ವಿಕ್ರಂ ರವಿಚಂದ್ರನ್ ಅಭಿನಯಿಸಲಿರೋ ನೂತನ ಚಿತ್ರಕ್ಕೆ ನಾಯಕಿ ಅನ್ವೇಷಣೆ  

ವಿಕ್ರಂ ರವಿಚಂದ್ರನ್ ಅಭಿನಯಿಸಲಿರೋ ನೂತನ ಚಿತ್ರಕ್ಕೆ ನಾಯಕಿ ಅನ್ವೇಷಣೆ  

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಂ ರವಿಚಂದ್ರನ್ ನಾಯಕರಾಗಿ ನಟಿಸಲಿರೋ ನೂತನ ಚಿತ್ರ ವರಮಹಾಲಕ್ಷ್ಮೀ ಹಬ್ಬದ ಸಮಯಕ್ಕೆ ಸೆಟ್ಟೇರಲಿದ್ದು. ಈ ಚಿತ್ರದ ಮೂಲಕ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಂ ರವಿಚಂದ್ರನ್ ನಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.  

ವಿಭಿನ್ನ ಕಥಾ ಹೊಂದಿರುವ ಈ ಚಿತ್ರವನ್ನು ಸಹನಾಮೂರ್ತಿ ನಿರ್ದೇಶಿಸಲಿದ್ದಾರೆ. ಈ ಹಿಂದೆ `ರೋಸ್` ಹಾಗೂ `ಮಾಸ್ ಲೀಡರ್` ಚಿತ್ರಗಳನ್ನು ಸಹನಾಮೂರ್ತಿ ನಿರ್ದೇಶಿಸಿದ್ರು. ಪ್ರಸ್ತುತ ಈ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ. ವಿಕ್ರಂ ರವಿಚಂದ್ರನ್ ಅವರಿಗೆ ನಾಯಕಿಯಾಗಿ ನಟಿಸಲು ನೂತನ ಪ್ರತಿಭೆಗಳಿಗೆ ನಿರ್ದೇಶಕರು ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ.

ನಾಯಕಿಯಾಗಲು ಆಸಕ್ತಿ ಹೊಂದಿರುವವರು (18 ರಿಂದ 23ರ ವಯೋಮಿತಿ) ತಮ್ಮ ಇತ್ತೀಚಿನ ಭಾವಚಿತ್ರಗಳನ್ನು 9972246666 ನಂಬರಿಗೆ ಕಳುಹಿಸಬಹುದು.  

ಗೌರಿ ಎಂಟರ್ ಟೈನರ್ಸ್ ಲಾಂಛನದಲ್ಲಿ ಸೋಮಣ್ಣ ಮತ್ತು ಸುರೇಶ್ ಅವರು ನಿರ್ಮಿಸುತ್ತಿರುವ ಈ ನೂತನ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿದೆ.