ವಿಶ್ವಕಪ್-2019: ಗಾಯದ ಸಮಸ್ಯೆಯಿಂದ ಶಿಖರ್ ಧವನ್ ಗೆ ವಿಶ್ರಾಂತಿ- ರಿಷಬ್ ಪಂತ್ ಗೆ ಅವಕಾಶ?

ವಿಶ್ವಕಪ್-2019: ಗಾಯದ ಸಮಸ್ಯೆಯಿಂದ ಶಿಖರ್ ಧವನ್ ಗೆ ವಿಶ್ರಾಂತಿ- ರಿಷಬ್ ಪಂತ್ ಗೆ ಅವಕಾಶ?

ಬೆಂಗಳೂರು: ಗಾಯದ ಸಮಸ್ಯೆಯಿಂದ ಎರಡರಿಂದ ಮೂರು ಪಂದ್ಯಗಳಿಗೆ ವಿಶ್ರಾಂತಿ ತೆಗೆದುಕೊಂಡಿರುವ ಶಿಖರ್ ಧವನ್ ಬದಲಾಗಿ ವಿಶ್ವಕಪ್ ಗೆ ಕೈ ಬಿಟ್ಟಿದ್ದ ವಿಕೆಟ್ ಕೀಪರ್ ರಿಷಬ್ ಪಂತ್ ರಿಗೆ ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮೊನ್ನೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೈ ಬೆರಳಿಗೆ ಗಾಯಮಾಡಿಕೊಂಡ ಧವನ್ ಗೆ 2 ರಿಂದ 3 ಪಂದ್ಯಗಳಿಂದ ಕೈಬಿಡಲಾಗಿತ್ತು ಆದ್ದರಿಂದ 15 ಆಟಗಾರರಿಬೇಕಾದ ತಂಡಕ್ಕೆ ಧವನ್ ಬದಲಾಗಿ ರಿಷಬ್ ಪಂತ್ ಅಥವಾ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಸಂಭವವಿತ್ತು.

ಆದರೆ ವಿಶ್ವಕಪ್ ಗೆ ಆಟಗಾರರನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ಕೈಬಿಟ್ಟಿದ್ದ ರಿಷಬ್ ಗೆ ಬಿಸಿಸಿಐ ಅವಕಾಶ ನೀಡಿದ್ದು, ಇಂಗ್ಲೆಂಡ್ ಗೆ ವಿಮಾನ ಏರುವಂತೆ ಸೂಚಿಸಿದೆ ಎನ್ನಲಾಗಿದೆ

ಆದರೆ ಈ ಬಗ್ಗೆ ಬಿಸಿಸಿಐ ಆಗಲಿ ಅಥವಾ ರಿಷಬ್ ಪಂತ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

2016 ರಲ್ಲಿ ನಡೆದ 19 ವರ್ಷದ ಒಳಗಿನ ವಿಶ್ವಕಪ್ ನಲ್ಲಿ ಆಡಿದ್ದ ರಿಷಬ್, ಐಪಿಎಲ್ ಸರಣಿಯಲ್ಲಿ ದೆಹಲಿ ತಂಡವನ್ನು ಪ್ರತಿನಿಧಿಸಿದ್ದರು,

201 ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಟಿ-ಟ್ವೆಂಟಿ ಪಂದ್ಯದ ಮೂಲಕ ಭಾರತ ಕ್ರಿಕೆಟ್ ತಂಡವನ್ನು ಸೇರಿದ ರಿಷಬ್, ನಂತರ 2018 ಆಗಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧವೇ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಹಾಗೆ ಏಕದಿನ ಪದ್ಯದ ಕ್ರಿಕೆಟ್ ಬದುಕನ್ನು 2018 ರ ಅಕ್ಟೋಬರ್ ತಿಂಗಳಲ್ಲಿ ವೆಸ್ಟ್ ಇಂಡಿಸ್ ವಿರುದ್ಧ ಪಂದ್ಯದಲ್ಲಿ ಶುರುಮಾಡಿದ್ದಾರೆ.

ಏಕದಿನ ಕ್ರಿಕೆಟ್ ನಲ್ಲಿ ಇದುವರೆಗು 5 ಪಂದ್ಯಗಳನ್ನು ಮಾತ್ರ ಆಡಿರುವ ಪಂತ್ 93 ರನ್ ಗಳನ್ನು ಗಳಿಸಿದ್ದಾರೆ.

ವಿಶ್ವಕಪ್ ಗೆ ಭಾರತ ತಂಡವನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ವಿಕೆಟ್ ಕೀಪರ್ ಗಳ ಆಯ್ಕೆ ಮಾಡುವಾಗ ದಿನೇಶ್ ಕಾರ್ತಿಕ್ ಗೆ ಅವಕಾಶ ನೀಡಿ, ಪಂತ್ ರನ್ನು  ಕೈಬಿಡಲಾಗಿತ್ತು.