯಾಯಿಗಳ ನಡುವೆ. ಅದರಲ್ಲೂ ಅವರು ಅವರದೇ 'ಧರ್ಮಗ್ರಂಥ'ಗಳನ್ನು ಬೇರೆ ಸಮರ್ಥಿಸಿಕೊಂಡಿದ್ದಾರೆ!  ಇದೂ ನನಗೆ ಆಶ್ಚರ್ಯ ಎನಿಸಲಿಲ್ಲ!? ಅವರು, ಅವರ ಯಥಾಸ್ಥಿತಿವಾದದ, ಅವರಿಗೆ ಶ್ರೇಯಕರವಾದ ಧರ್ಮಗ್ರಂಥವನ್ನು ಸಮರ್ಥಿಸದೆ ನಿಮ್ಮ ಧರ್ಮಗ್ರಂಥವಾದ ಸಂವಿಧಾನವನ್ನು ಏಕೆ ಸಮರ್ಥಿಸಬೇಕು? ಅವರ ಧರ್ಮಗ್ರಂಥಗಳಿಗೆ 'ಹಿಂದೂ'. 'ಭಾರತೀಯ'  'ಪ್ರಾಚೀನ' 'ಪುರಾತನ' 'ಸನಾತನ' ಎಂದು ಏನೇ ನಾಮಕರಣ ಮಾಡಿ, ಹೆಸರಿಟ್ಟು ಕರೆದರೂ ಅದು ಬ್ರಾಹ್ಮಣ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಧರ್ಮಗ್ರಂಥವಾಗಿರುತ್ತದೆ! ಬ್ರಾಹ್ಮಣರಾದ ಬೈರಪ್ಪನವರಿಗೆ, ಅವರ ಕುಲಭಾಂಧವರಿಗೆ ಅದರಿಂದ ಲಾಭವಿದೆ! ಪರಂಪರಾನುಗತವಾಗಿ ಅವರು ಅದರ ಹಣ್ಣುಗಳನ್ನು ಸವಿದಿದ್ದಾರೆ!  'ಭಾರತೀಯತೆ' ಅಂದರೆ ಅವರ ಅರ್ಥದಲ್ಲಿ ಅದು 'ವೈದಿಕೇಯತೆ'ಯೇ ಅಲ್ಲವೆ? ಭಾರತೀಯತೆ ಅರ್ಥಾತ್ ಬ್ರಾಹ್ಮಣೀಯತೆಯನ್ನು ಯಥಾಸ್ಥಿತಿಗೊಳಿಸುವುದು, ಸ್ಥಾವರಗೊಳಿಸುವುದೇ ಅವರ ಮೂಲ ಉದ್ದೇಶವೆಂಬುದನ್ನು ನಾವೇಕೆ ಗ್ರಹಿಸುತ್ತಿಲ್ಲ.? ಇದನ್ನು ಕೇವಲ ಎಸ್.ಎಲ್.ಬೈರಪ್ಪನವರು ಹೇಳುತ್ತಿರುವುದಲ್ಲ, ಇವರ ಪೂರ್ವಿಕರಾದ ಸಂಘಪರಿವಾರದ ಸ್ಥಾಪಕರೆಲ್ಲಾ ಹಿಂದಿನಿಂದಲೂ ಹೇಳುತ್ತಾ  ಬಂದಿರುವುದೇ ಇದೇ ಆಗಿದೆ!?  ಉದಾಹರಣೆಗೆ ಇಂದು ಎಸ್.ಎಲ್.ಬೈರಪ್ಪನವರು ನಮ್ಮ ಮದುವೆಗಳ, ವಿಚ್ಚೇದನಗಳ, ಗಂಡು ಹೆಣ್ಣು ಸಂಬಂಧಗಳ ಪರಿಸ್ಥಿತಿಯನ್ನು ಕಂಡು ವ್ಯಂಗ್ಯವಾಡಿದ್ದಾರಲ್ಲ, ಅದನ್ನೇ ಇಂದಿಗೆ ಸರಿಯಾಗಿ ಎಪ್ಪತ್ತು ವರ್ಷಗಳ ಹಿಂದೆ ಬೈರಪ್ಪನವರ ಪೂರ್ವಿಕರಾದ ಗೋಳ್ವಾಲ್ಕರ್ ರವರೂ ಹೇಳಿದ್ದನ್ನು ನಮ್ಮ ಇತಿಹಾಸಕಾರ ರಾಮಚಂದ್ರ ಗುಹ ಕೋಟ್ ಮಾಡಿದ್ದನ್ನೇ ನಾನೂ ಕೋಟ್ ಮಾಡಿದ್ದೇನೆ ಗಮನಿಸಿ....

             The RSS sarsanghchalak, M.S. Golwalkar, complained in a speech of August 1949 that the reforms piloted by Ambedkar “has nothing Bharatiya about it. The questions like those of marriage and divorce cannot be settled on the American or British model in this country. Marriage, according to Hindu culture and law is a sanskar which cannot be changed even after death and not a ‘contract’ which can be broken any time”. Golwalkar continued: “Of course some lower castes in Hindu Society in some parts of the country recognise and practise divorce by custom. But their practice cannot be treated as an ideal to be followed by all”. (Organiser, September 6, 1949).

            ಯಥಾಸ್ಥಿತಿವಾದ ಅಂದರೆ ಇದೇ.. ಅದಕ್ಕೆ ಕಾಲಮಾನಗಳ ಅಂತರವಿರಲ್ಲ, ಬಾಷೆ ಮತ್ತು ಚಿಂತನೆಯಲ್ಲಿ ವ್ಯತ್ಯಾಸ ಇರಲ್ಲ, ವ್ಯಕ್ತಿ ವ್ಯಕ್ತಿಗಳ ನಡುವೆ ಗೊಂದಲವಿರಲ್ಲ..! ಇದನ್ನೇ ನಮ್ಮವರು ಪ್ಯಾಸಿಸಂ ಎಂದು ಕರೆದರು.  ಅಂದು ಅವರು ಪ್ರತಿಪಾದಿಸಿದ್ದು, ಅದು ಮುಂದುವರೆದಿದ್ದೂ, ಇಂದು ಪ್ರತಿಪಾದಿಸುತ್ತಿರುವುದು ಒಂದೇ.‌.!? ಭಾರತೀಯತೆಯ ಹೆಸರಲ್ಲಿ ಬ್ರಾಹ್ಮಣೀಯತೆಯನ್ನು, ಇದರಿಂದ ಭಾರತೀಯರಾದ ಇತರ ಬ್ರಾಹಮಣೇತರರಿಗೆ ಏನೇ ನಷ್ಟವಾದರೂ ಚಿಂತೆಯಿಲ್ಲ ಅವರಿಗೆ ಮಾತ್ರ ಲಾಭವಾಗಬೇಕಷ್ಟೆ ಅವರ ಸವರ್ಣಕುಲದ ಶ್ರೇಷ್ಠತೆ ಉಳಿಯಬೇಕಷ್ಟೆ!

          ಇಲ್ಲಿ ಭಾರತೀಯರು, ಅದರಲ್ಲೂ ಬ್ರಾಹ್ಮಣ ಹೆಣ್ಣುಮಕ್ಕಳನ್ನೂ ಸೇರಿಸಿದಂತೆ ಇಡೀ ಸ್ತ್ರೀಕುಲಕ್ಕೆ ಇವರ 'ಸಿದ್ದಾಂತ' ಅದೆಷ್ಟು ಅಪಾಯಕಾರಿಯಾಗಿದೆ ಗಮನಿಸಿ? ಬೈರಪ್ಪನವರು ಹೆಣ್ಣಿನ ಮುಟ್ಟಿನ ಬಗ್ಗೆ, ಶಬರಿಮಲೆ ದೇವಾಲಯದ ಪ್ರವೇಶದ ಬಗ್ಗೆ ಅಸಹನೆ ಬೆರೆತ ವ್ಯಂಗ್ಯದಲ್ಲಿ ಮಾತನಾಡಿದ್ದಾರೆ. ಇದರಲ್ಲಿ ಅವರ 'ಧ್ವನಿ'ಯನ್ನು ಗಮನಿಸಿ..? ಅದೇ ಏಳು ದಶಕಗಳ ಹಿಂದೆ ಅಪ್ಪನ ಆಸ್ತಿಯಲ್ಲಿ(ಪಿತ್ರಾರ್ಜಿತ ಆಸ್ತಿ) ಹೆಣ್ಣು ಮಕ್ಕಳಿಗೆ ಸಮಪಾಲು ನೀಡಬೇಕೆಂದು ಬಾಬಾಸಾಹೇಬರು 'ಹಿಂದು ಕೋಡ್ ಬಿಲ್' ತಂದಾಗ, ಅಂದೂ ಬೈರಪ್ಪನವರ ತಲೆಮಾರಿನವರು ಮಾತಾಡಿದ್ದು ಇಲ್ಲಿದೆ ಗಮನಿಸಿ...

         An article in the Organiser, dated November 2, 1949, characterised the Hindu Code Bill “as a direct invasion on the faith of the Hindus”, remarking that “its provisions empowering women to divorce is revolting to the Hindu ideology”. An editorial published a month later (“The Hindu Code Bill”, the Organiser, December 7, 1949) led with this paragraph: “We oppose the Hindu Code Bill. We oppose it because it is a derogatory measure based on alien and immoral principles. It is not a Hindu Code Bill. It is anything but Hindu. We condemn it because it is a cruel and ignorant libel on Hindu laws, Hindu culture and Hindu dharma”. ಮಾತೆತ್ತಿದರೆ ಭಾರತಮಾತೆಯನ್ನು ಉದ್ಗರಿಸುವ ಇವರ ಉದರದಲ್ಲಿರುವ ಸ್ತ್ರೀದ್ವೇಶವನ್ನು ಗಮನಿಸಿ..? ಅಂದಿಗೂ ಇಂದಿಗೂ ಬೈರಪ್ಪನವರ  ಮತ್ತವರ ಪೂರ್ವಿಕರ ಚಿಂತನೆ ಮತ್ತು ಉದ್ದೇಶದಲ್ಲಿ ಏನಾದರೂ ಎಳ್ಳಷ್ಟು ವ್ಯತ್ಯಾಸವಿದೆಯೇ..? ಇಂತದ್ದೇ ಸ್ಪಷ್ಟತೆ ಅಂದು ಹಿಟ್ಲರ್ ನಲ್ಲೂ ಇತ್ತು ಇಂದು ಇವರಲ್ಲೂ ಇದೆ!

             ನಾವು ಬೈರಪ್ಪನಂತವರನ್ನು ಬೈಯುವುದನ್ನು ನಿಲ್ಲಿಸಬೇಕು ಇಂದಾದರೂ ಒಂದಾಗಿ ಪರ್ಯಾಯಗಳನ್ನು ಹುಡುಕಬೇಕು.. ಈ ದೇಶವನ್ನು ಇವರಿಂದ ಉಳಿಸಬೇಕಾದರೆ ಇವರ ಮಾತುಗಳನ್ನು, ಇವರ ನುಡಿಕಟ್ಟನ್ನು ಅದರ ಹಿಂದಿನ ದುರುದ್ದೇಶಗಳನ್ನು ಮುಂದಿನ ತಲೆಮಾರಿಗಾದರೂ ಅರ್ಥಮಾಡಿಸಬೇಕು..