ಗ್ರಾಂಸಿಯ ಸಿದ್ಧಾಂತದ ಉಗಮ ಮತ್ತು ವಿಕಾಸ

ಗ್ರಾಂಸಿಯ ಸಿದ್ಧಾಂತದ ಉಗಮ ಮತ್ತು ವಿಕಾಸ

(ಕಳೆದ ಭಾನುವಾರದಿಂದ)

‘ಗ್ರಾಮೀಣ ಬದುಕಿನ ಮೂರ್ಖತನ’(ಈಡಿಯಾಸಿ ಆಫ್ ರೂರಲ್ ಲೈಫ್), ರೈತರ ಕ್ರೌರ್ಯ ಹಾಗೂ ಕ್ರಾಂತಿಕಾರಿಯಾದ ನಗರ ಸಂವೇದನೆಯುಳ್ಳ ಕೈಗಾರಿಕಾ ಕಾರ್ಮಿಕರ ನಡುವೆ ಕಂಡುಬಂದ ವೈರುಧ್ಯಗಳನ್ನು ಗಮನಿಸಿದ ಗ್ರಾಂಸಿಯು ರೈತರು ರಾಜಕೀಯವಾಗಿ, ಸಾಂಸ್ಕಂತಿಕವಾಗಿ ಮತ್ತು ಸಾಮಾಜಿಕವಾಗಿ ಜೀವಂತವಿರುವ ಶಕ್ತಿ ಎಂದೆನ್ನುತ್ತಾನೆ. ಈ ಶಕ್ತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬಹಳ ಎಚ್ಚರಿಕೆಯ ವಿಮರ್ಶೆ, ಅವಲೋಕನ ಅಗತ್ಯ ಎನ್ನುತ್ತಾನೆ.

ಈ ಹಿನ್ನೆಲೆಯಲ್ಲಿ ಜನರ ನಂಬಿಕೆಗಳನ್ನು ಮತ್ತು ಜಾನಪದವನ್ನು ಗಣನೆಗೆ ತೆಗೆದುಕೊಳ್ಳುವುದು ಸೂಕ್ತ ಎಂದು ಅವನು ಸಲಹೆ ಮಾಡಿದ್ದಾನೆ. ಗ್ರಾಂಸಿಯ ಚಿಂತನೆ ಮಾದರಿಗಳನ್ನು ಭಾರತೀಯ ರೈತರ ಬಗ್ಗೆ ಅಧ್ಯಯನ ನಡೆಸಿದ ಸಂದರ್ಭದಲ್ಲಿ ಸಬಾಲ್ಟರ್ನ್ ಸ್ಟಡೀಸ್‍ನ ಮೂರು ಸಂಪುಟಗಳಲ್ಲಿ(1982, 1983, 1984) ರಣಜಿತ್ ಗುಹಾ ಅವರು ಚರ್ಚಿಸಿದ್ದಾರೆ.

ಸಬಾಲ್ಟರ್ನ್ ಚಿಂತಕರು ಮುಂದಿನ ಹಂತಗಳಲ್ಲಿ ಗ್ರಾಂಸಿಯ ಮಾದರಿಯನ್ನು ಭಾರತದ ಚರಿತ್ರೆಯನ್ನು ನಿರ್ವಚಿಸುವ ಸಂದರ್ಭದಲ್ಲಿ ಬಳಸಿಕೊಂಡರು. ಈ ಮೂಲಕ ಭಾರತದ ಚರಿತ್ರೆ ರಚನಾ ಪರಂಪರೆಯಲ್ಲಿ ‘ಮಹಾತ್ಮ’ ಗ್ರಾಂಸಿಯ ಹೆಸರೂ ಸೇರಿಕೊಂಡಿತು ಎಂದು ಡೇವಿಡ್ ಅರ್ನಾಲ್ಡ್ ವಿವರಿಸುತ್ತಾರೆ. ಕೃತಿಯ ಈ ಭಾಗವನ್ನು ವಿವರಿಸಲು ಡೇವಿಡ್ ಅರ್ನಾಲ್ಡ್ ಅವರ ‘‘ಗ್ರಾಂಸಿ ಆ್ಯಂಡ್ ಪೆಸೆಂಟ್ ಸಬಾಲ್ಟರ್ನಿಟಿ ಇನ್ ಇಂಡಿಯಾ’’ ಎನ್ನುವ ಲೇಖನವನ್ನು ಬಳಸಿಕೊಳ್ಳಲಾಗಿದೆ. ಮಾಕ್ರ್ಸಿಸಂ ಅನ್ನು ಬಹಳಷ್ಟು ಮಂದಿ ಕಬ್ಬಿಣದ ಕಡಲೆಯ ತರಹ ಜಟಿಲಗೊಳಿಸುವುದನ್ನು ತೀವ್ರವಾಗಿ ವಿರೋದಿsಸುತ್ತಿದ್ದ ಗ್ರಾಂಸಿಯ ನಿಲುವನ್ನು ಇಲ್ಲಿ ಗಮನಿಸಬಹುದು.


ಗ್ರಾಂಸಿಯು 1920ರ ದಶಕದಲ್ಲಿ ಇಟಲಿಯ ರೈತಹೋರಾಟಗಳನ್ನು ಉಗ್ರವಾಗಿ ಪ್ರತಿಪಾದಿಸುತ್ತಿದ್ದ. ಇಟಲಿಯ ದಕ್ಷಿಣ ಭಾಗವು ರೈತಾಪಿ ಜನರಿಂದ ಆವೃತವಾಗಿದ್ದು ಅವರ ರೋದನವನ್ನು ಸೈದ್ಧಾಂತಿಕವಾಗಿ ಹಾಗೂ ಹೋರಾಟದ ಮೂಲಕ ಹೋಗಲಾಡಿಸಲು ಆತನು ಕಟಿಬದ್ಧನಾಗಿದ್ದ. ಇಟಲಿಯ ಉತ್ತರಭಾಗದಲ್ಲಿ ಪ್ರಬಲವಾಗಿದ್ದ ಕಾರ್ಖಾನೆಗಳ ಕಾರ್ಮಿಕರ ಬಗ್ಗೆ ಆ ಕಾಲದ ಇಟಾಲಿಯನ್ ಸೋಷಿಯಲಿಸ್ಟ್ ಪಾರ್ಟಿಗಳು ಸಹಾನುಭೂತಿ ತೋರಿಸುತ್ತಿದ್ದ ಸಂದರ್ಭದಲ್ಲಿ ಗ್ರಾಂಸಿಯು ದಕ್ಷಿಣದವರ ಪ್ರಶ್ನೆಗಳನ್ನು(ಸದರನ್ ಕ್ವೆಶ್ಚನ್) ಪಾರ್ಟಿಯು ನಿರ್ಣಯಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ. ಉತ್ತರ ಇಟಲಿಯ ಉದ್ದಿಮೆದಾರರಿಗೆ, ಬ್ಯಾಂಕರ್ ಗಳಿಗೆ ಮತ್ತು ಅಧಿಕಾರಶಾಹಿಗಳಿಗೆ ದಕ್ಷಿಣದ ರೈತರು ಅಡಿಯಾಳಾಗಿರುವುದನ್ನು ಗ್ರಾಂಸಿಯು ಪ್ರಬಲವಾಗಿ ವಿರೋಧಿಸಿದ ಅಂಶಗಳನ್ನು ಈಗಾಗಲೆ ಚರ್ಚಿಸಲಾಗಿದೆ.

