ಟಿ-20 ಕ್ರಿಕೆಟ್: ರೋಹಿತ್ ಶರ್ಮ ದಾಖಲೆ ಮುರಿದು ಅಗ್ರಸ್ಥಾನದಲ್ಲಿ ವಿರಾಟ್ ಕೊಹ್ಲಿ

ಟಿ-20 ಕ್ರಿಕೆಟ್: ರೋಹಿತ್ ಶರ್ಮ ದಾಖಲೆ ಮುರಿದು  ಅಗ್ರಸ್ಥಾನದಲ್ಲಿ ವಿರಾಟ್ ಕೊಹ್ಲಿ

ಮೊಹಾಲಿ: ಪಂಜಾಬ್ ಕ್ರಿಕೆಟ್ ಸಂಸ್ಥೆ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್ ಗಳ ಭರ್ಜರಿ ಜಯ ಪಡೆದಿದೆ. ಈ ವೇಳೆ ಉಪನಾಯಕ ರೋಹಿತ್‍ ಶರ್ಮ ಅವರ ದಾಖಲೆ ಮುರಿದು ನಾಯಕ ವಿರಾಟ್‍ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

150 ರನ್‍ ಗಳ ಸವಾಲನ್ನು ಬೆನ್ನಟ್ಟಿದ ಭಾರತ ತಂಡ, 6 ಎಸೆತಗಳು ಇರುವಾಗಲೇ 3 ವಿಕೆಟ್ ಗಳನ್ನು ಕಳೆದುಕೊಂಡಿತು. ಕೊನೆಗೆ 151 ಓಟಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿತು. ವಿರಾಟ ಕೊಹ್ಲಿ ಔಟಾಗದೇ 72 ಓಟ, ಶಿಖರ್ ಧವನ್ -40 ಓಟ ಗಳಿಸಿ ಗೆಲುವಿಗೆ ಭದ್ರ ಬುನಾದಿ ಹಾಕಿದರು. ದಕ್ಷಿಣ ಆಫ್ರಿಕಾ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 149 ಓಟ ಪಡೆದಿತ್ತು.

ಈ ನಡುವೆ ವಿರಾಟ್ ಕೊಹ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ. ಈ ಮೊದಲು ಈ ದಾಖಲೆ ವಿರಾಟ್ ಹೆಸರಲ್ಲೇ ಇದ್ದರೂ ರೋಹಿತ್ ಶರ್ಮಾ ಮುರಿದಿದ್ದರು. ಇದೀಗ ಮತ್ತೆ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಟ್ವೆಂಟಿ-20 ಕ್ರಿಕೆಟ್‌ಗೂ ತಾವೇ ಸಾಮ್ರಾಟ್ ಎಂಬುದನ್ನು ಸಾಬೀತು ಮಾಡಿದ್ದಾರೆ.

ವಿರಾಟ್‍ ಕೊಹ್ಲಿ 71 ಪಂದ್ಯಗಳಲ್ಲಿ 2441 ರನ್‍ ಗಳಿಸಿ ಅಗ್ರಸ್ಥಾನದಲ್ಲಿ ಇದ್ದು, ಉಪನಾಯಕ 97 ಪಂದ್ಯಗಳಲ್ಲಿ 2434 ರನ್‍ ಗಳಿಸಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಮೂರನೇ ಸ್ಥಾನದಲ್ಲಿ ನ್ಯೂಜಿಲಾಂಡ್‍ ಆಟಗಾರ ಮಾರ್ಟಿನ್ ಗಪ್ಟಿಲ್ ಇದ್ದಾರೆ.