ವಿಶ್ವಕಪ್-2019; ಬಾಂಗ್ಲಾ ವಿರುದ್ದ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬೌಲಿಂಗ್

ವಿಶ್ವಕಪ್-2019; ಬಾಂಗ್ಲಾ ವಿರುದ್ದ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬೌಲಿಂಗ್

ಲಂಡನ್: ವಿಶ್ವಕಪ್ ಸರಣಿಯ 9 ನೇ ಪಂದ್ಯವು ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶದ ನಡುವೆ ನಡೆಯುತ್ತಿದ್ದು, ಟಾಸ್ ಗೆದ್ದ ಕಿವೀಸ್ ಪಡೆಯು ಬಾಂಗ‍್ಲಾವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ.

ಮಶ್ರಾಫೆ ಮೊರ್ಟಾಜಾ ನೇತೃತ್ವದಲ್ಲಿ ಬಾಂಗ್ಲಾ ತಂಡವು, ಕೇನ್ ವಿಲಿಯಮ್ ಸನ್ ನಾಯಕತ್ವದಲ್ಲಿ ನ್ಯೂಜಿಲ್ಯಾಂಡ್ ತಂಡವು ಕಣಕ್ಕೆ ಇಳಿದಿದೆ.

ಪಂದ್ಯದ ಸ್ಥಳ; ಕೆನ್ನಿಂಗ್ ಟನ್ ಒವಲ್, ಲಂಡನ್

ಅಂಪೈರ್ ಗಳು: ಪಾಲ್ ರೀಫೆಲ್, ಬ್ರೂಸ್ ಆಕ್ಸನ್ಫೋರ್ಡ್

ಮೂರನೇ ಅಂಪೈರ್: ಜೋಯಲ್ ವಿಲ್ಸನ್

ವಿಕ್ಷಕ ವಿವರಣೆಗಾರ: ಡೇವಿಡ್ ಬೂನ್

ಬಾಂಗ್ಲಾ ತಂಡವು ಈಗಾಗಲೇ ಒಂದು ಪಂದ್ಯವನ್ನು ಆಡಿದ್ದು ಸೌತ್ ಆಫ್ರಿಕಾ ವಿರುದ್ಧ 21 ರನ್ ಗಳ ಜಯ ಸಾಧಿಸಿದೆ.

ನ್ಯೂಜಿಲ್ಯಾಂಡ್ ತಂಡವು ಸಹ 1 ಪಂದ್ಯವನ್ನು ಆಡಿದ್ದು ಶ್ರೀಲಂಕಾ ವಿರುದ್ಧ 10 ವಿಕೆಟ್ ಗಳ ಜಯ ಸಾಧಿಸಿದೆ