ತ್ರಿವಳಿ ತಲಾಖ್‌ ಮಸೂದೆ; ಇಲಾಖೆಗಳನ್ನು ಕತ್ತಲಲ್ಲಿಟ್ಟಿದ್ದ ಕಾನೂನು ಸಚಿವಾಲಯ

ತ್ರಿವಳಿ ತಲಾಖ್‌ ಮಸೂದೆ; ಇಲಾಖೆಗಳನ್ನು ಕತ್ತಲಲ್ಲಿಟ್ಟಿದ್ದ ಕಾನೂನು ಸಚಿವಾಲಯ

ನವದೆಹಲಿ: ತ್ರಿವಳಿ ತಲಾಖ್‌ ಮಸೂದೆಗೆ ಅನುಮೋದನೆ ಪಡೆಯುವ ಕಾನೂನು ಸಚಿವಾಲಯ ಮುನ್ನ ಇದಕ್ಕೆ ಸಂಬಂಧಿಸಿದ ಯಾವ ಇಲಾಖೆಗಳು ಮತ್ತು ಸಚಿವಾಲಯ ಹಾಗೂ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿರಲಿಲ್ಲ ಎಂಬ ಸಂಗತಿ ಇದೀಗ ಹೊರಬಿದ್ದಿದೆ.

ಕೇಂದ್ರ ಕಾನೂನು ಸಚಿವಾಲಯ ಕಳೆದ ವರ್ಷ ತ್ರಿವಳಿ ತಲಾಖ್ ಮಸೂದೆಯನ್ನು ಅನುಮೋದಿಸಿತ್ತು. ತ್ರಿವಳಿ ತಲಾಖ್‌ಗೆ ಸಂಸತ್ತಿನಲ್ಲಿ ಅನುಮೋದನೆ ಪಡೆಯುವ ಮುನ್ನ ಯಾವ ಇಲಾಖೆಗಳನ್ನೂ ಸಂಪರ್ಕಿಸಿಲ್ಲ ಎಂಬುದು ರಾಷ್ಟ್ರೀಯ ಸುದ್ದಿ ಜಾಲ ತಾಣ ದಿ ವೈರ್‌ ಪಡೆದಿರುವ ಮಾಹಿತಿಯಿಂದ ತಿಳಿದು ಬಂದಿದೆ.

ದೀರ್ಘಕಾಲದಿಂದಲೂ ಇರುವ ತ್ರಿವಳಿ ತಲಾಖ್ ಎಂದು ಕರೆಯಲಾಗುವ ಮುಸ್ಲೀಂ ಮಹಿಳಾ ವಿವಾಹ ಹಕ್ಕು ರಕ್ಷಣೆ ಮಸೂದೆಯನ್ನು ಜುಲೈ 2019 ರಲ್ಲಿ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿತ್ತು. ಅದೀಗ  ಕಾನೂನಾಗಿ ಬದಲಾಗಿದೆ.

ಸಂಸತ್ತಿನಲ್ಲಿ ಈ ಕುರಿತು ಚರ್ಚೆ ನಡೆದಾಗ, ಪ್ರತಿಪಕ್ಷದ ಸಂಸದರು ಮಸೂದೆಯನ್ನು ಆಯ್ಕೆ ಸಮಿತಿ ಕಳುಹಿಸುವಂತೆ ಕೇಳಿಕೊಂಡಿದ್ದರೂ ಅದು ಸಾಧ್ಯವಾಗಿರಲಿಲ್ಲ. ನೊಂದವರೊಂದಿಗೆ ಸಂವಾದ ನಡೆಸಿ ನಂತರದಲ್ಲಿ ಈ ಮಸೂದೆಯನ್ನು ಜಾರಿಗೆ ತರಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಆದರೇ, ಮಾಹಿತಿ ಹಕ್ಕಿನಡಿಯಲ್ಲಿ ಪಡೆದ ದಾಖಲೆಗಳಲ್ಲಿ ಕಾನೂನು ಸಚಿವಾಲಯ ಸಂಬಂಧಪಟ್ಟ ಸಚಿವಾಲಯ, ರಾಜ್ಯ ಸರ್ಕಾರ ಮತ್ತು ಇಲಾಖೆಗಳೊಂದಿಗೆ ಯಾವುದೇ ಸಮಾಲೋಚಬೆಮ ಚರ್ಚೆ ನಡೆಸಿಲ್ಲ ಎಂದು ತಿಳಿಸಲಾಗಿದೆ. ತ್ರಿವಳಿ ತಲಾಖ್‌ನಲ್ಲಿ ಮಹಿಳೆಯರಿಗೆ ಆಗುವ ಅನ್ಯಾಯವನ್ನು ಶೀಘ್ರವಾಗಿ ನಿಲ್ಲಿಸಬೇಕೆಂದು ಯಾವುದೇ ಸಚಿವಾಲಯವನ್ನು ಸಂಪರ್ಕಿಸಿಲ್ಲ ಎಂದು ಕಾನೂನು ಸಚಿವಾಲಯ ತನ್ನ ವಾದವನ್ನು ಮಂಡಿಸಿದೆ.

