ವಿಶ್ಪಕಪ್-2019: 288 ಕ್ಕೆ ಆಸ್ಟ್ರೇಲಿಯಾ ಆಲ್ ಔಟ್

ವಿಶ್ಪಕಪ್-2019: 288 ಕ್ಕೆ ಆಸ್ಟ್ರೇಲಿಯಾ ಆಲ್ ಔಟ್

ನಾಟ್ಟಿಂಗ್ಯಾಮ್: ಇಲ್ಲಿನ ಟ್ರೆಂಟ್ ಬಿಡ್ಜ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ,ವಿಂಡೀಸ್ ನಡುವಿನ ಪಂದ್ಯದಲ್ಲಿ 288 ರನ್ ಗೆ ಆಸ್ಟ್ರೇಲಿಯಾ ಆಲ್ ಔಟ್ ಆಗಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಆಸ್ಟ್ರೇಲಿಯಾ ಆರಂಭದಲ್ಲೇ ಮುಗ್ಗರಿಸಿತು, ತಂಡದ ಮೊತ್ತ 15 ರನ್ ಆಗಿದ್ದಾಗ ನಾಯಕ ಆರೋನ್ ಫಿಂಚ್ ವಿಕೆಟ್ ಕಳೆದುಕೊಂಡಿತು.

ನಂತರ 38 ರನ್ ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಸ್ಟಿವನ್ ಸ್ಮಿತ್ ಮತ್ತು ಕೌಲ್ಟರ್-ನೈಲ್ 4 ಸಿಕ್ಸರ್ 8 ಬೌಂಡರಿಯೊಂದಿಗೆ 92 ರನ್ ಗಳಿಸಿ ತಂಡವು 200 ರನ್ ಗಡಿ ದಾಟಲು ಸಹಕಾರಿಯಾದರು. ಜೊತೆಗೆ ಅಲೆಕ್ಷ್ ಕ್ಯಾರಿ ಕೂಡ 45 ರನ್ ಗಳಿಸಿ ನೈಲ್ ಗೆ ಸಾಥ್ ನೀಡಿದರು.

ಕೊನೆಗೆ 288 ರನ್ ಗಳಿಸಿದ ತಂಡವು ಕೊನೆಯ ಒಂದು ಓವರ್ ಇದ್ದಾಗ ಆಲ್ ಔಟ್ ಆಗಿ ವಿಂಡೀಸ್ ತಂಡದ ಗೆಲುವಿಗೆ 289 ರನ್ ಗುರಿ ನೀಡಿತು.

ವಿಂಡೀಸ್ ತಂಡದ ಪರವಾಗಿ ಥಾಮಸ್, ಕೊಟ್ರೆಲ್,ರಸೆಲ್ ತಲಾ 2 ವಿಕೆಟ್ ಹಂಚಿಕೊಂಡರೆ, ಮಾರಕ ಬೌಲಿಂಗ್ ಮಾಡಿದ ಬ್ರೆಥ್ ವೈಟ್ 3 ವಿಕೆಟ್ ಕಬಳಿಸಿದರು ಹಾಗೂ ಹೊಲ್ಡರ್ 1 ವಿಕೆಟ್ ಪಡೆದರು.