ಇದನ್ನು ಇಟಲಿಯ ರಾಷ್ಟ್ರೀಯ ಪ್ರಶ್ನೆಯನ್ನಾಗಿ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ ಗ್ರಾಂಸಿಯು ರೈತರ ಬವಣೆಯನ್ನು ಇಟಾಲಿಯನ್ ಕಮ್ಯುನಿಸ್ಟ್ ಪಾರ್ಟಿಯು ತನ್ನ ಸಿದ್ಧಾಂತ ಮತ್ತು ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡು ಹೋರಾಟದ ಭಾಗವನ್ನಾಗಿ ಮುಂದುವರಿಸಬೇಕೆಂದು ಆಗ್ರಹಿಸಿದನು. 1917ರಲ್ಲಿ ರಷ್ಯಾದ ಕ್ರಾಂತಿಯಾಗುವ ಹೊತ್ತಿಗೆ ಗ್ರಾಂಸಿಯು ರೈತರೆಲ್ಲರೂ ಒಗ್ಗಟ್ಟಾಗಿ ಇಟಲಿಯ ಬೂಜ್ರ್ವಾ ರಾಜ್ಯದ ಅದಿsಕಾರವನ್ನು ಕೊನೆಗಾಣಿಸಬೇಕೆಂದು ಕರೆ ನೀಡಿದ್ದು ಸರಿಯಷ್ಟೆ. ರೈತರ ಸಂಖ್ಯೆಯು ಇಟಲಿಯಲ್ಲಿ ಪ್ರಧಾನವಾಗಿರುವುದರಿಂದ ರೈತರು ನಡೆಸುವ ಕ್ರಾಂತಿಯು ಸಫಲವಾಗುತ್ತದೆ ಎಂದು ಈತ ಪ್ರಬಲವಾಗಿ ನಂಬಿದ್ದನು. 


1919-20ರ ಸುಮಾರಿಗೆ ಕೈಗಾರಿಕಾ ಕೇಂದ್ರವಾದ ಟ್ಯೂರಿನ್‍ನಲ್ಲಿ ಸಂಘಟಿಸಲಾದ ಫ್ಯಾಕ್ಟರಿ ಕೌನ್ಸಿಲ್ ಚಳವಳಿಯು ಕೇವಲ ಕಾರ್ಮಿಕರಿಂದ ಸಫಲವಾಗಿ ನಡೆಯಲು ಸಾಧ್ಯವಿಲ್ಲವೆಂದು ಸ್ವತಃ ಆ ಚಳವಳಿಯಲ್ಲಿ ಭಾಗವಹಿಸಿದ್ದ ಗ್ರಾಂಸಿಗೆ ಅರಿವಾಗಿತ್ತು. ಬೂಜ್ರ್ವಾಸಿ ರಾಜ್ಯವನ್ನು ಕಿತ್ತೊಗೆಯಬೇಕಾದರೆ ಇಟಲಿಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ರೈತರೊಂದಿಗೆ ಕಾರ್ಮಿಕರು ಕೈಜೋಡಿಸಿದರೆ ಮಾತ್ರ ಸಾಧ್ಯ ಎಂದು ಗ್ರಾಂಸಿಯು ನಂಬಿದ್ದನು. ಫ್ಯಾಕ್ಟರಿ ಕೌನ್ಸಿಲ್ ಚಳವಳಿಯ ಭಾಗವೇ ಆಗಿದ್ದ ಗ್ರಾಂಸಿಯು, 1919-20ರಲ್ಲಿ ಕೈಗಾರಿಕಾ ವಲಯವಾದ ಟ್ಯೂರಿನ್ ನಗರದಲ್ಲಿದ್ದ ಫ್ಯಾಕ್ಟರಿ ಚಳವಳಿಯ ವಿಫಲತೆಗೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಮುಖ್ಯ ಕಾರಣವೆಂದು ತನ್ನ ಸಿದ್ಧಾಂತವನ್ನು ಮಂಡಿಸಿದ್ದನು.