2017ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್‌ ಅನ್ನು ವಿಚ್ಛೇದನ ರೂಪವೆಂದು ತಿಳಿಸಿತ್ತು. ಮುಸ್ಲಿಮ್ ಮಹಿಳಾ ಮಸೂದೆ(ವಿವಾಹ ಹಕ್ಕು ರಕ್ಷಣೆ)2017 ಅನ್ನು ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವಾಲಯ ಮತ್ತು ಇಲಾಖೆಗಳಿಗೆ ನೀಡಲಾಗಿತ್ತು.

16ನೇ ಲೋಕಸಭೆಯಲ್ಲಿ ಇದನ್ನು ಮೊದಲು ಮಂಡಿಸುವ ಮೂಲಕ ಈ ಮಸೂದೆಗೆ ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು ಕೋರಿತ್ತು. 2014ರಲ್ಲಿ ಜಾರಿಗೆ ತಂದ ಸಮಾಲೋಚನಾ ನೀತಿಯ ಪ್ರಕಾರ ಯಾವುದೇ ಮಸೂದೆಯನ್ನು ಜಾರಿಗೆ ತರಬೇಕಾದರೇ ಮೊದಲು ಸಂಬಂಧಪಟ್ಟ ಸಚಿವಾಲಯ ಅಥವಾ ಇಲಾಖೆಗೆ ತಿಳಿಸಿ ಅವರಿಂದ ಅಭಿಪ್ರಾಯವನ್ನು ಪಡೆದು ಸಂಸತ್ತಿನ ಟಿಪ್ಪಣಿಯಲ್ಲಿ ಸೇರಿಸಬೇಕು.  ಆದರೆ ಕಾನೂನು ಸಚಿವಾಲಯ ತೆಗೆದುಕೊಂಡ ಈ ನಿರ್ಧಾರವು ಈ ನೀತಿಯ ವಿರುದ್ಧವಾಗಿದೆ.

ಯಾವುದೇ ಇಲಾಖೆ ಅಥವಾ ಸಚಿವಾಲಯವು ಶಾಸಕಾಂಗ ಪೂರ್ವ ಸಮಾಲೋಚನೆ ನಡೆಸಲು ಸಾಧ್ಯವಿಲ್ಲ ಎಂದಾದಲ್ಲಿ, ಅದಕ್ಕೆ ಅವರು ಕಾರಣವನ್ನು ನೀಡಬೇಕು ಎಂದು 2014ರ ಸಂಸತ್ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯದರ್ಶಿಗಳ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಇಷ್ಟಾದರೂ, ಕಾನೂನು ಸಚಿವಾಲಯ ತೆಗೆದುಕೊಂಡ ನಿರ್ಧಾರಕ್ಕೆ ಸರಿಯಾದ ಕಾರಣಗಳನ್ನು ನೀಡಿಲ್ಲ.  ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ ಆಚಾರ್ಯ ಇದು ನಿಯಮಗಳ ವಿರುದ್ಧವಾದ ಅನುಷ್ಠಾನಕ್ಕೆ ಒಂದು ಉದಾಹರಣೆಯಾಗಿದೆ ಎಂದರು.

ತ್ರಿವಳಿ ತಲಾಖ್ ಮಸೂದೆಯಲ್ಲೂ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಅಭಿವೃದ್ದಿ ಸಚಿವಾಲಯವನ್ನು ಸಂಪರ್ಕಿಸಬೇಕಿತ್ತು, ಆದರೇ ನಿಯಮಗಳಿಗೆ ವಿರುದ್ಧವಾಗಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಇದು ಮಸೂದೆಯನ್ನು ಅಂಗೀಕರಿಸುವ ಪ್ರಕ್ರಿಯೆಯಲ್ಲ. ಸಂಬಂಧಿತ ಸಚಿವಾಲಯಗಳನ್ನು ಸಂಪರ್ಕಿಸಬೇಕು ಎಂದು ಗೃಹ ಸಚಿವಾಲಯ ತಿಳಿಸಿತ್ತು.

