‘ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಮೋಡ ಬಿತ್ತನೆ ಆರಂಭಿಸಲಿದ್ದೇವೆ’: ಕೃಷ್ಣ ಬೈರೇಗೌಡ

‘ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಮೋಡ ಬಿತ್ತನೆ ಆರಂಭಿಸಲಿದ್ದೇವೆ’:  ಕೃಷ್ಣ ಬೈರೇಗೌಡ

ಬೆಂಗಳೂರು: ‘ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆ ಇದೆ ಎಂದು ವರದಿ ಬಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮೋಡ ಬಿತ್ತನೆ ಮಾಡಲು ರಾಜ್ಯ ಸರ್ಕಾರ ತಿರ್ಮಾನ ಕೈಗೊಂಡಿದೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ಮುಖ್ಯಮಂತ್ರಿ ಹಮ್ಮಿಕೊಂಡಿದ್ದ ಸಿಎಂ ವೀಡಿಯೋ ಕಾನ್ಪರೆನ್ಸ್ ನಲ್ಲಿ ಮಾತನಾಡಿದ ಕೃಷ್ಣಬೈರೇಗೌಡರು 'ಸರ್ಕಾರದಿಂದ ಒಂದು ವಾರದೊಳಗೆ ಮೋಡ ಬಿತ್ತನೆಗೆ ಟೆಂಡರ್‌ ಕರೆಯಲಾಗುತ್ತದೆ, ಜೂನ್‍ ತಿಂಗಳ ಅಂತ್ಯದಲ್ಲಿ ರಾಜ್ಯದ ಎಲ್ಲಾ ಕಡೆ ಮೋಡ ಬಿತ್ತನೆ ಕಾರ್ಯಕ್ರಮವನ್ನು ಶುರು ಮಾಡುತ್ತೇವೆ. ಪರಿಣಿತರ ಸಮಿತಿ ವರದಿ ಆಧರಿಸಿ 2019-20 ಹಾಗೂ 2020-21ರ ಎರಡು ವರ್ಷಗಳ ಅವಧಿಗೆ ಸೇರಿದಂತೆ ಸೂಮಾರು 88 ಕೋಟಿ ಮೋತ್ತಕ್ಕೆ ಅಂದಾಜು ಮಾಡಿ ಟೆಂಡರ್‌ ಕರೆಯಲಾಗುತ್ತದೆ' ಎಂದು ತಿಳಿಸಿದರು.

ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಎರಡು ಕಡೆಗಳಲ್ಲಿ ಮೋಡ ಬಿತ್ತನೆ ಕೇಂದ್ರ ತೆರೆಯಲಾಗುವುದು. ಈ ಬಾರಿ ಮುಂಗಾರು ಆರಂಭದ ಜೊತೆ ಜೊತೆಗೆನೇ ಮೋಡ ಬಿತ್ತನೇ ಕಾರ್ಯಕ್ರಮವನ್ನು ಆರಂಭಸಲು ಉದೇಶಿಸಲಾಗಿದೆ ಸಚಿವರು ಹೇಳಿದ್ದಾರೆ.