ಕುಲಪತಿ ರಾಜೀನಾಮೆ ನೀಡುವವರೆಗೆ ನಾವು ಪಾಠ ಮಾಡುವುದಿಲ್ಲ: ಜೆಎನ್ ಯು ಪ್ರಾಧ್ಯಾಪಕರ ಆಗ್ರಹ

ಕುಲಪತಿ ರಾಜೀನಾಮೆ ನೀಡುವವರೆಗೆ ನಾವು ಪಾಠ ಮಾಡುವುದಿಲ್ಲ: ಜೆಎನ್ ಯು ಪ್ರಾಧ್ಯಾಪಕರ ಆಗ್ರಹ

ದೆಹಲಿ: ಕುಲಪತಿ ಜಗದೀಶ್ ಕುಮಾರ್ ರಾಜೀನಾಮೆ ನೀಡುವವರೆಗೆ ನಾವು ಪಾಠ ಮಾಡುವುದಿಲ್ಲ ಎಂದು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಟೀಚರ್ಸ್ ಅಸೋಸಿಯೇಷನ್​ ಘೋಷಿಸಿದೆ.

ವಿಶ್ವವಿದ್ಯಾಲಯದಲ್ಲಿ ತಮ್ಮ ವಿಭಾಗಗಳ ಎದುರು ಸೋಮವಾರ ಪ್ರಾಧ್ಯಾಪಕರು ಪ್ರತಿಭಟನೆ ನಡೆಸಿ, ಜನವರಿ 5ರಂದು ವಿವಿ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಯನ್ನು ಗುರಿಯಾಗಿಸಿ ದುಷ್ಕರ್ಮಿಗಳು ಹಿಂಸಾಚಾರ ನಡೆಸಿದ ನಂತರ ಭಯದ ವಾತಾವರಣ ಉಂಟಾಗಿದೆ. ಕುಲಪತಿ ಸ್ಥಾನಕ್ಕೆ ಜಗದೀಶ್ ಕುಮಾರ್ ರಾಜೀನಾಮೆ ನೀಡುವತನಕ ಜೆಎನ್​​ಯು ಸಹಜ ಸ್ಥಿತಿಗೆ ಮರಳಲು ಸಾಧ್ಯವಿಲ್ಲ ಎಂದು ಹೇಳಿದರು.

ಕುಲಪತಿ ಜಗದೀಶ್ ಕುಮಾರ್ ಹೇಳಿದಂತೆ ಕೇಳಲು ಸಾಧ್ಯವಿಲ್ಲ. ಅವರ ಮನಸ್ಥಿತಿಯಲ್ಲಿನ ಸಾಮನ್ಯ ಸ್ಥಿತಿಯನ್ನು ಒಪ್ಪಲು ಸಿದ್ಧರಿಲ್ಲ. ಕ್ಯಾಂಪಸ್​​ನಲ್ಲಿ ಒಂದು ವಿಚಾರದ ಬಗ್ಗೆ ಮುಕ್ತವಾಗಿ ಚರ್ಚಿಸುವಂತ ವಾತಾವರಣ ಮರುಸ್ಥಾಪನೆಯಾಗಿದೆ.ಆಡಳಿತ ಮಂಡಳಿ ನೀಡಿರುವ ಸಲಹೆಗಳನ್ನು ತಿರಸ್ಕರಿಸುವ ವಿಶ್ವವಿದ್ಯಾಲಯದ ಚುನಾಯಿತ ಸಂಸ್ಥೆ ಜೆಎನ್‌ಯುಟಿಎ ಕುಲಪತಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.