ವ್ಯತಿರಿಕ್ತವಾಗಿ ನಗರಕೇಂದ್ರಗಳಲ್ಲಿ ಹುಟ್ಟುವ ಕ್ರಾಂತಿಕಾರಿ ಚಳವಳಿಯನ್ನು ಅದರಲ್ಲಿಯೂ 1917ರ ಸಂದರ್ಭದಲ್ಲಿ ಟ್ಯೂರಿನ್ನಿನಲ್ಲಿ ನಡೆದ ಹೋರಾಟವನ್ನು ಹತ್ತಿಕ್ಕಲು ವ್ಯವಸ್ಥೆಯು ದಕ್ಷಿಣ ಇಟಲಿಯ ಸಾರ್ಡೀನಿಯದ ರೈತರೇ ಸೈನಿಕರಾಗಿರುವ ಸಶಸ್ತ್ರ ಪಡೆಗಳನ್ನು ಬಳಸಿಕೊಂಡಿದ್ದನ್ನು ದಾಖಲಿಸಿದ್ದಾನೆ. ಇಂತಹ ವೈರುಧ್ಯಗಳಿಂದ ಹೊರಬರಲು ಕಾರ್ಮಿಕ-ರೈತರ ಸಮನ್ವಯತೆ ಅನಿವಾರ್ಯ ಹಾಗೂ ಈ ಎರಡು ಗುಂಪುಗಳು ಸಂಘಟಿತವಾಗಿ ಹೋರಾಡಬೇಕು ಎಂದು ತನ್ನ ಅನುಭವದಲ್ಲಿ ಕಂಡ ಸತ್ಯವನ್ನು ಉಳಿದವರಿಗೆ ನಿವೇದಿಸುತ್ತಾನೆ.

ನಗರಗಳಲ್ಲಿ ಪ್ರಬಲವಾಗಿರುವ ಕ್ರಾಂತಿಕಾರಿ ಹೋರಾಟಗಳಿಂದ ಗ್ರಾಮಗಳ ರೈತರ ಆಶಯಗಳಿಗೆ ಹಿನ್ನಡೆಯಾಗುತ್ತದೆ ಎಂದ ಗ್ರಾಂಸಿಯು ಈ ಕಾರಣಗಳಿಂದಾಗಿ ನಗರಕೇಂದ್ರಗಳಲ್ಲಿನ ಕಾರ್ಮಿಕರ ಮತ್ತು ಬಡರೈತರ ಸಹಯೋಗದೊಂದಿಗೆ ಹೋರಾಟ ಮುಂದುವರಿಯಬೇಕೆಂದು ಆಶಿಸಿದನು. 
ಬಹುತೇಕ ಸೋಶಿಯಲಿಸ್ಟರಿಗಿಂತ ಮತ್ತು ಕಮ್ಯುನಿಸ್ಟರಿಗಿಂತ ವ್ಯತಿರಿಕ್ತವಾಗಿ ಗ್ರಾಂಸಿಯು ನಿರ್ಲಕ್ಷ್ಯಕ್ಕೊಳಗಾದ ದಕ್ಷಿಣದ ರೈತರಿಗೆ ಸ್ಫೂರ್ತಿ ನೀಡುವ ನಾಯಕತ್ವ ಬೇಕೆಂದು ಹೋರಾಟ ಮಾಡಿದ್ದನ್ನು ಗಮನಿಸಬಹುದಾಗಿದೆ.

ಮೊದಲನೆಯ ಮಹಾಯುದ್ಧದ ಬಳಿಕ ಇಟಲಿಯಲ್ಲಿ ಕಾರ್ಮಿಕರ ಮತ್ತು ರೈತರ ನೇತೃತ್ವದ ಹೋರಾಟವು ಇಟಲಿಯನ್ನು ಕಬಂಧ ಶಕ್ತಿಗಳಿಂದ ಮುಕ್ತಿಗೊಳಿಸುತ್ತದೆ ಎಂಬ ಆಶಾ ಭಾವನೆಯೂ ಅವನಿಗಿತ್ತು. 1926ರ ಹೊತ್ತಿಗೆ ಗ್ರಾಂಸಿಯು “ಸಮ್ ಆಸ್ಪೆಕ್ಟ್ನ್ಸ್ ಆಫ್ ದಿ ಸದರನ್ ಕ್ವೆಶ್ಚನ್” ಎನ್ನುವ ಲೇಖನವನ್ನು ಪೂರ್ಣಗೊಳಿಸುವ ಮೊದಲೇ ಇಟಲಿಯ ಫಾಸಿಸ್ಟ್ ಸರಕಾರದಿಂದ ಬಂಧನಕ್ಕೊಳಗಾದನು. ನಂತರದ ವರ್ಷಗಳಲ್ಲಿ ಅವನು ಜೈಲಿನಲ್ಲಿ ಬರೆದ “ನೋಟ್ಸ್”ಗಳು ಹೇಗೆ ಪ್ರಬಲವರ್ಗಗಳು ಚಾರಿತ್ರಿಕವಾಗಿ ರೈತರನ್ನು ತಮ್ಮ ಅಧೀನಕ್ಕೊಳಪಡಿಸಿದರು ಎನ್ನುವ ವಿಚಾರಗಳತ್ತ ವಿವರಗಳನ್ನು ತಿಳಿಸುತ್ತವೆ.

