ಆನ್ ಲೈನ್ ಮೂಲಕ ನೌಕರರ ವರ್ಗಾವಣೆ

ಆನ್ ಲೈನ್ ಮೂಲಕ ನೌಕರರ ವರ್ಗಾವಣೆ

ಬೆಂಗಳೂರು ಸಮಾಜ ಕಲ್ಯಾಣ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪಾರದರ್ಶಕತೆ ತರುವ ಸಲುವಾಗಿ  ಆನ್ ಲೈನ್ ಮೂಲಕ 836 ನೌಕರರನ್ನು ವರ್ಗಾವಣೆ ಮಾಡಲಾಗಿದೆ.

ಕೌನ್ಸಿಲಿಂಗ್ ಮೂಲಕ ಸರಳ ವಿಧಾನದಲ್ಲಿ ಎರಡು ದಿನಗಳ ಸಮಾವೇಶದ ನಂತರ ವರ್ಗಾವಣೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.

ಇಲಾಖೆಯ ತಾಲ್ಲೂಕು ಹಾಗೂ ಜಿಲ್ಲಾ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸೇರಿದಂತೆ ವಸತಿ ನಿಲಯಗಳ ವಾರ್ಡನ್’ಗಳು ಹಾಗೂ ಶಿಕ್ಷಕರಿಗೆ ಆನ್’ಲೈನ್ ಮೂಲಕ ಮೂರು ಆದ್ಯತೆಗಳ ಮೇಲೆ ಸ್ಥಳ ಕೋರಲು ಅವಕಾಶ ಕಲ್ಪಿಸಲಾಗಿತ್ತು

ನಿನ್ನೆ ಹಾಗೂ ಇಂದು ದೇವರಾಜ ಅರಸ್ ಭವನಕ್ಕೆ ಅಪೇಕ್ಷಿತರನ್ನು ಕರೆಯಿಸಿ, ಅವರು ಕೋರಿದ್ದ ಸ್ಥಳಗಳಿಗೆ ಅಥವಾ ಲಭ್ಯವಿಲ್ಲದ ಸಂದರ್ಭಗಳಲ್ಲಿ,  ಅವರು ಆಯ್ಕೆ ಮಾಡುವ ಖಾಲಿ ಸ್ಥಳಗಳಿಗೆ ವರ್ಗಾವಣೆ ಮಾಡಿಕೊಡಲಾಯಿತು.

 ಈ ಪ್ರಕ್ರಿಯೆಯಲ್ಲಿ ಪ್ರತಿ ನೌಕರರ ವರ್ಗಾವಣೆ ಗರಿಷ್ಠ 10 ನಿಮಿಷಗಳಲ್ಲಿ ಮುಕ್ತಾಯಗೊಂಡಿದ್ದು ವಿಶೇಷವಾಗಿತ್ತು ಎಂದು ತಿಳಿಸಿದರು .

ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್ ಎರಡೂ ದಿನ ಸ್ಥಳದಲ್ಲಿದ್ದು  ವರ್ಗಾವಣೆ ಪತ್ರಗಳನ್ನು ನೀಡಿದರು. ಇಲಾಖೆಯ 635 ನೌಕರರು ಆನ್’ಲೈನ್ ಮೂಲಕ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು.

ದೀರ್ಘ ಕಾಲ ಒಂದೇ ಸ್ಥಳದಲ್ಲಿದ್ದು 201 ನೌಕರರು ಸೇರಿದಂತೆ ಇನ್ನೂ 836 ಮಂದಿಗೆ ವರ್ಗಾವಣೆ ದೊರಕಿದೆ ಎಂದು ಹೇಳಿದರು