ಪತ್ನಿಗೆ ಪತಿ ಮೌಖಿಕ, ಲಿಖಿತ, ಅಥವಾ ತಾಂತ್ರಿಕ ವ್ಯವಸ್ಥೆಗೆ ಅಂಟಿಕೊಂಡ ಮಾಧ್ಯಮಗಳ ಮೂಲಕ ತಲಾಖ್ (ತಲಾಖ್-ಇ-ಬಿಡಾತ್) ಎಂದು ಮೂರುಬಾರಿ ಹೇಳಿದರೇ ವಿಚ್ಛೇದನವಾಗುತ್ತಿತ್ತು. ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆಯ ಅನ್ವಯ ಇಂತಹ ಘೋಷಣೆಗಳು ಈಗ ಕಾನೂನುಬಾಹಿರ ಮತ್ತು ಅನೂರ್ಜಿತ ಎಂದು ಹೇಳಲಾಗಿತ್ತು. ತಲಾಖ್ ಸಂತ್ರಸ್ತೆ ಹಾಗೂ ಅಕೆಯ ಮಕ್ಕಳಿಗೆ ಗಂಡನಾದವನು ನಿರ್ವಹಣಾ ಭತ್ಯೆಯನ್ನು ನೀಡಬೇಕು ಎಂದು ಈ ಅಧಿಸೂಚನೆ ಹೊರಡಿಸಿತ್ತು.

ಇದು ನಾಗರಿಕತೆಯ ವಿಷಯವಾಗಿದ್ದರೂ, ಯಾವುದೇ ಮೂಲಾಧಾರ ಇಲ್ಲ ಅಪರಾಧವಾಗಿದೆ ಎಂದು ಸರ್ಕಾರವು ತ್ರಿವಳಿ ತಲಾಖ್ ಅನ್ನು ಟೀಕಿಸಿತ್ತು. ಆದರೆ, ತ್ವರಿತ ತಲಾಖ್‌ಗೆ ಬಲಿಯಾದ ಮಹಿಳೆಯರ ಸಂಖ್ಯೆಯ ಕುರಿತು ಸಮೀಕ್ಷೆ ನಡೆಸದೇ, ಮಾಹಿತಿ ಪಡೆಯದೇ ಸರ್ಕಾರವು ಇಂತಹ ನಿರ್ಧಾರಕ್ಕೆ ಹೇಗೆ ಬಂದಿತು ಎಂದು ಪ್ರತಿಪಕ್ಷಗಳು ಕೇಳಲಾರಂಭಿಸಿವೆ.

ಯಾವ ದಾಖಲೆಗಳ ಮೇಲೆ ಈ ಮಸೂದೆಯನ್ನು ರೂಪಿಸಲಾಗಿದೆ ಎಂಬ ಪ್ರಶ್ನೆಗೆ ಮಸೂದೆಯ ದಾಖಲೆಯಲ್ಲಿ ಉತ್ತರ ಇಲ್ಲ. ಇನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾದ, ಗೌಪ್ಯ ಟಿಪ್ಪಣಿಯಲ್ಲೂ ಇದಕ್ಕೆ ಸಂಬಂಧಿಸಿದ ಯಾವುದೇ ಅಂಕಿ ಅಂಶಗಳನ್ನು ಉಲ್ಲೇಖಿಸಲಾಗಿಲ್ಲ. ಆದರೆ ಸುಪ್ರೀಂ ಕೋರ್ಟ್‌ ಆದೇಶದ ನಂತರ 35ನೇ ಪುಟದಲ್ಲಿ ಮುಸ್ಲಿಂ ಪುರುಷರು ಆಶ್ರಯಿಸಿರುವ ತಲಾಖ್-ಎ-ಬಿಡತ್ ಅಭ್ಯಾಸದ ಕೆಲವು ಪ್ರಕರಣಗಳನ್ನು ದಾಖಲಿಸಿದೆ.

2018 ಡಿಸೆಂಬರ್ 12  ರಂದು ರವಿಶಂಕರ್ ಪ್ರಸಾದ್ ಅವರು ಕಾಂಗ್ರೆಸ್ ಸಂಸದೆ ಸುಷ್ಮಿತಾ ದೇವ್ ಕೇಳಿರುವ ಪ್ರಶ್ನೆಗೆ ಲೋಕಸಭೆಯಲ್ಲಿ ಉತ್ತರಿಸಿದ್ದರು. ಅಂದಿನಿಂದ ತ್ರಿವಳಿ ತಲಾಖ್ ಕುರಿತಾಗಿ ನ್ಯಾಯಾಲಯಗಳಲ್ಲಿ  ಒಟ್ಟು 248 ಪ್ರಕರಣಗಳು ದಾಖಲಾಗಿವೆ.