ಯಾವ್ಯಾವ ಕಾರಣಕ್ಕಾಗಿ ರೈತರ ಹೋರಾಟಗಳು ತಮ್ಮ ಆಳರಸರನ್ನು ರಾಜ್ಯಾದಿsಕಾರದಿಂದ ಹೊರತಳ್ಳಲು ವಿಫಲವಾದವು ಅಥವಾ ರೈತರು ತಮ್ಮ ಅದಿsಕಾರವನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗಳನ್ನು ತನ್ನ  “ಪ್ರಿಸನ್ ನೋಟ್ಸ್”ನಲ್ಲಿ ಚರ್ಚಿಸಿದ್ದಾನೆ. ಇಂತಹ ಪ್ರಶ್ನೆಗಳನ್ನು ಗ್ರಾಂಸಿಯು ಕೇಳಿದ ಸಂದರ್ಭದಲ್ಲಿ ಅಥವಾ ಅದಕ್ಕೆಲ್ಲ ಉತ್ತರ ಹುಡುಕುವ ಸಂದರ್ಭದಲ್ಲಿ ಗ್ರಾಂಸಿಯು ಕೈಗಾರಿಕಾಕೇಂದ್ರಿತ ಕಾರ್ಮಿಕಶಕ್ತಿಯನ್ನು ಅವಗಣನೆಗೆ ತೆಗೆದುಕೊಂಡನೆಂದಲ್ಲ. ಕಾರ್ಮಿಕರು ಕ್ರಾಂತಿಯನ್ನು ಯಶಸ್ವಿಯಾಗಿ ಮುಂದುವರಿಸಲು ಕಾರ್ಮಿಕ ಮತ್ತು ರೈತರ ಸಹಯೋಗ ಅಗತ್ಯ ಎಂದು ಬಿಂಬಿಸುವುದು ಅವನ ಸೈದ್ಧಾಂತಿಕತೆಯಾಗಿತ್ತು. ಆ ಮೂಲಕ ದುಡಿಯುವ ವರ್ಗಗಳು ಬಂಡವಾಳಶಾಹಿ ಮತ್ತು ಬೂಜ್ರ್ವಾ ರಾಜ್ಯವನ್ನು ಕೊನೆಗಾಣಿಸಬಹುದಾಗಿದೆ ಎಂದು ಆತ ಬರೆದಿದ್ದಾನೆ.

ಈ ಬಗೆಯ ಸಹಯೋಗವು ರಾಜಕೀಯ ಅವಕಾಶವಾದಕ್ಕಲ್ಲ. ಒಂದು ವೇಳೆ ಹಾಗಾದರೆ ರೈತಾಪಿವರ್ಗವು ಮತ್ತೊಮ್ಮೆ ಸಂಕಷ್ಟಕ್ಕೀಡಾಗುತ್ತದೆ ಎಂದು ಅವನು ಎಚ್ಚರಿಸುತ್ತಾನೆ. ಉತ್ತರ ಇಟಲಿಯ ಬಂಡವಾಳಶಾಹಿ ಮತ್ತು ಬೂಜ್ರ್ವಾ ರಾಜ್ಯದ ದಮನಕಾರಿ ಕಾರ್ಯಗಳನ್ನು ಕೊನೆಗಾಣಿಸಲು ರೈತರು ಕ್ರಾಂತಿಕಾರಿಗಳಾಗುವುದು ಅಗತ್ಯಎಂದು ಗ್ರಾಂಸಿಯು ಅಬಿsಪ್ರಾಯಪಟ್ಟಿದ್ದಾನೆ. ಉತ್ತರ ಮತ್ತು ದಕ್ಷಿಣ ಇಟಲಿಯವರ ನಡುವೆ ಕಂದಕ ಏರ್ಪಡದಿರಲು ಉತ್ತರದ ಕಾರ್ಮಿಕ ವಲಯವು ದಕ್ಷಿಣದ ರೈತರ ಸಮಸ್ಯೆಗಳನ್ನು ತಮ್ಮ ಸಮಸ್ಯೆ ಎಂದು ಬಗೆದರೆ ಆ ಬಗೆಯ ಕಂದಕಗಳಾಗುವುದಿಲ್ಲ.

ಆ ಮೂಲಕ ದಕ್ಷಿಣದ ರೈತರೆಂದರೆ ದೈಹಿಕವಾಗಿ ಕುಗ್ಗಿದವರು ಮತ್ತು ನಿರಂತರ ಹಿಂದುಳಿಕೆಯಲ್ಲಿರುವವರು ಎನ್ನುವ ಪಾರಂಪರಿಕ ಪೂರ್ವಗ್ರಹದಿಂದ ಉತ್ತರ ಇಟಲಿಯವರು ಹೊರಬರಬಹುದು ಎಂದು ಅಬಿsಪ್ರಾಯಪಟ್ಟಿದ್ದಾನೆ. ಅದಿsಕಾರ ವರ್ಗದವರು ಹುಟ್ಟುಹಾಕಿದ ರೈತರ ಕುರಿತಾದ ಮಿಥ್‍ಗಳು ಅದಿsಕಾರವರ್ಗದ ಹೆಜಿಮನಿಯ ಪಾರುಪತ್ತೆಗಾಗಿ ಸಬಾಲ್ಟರ್ನ್ ವರ್ಗಗಳು ಪರಸ್ಪರ ಕಚ್ಚಾಡಲು ಪ್ರೇರೇಪಿಸಿದೆ ಎಂಬ ಅಂಶವನ್ನೂ ಗ್ರಾಂಸಿಯು ಚರ್ಚಿಸಿದ್ದಾನೆ. 


ಒಮ್ಮೆ ಕ್ರಾಂತಿಯ ಹೋರಾಟ ಮುಗಿದ ನಂತರ ಫ್ಯಾಕ್ಟರಿ ಕೌನ್ಸಿಲ್ ಹೋರಾಟದ ಅಂಶಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ವಿಸ್ತರಿಸಿ ಅದರೊಳಗೆ ರೈತ ಸಮುದಾಯಗಳು ಪಾಲ್ಗೊಳ್ಳಬೇಕೆಂದು, ಹಾಗೆಯೇ ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಂತರಗಳನ್ನು ಕಡಿಮೆ ಮಾಡಬೇಕೆಂದು ಆತ ಆಶಿಸಿದ್ದನು. ಫ್ಯಾಕ್ಟರಿ ಕೌನ್ಸಿಲ್ ಚಳವಳಿಯಲ್ಲಿದ್ದ ಆಶಯದಂತೆ ವ್ಯವಸ್ಥೆಯ ಕಟ್ಟಕಡೆಯ ಮನುಷ್ಯನು ವ್ಯವಸ್ಥೆಯ ಭಾಗವಾಗುವಂತೆ, ರೈತಾಪಿ ವರ್ಗಗಳು ಕೂಡ ತಮ್ಮ ಉತ್ಪಾದನಾ ವ್ಯವಸ್ಥೆಯ ಭಾಗವಾಗಿರತಕ್ಕದ್ದು ಎಂದು ಅವನು ನಂಬಿದ್ದನು.

\ನಗರದ ತಂತ್ರಜ್ಞಾನ ಮತ್ತು ಸಂಪನ್ಮೂಲಗಳ ಮೂಲಕ ಶೋಷಣೆ ಯಾಗುತ್ತಿರುವ ರೈತರನ್ನು ರಕ್ಷಿಸಬೇಕೆಂದು ಮತ್ತು ಆ ಮೂಲಕ ರೈತ ಸಮುದಾಯಗಳಿಗೂ ತಂತ್ರe್ಞÁನ ಹಾಗೂ ಸಂಪನ್ಮೂಲಗಳ ಸಹಾಯದಿಂದ ಸ್ವಾವಲಂಬಿಗಳನ್ನಾಗಿ ಮಾಡಬೇಕೆಂದು ಗ್ರಾಂಸಿಯು ಕರೆ ನೀಡಿದ್ದನು. 90 ವರ್ಷಗಳ ಹಿಂದೆ ನುಡಿದ ಈ ಮಾತು ಭಾರತದ ಪ್ರಚಲಿತ ವಿದ್ಯಮಾನಗಳನ್ನು ನೋಡಿಯೇ ಬರೆದನೆಂಬಂತೆ ಗ್ರಾಂಸಿಯ ಬರಹಗಳು ಗೋಚರಿಸುತ್ತವೆ.


ಸಾರ್ಡೀನಿಯಾದಲ್ಲಿನ ಗ್ರಾಂಸಿಯ ಬಾಲ್ಯದ ನೆನಪುಗಳಿಂದಾಗಿ ರೈತರ ಸಂಕಷ್ಟದ ಪರಮಾವದಿsಯನ್ನು ಗ್ರಾಂಸಿಯು ಅರ್ಥ ಮಾಡಿಕೊಂಡಿದ್ದನು. ಆ ಕಾರಣದಿಂದಾಗಿಯೇ ರೈತರ ಬಗೆಗಿರುವ ರೊಮ್ಯಾಂಟಿಕ್ ನಿಲುವುಗಳು ಅವನಿಗೆ ಅಸಹನೀಯವಾಗಿತ್ತು. ಭೂತಕಾಲದ ಸೆಂಟಿಮೆಂಟ್‍ಗಳ ಸಹಾಯದಿಂದ ಕೈಗಾರಿಕಾ ಬಂಡವಾಳಶಾಹಿಯನ್ನು ಗೆಲ್ಲಲು ಸಾಧ್ಯವಿಲ್ಲದ್ದನ್ನು ಆತನು ಮನಗಂಡಿದ್ದನು. ಗ್ರಾಂಸಿಯು “ಸೆಲೆಕ್ಷನ್ ಫ್ರಂ ದಿ ಪ್ರಿಸನ್ ನೋಟ್ಸ್”ನಲ್ಲಿ ಭೌತಿಕ ನಿರ್ಧಾರಕತೆಗಳಿಗಿಂತ ಹೆಜಮಾನಿಕ್ ಮತ್ತು ಸಬಾಲ್ಟರ್ನ್ ವರ್ಗಗಳ ಐಡಿಯಾಲಜಿಗಳು ಒಂದು ನಿರ್ದಿಷ್ಟವಾದ ಐತಿಹಾಸಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬರೆದಿದ್ದಾನೆ.

ಸಾಂಪ್ರದಾಯಿಕ ಮಾಕ್ರ್ಸಿಸ್ಟರಿಗೆ ಸಬಾಲ್ಟರ್ನ್ ಸಂವೇದನೆ ಎನ್ನುವ ಸೈದ್ಧಾಂತಿಕತೆಯು ಅಸಂಗತ ಎಂದೆನ್ನಿಸಿದರೂ, ಸಬಾಲ್ಟರ್ನ್ ತಳಹದಿಯ ಕ್ರಾಂತಿಕಾರಿ ಹೋರಾಟವು ನಿರುಪಯೋಗಿ ಮತ್ತು ಅರ್ಥವಿಲ್ಲದ್ದು ಎಂದೆನ್ನಿಸಿದರೂ, ಶುದ್ಧರೂಪದ ಕ್ರಾಂತಿಕಾರಿ ಹೋರಾಟವು ನಡೆಯುವ ಬಗ್ಗೆ ಗ್ರಾಂಸಿಯು ