ಇಂದು  ವಿಶ್ವ ಶೌಚಾಲಯ ದಿನ

 ಇಂದು  ವಿಶ್ವ ಶೌಚಾಲಯ ದಿನ

ವಿಶ್ವ ಶೌಚಾಲಯ ದಿನ ಜಾಗತಿಕ ನೈರ್ಮಲ್ಯ ಬಿಕ್ಕಟ್ಟಿನ ವಿರುದ್ಧ ಕ್ರಮ ಕೈಗೊಳ್ಳಲು ನವೆಂಬರ್ 19 ರಂದು ಅಧಿಕೃತವಾಗಿ ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಶೌಚಾಲಯ  ದಿನವಾಗಿ ಆಚರಿಸಲಾಗುತ್ತದೆ. ವಿಶ್ವ ಶೌಚಾಲಯ ದಿನವನ್ನು ವಿಶ್ವಸಂಸ್ಥೆ 2001 ರಲ್ಲಿ ಜಾರಿಗೆ ತಂದಿತ್ತು. ಹನ್ನೆರಡು ವರ್ಷಗಳ ನಂತರ, ವಿಶ್ವ ಸಂಸ್ಥೆಯ  ಜನರಲ್ ಅಸೆಂಬ್ಲಿ 2013 ರಲ್ಲಿ ವಿಶ್ವ ಶೌಚಾಲಯ ದಿನವನ್ನು ಆಧಿಕೃತವಾಗಿ ಘೋಷಿಸಿತು.

ಶೌಚಾಲಯಗಳು ನಿರ್ಮಾಣ ಮಾಡುವುದರಿಂದ   ಸಾರ್ವಜನಿಕರ ಆರೋಗ್ಯ, ಮಾನವ ಘನತೆ ಮತ್ತು ವೈಯಕ್ತಿಕ ಸುರಕ್ಷತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ, ಇನ್ನೂ ಬಯಲು ಶೌಚ ಮಾಡುದರಿಂದ  ಗಂಭೀರವಾದ ಹಾಗೂ ಮಾರಣಾಂತಿಕ ರೋಗಗಳು ಹರಡುತವೆ ಮುಂತಾದ ಜಾಗೃತಿಯನ್ನು ಮೂಡಿಸುವುದು ಈ ದಿನಾಚರಣೆಯ ಉದ್ದೇಶ.

ವಿಶ್ವ ಶೌಚಾಲಯ ದಿನದ  ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು   ನೈರ್ಮಲ್ಯದಲ್ಲಿ ಭಾರತದ ಅಸಾಧಾರಣ ಸಾಧನೆಯತ್ತ ಮುನ್ಗುತ್ತಿದೆ. ಜಾಗತಿಕ ನೈರ್ಮಲ್ಯ ದಿನವನ್ನು ನಿಭಾಯಿಸಲು ಕ್ರಮವನ್ನು ಪ್ರೇರೇಪಿಸಲು ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನ ಎಂದು ವಿಶ್ವಸಂಸ್ಥೆ ಘೋಷಿಸಲಾಗಿದೆ. ದೇಶದಲ್ಲಿ ನೈರ್ಮಲ್ಯ ಕ್ಷೇತ್ರವನ್ನು ಮುಂಚೂಣಿಗೆ ತರುವಲ್ಲಿ  ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಅಪಾರವಾಗಿದೆ ಎಂಬುದನ್ನು ಇದೇ ಸಂದರ್ಭದಲ್ಲಿ ನೆನೆಯಬಹುದಾಗಿದೆ.

21 ನೇ ಶತಮಾನದಲ್ಲಿಯು  ವಿಶ್ವದ ಅನೇಕ ದೇಶಗಳಲ್ಲಿ  ತೆರೆದ  ಸ್ಥಳಗಳಲ್ಲಿ ಮಲವಿಸರ್ಜನೆ ಮಾಡುತ್ತಿದ್ದು,  ನೈರ್ಮಲ್ಯ ಮತ್ತು ಶೌಚಾಲಯಗಳ ಅಲಭ್ಯತೆಯ ಸಮಸ್ಯೆಯನ್ನು ಎದುರಿಸುತ್ತಿವೆ. ಈ ಸಮಸ್ಯೆಯನ್ನು ನಿಭಾಯಿಸಲು ವಿಶ್ವ ಶೌಚಾಲಯ ಸಂಸ್ಥೆ 2001 ರಲ್ಲಿ ವಿಶ್ವ ಶೌಚಾಲಯ ದಿನವನ್ನು ಘೋಷಿಸಿದೆ. ಈ ದಿನವನ್ನು ವಿಶ್ವ ಸಂಸ್ಥೆ 2013 ರಲ್ಲಿ ಅಧಿಕೃತವಾಗಿ ಗುರುತಿಸಿತು, ಅಭಿಯಾನವನ್ನು ಆರಂಭಿಸಲು ವಿಶೇಷ ಯೋಜನೆಯನ್ನು ಪ್ರಾರಂಭಿಸಿತು.

ವಿಶ್ವಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ 4.2 ಬಿಲಿಯನ್ ಜನರಿಗೆ ಸುರಕ್ಷಿತವಾದ ನೈರ್ಮಲ್ಯ ಸೌಲಭ್ಯ  ದೊರೆತಿಲ್ಲ ಮತ್ತು ಸುಮಾರು 673 ಮಿಲಿಯನ್ ಜನರು ಬಯಲು ಮಲವಿಸರ್ಜನೆ ಮಾಡುತ್ತಾರೆ. ಈ ಸಂಖ್ಯೆಯ ಬಹುಪಾಲು  ಭಾರತದಿಂದ  ಗೋಚರಿಸುತ್ತಿತು.  ಪ್ರಧಾನ ಮಂತ್ರಿ ನರೇಂದ್ರ ಮೋದಿ  ಅಟ್ಟೋಬರ್ 2, 2014ರ ಗಾಂಧಿ ಜಯಂತಿ ದಿನ  ಆರಂಭಿಸಿದ   ಸ್ವಚ್ಚ ಭಾರತ ಅಭಿಯಾನ   ಬಯಲಿನಲ್ಲಿ ಶೌಚಾ ಮಾಡುವರ ಸಂಖ್ಯೆಯನ್ನು ಕ್ರಮೇಣ ಕಡಿಮೆ ಗೊಳಿಸಿದ್ದಲ್ಲದೆ, ಶೌಚಾಲಯ ನಿರ್ಮಾಣಕ್ಕೆ ನಾಂದಿ ಹಾಡಿದೆ ಎಂದು ಸರ್ಕಾರ ಹೇಳುತ್ತಿದೆ.  ಎಷ್ಟೇ ವಿದ್ಯಾವಂತರಾದರೂ ತಮ್ಮ ಮನೆಯ ಸುತ್ತಮುತ್ತಲ ಸ್ವಚ್ಚತೆಯನ್ನು ಮಾತ್ರ ಕಾಪಡುತ್ತಾರೆ ಹೊರತು ಸಮಾಜವನಲ್ಲ. ಯಾಕೆಂದರೆ ಸುಮಾರು ಜನ ತಾವು ಸಾಕಿರುವ ನಾಯಿಯನ್ನು ಶೌಚ ಮಾಡಿಸಲು ಸಮಾಜವನ್ನೇ ನಂಬಿರುವುದು ವಿಪರ್ಯಾಸವೇ ಸರಿ.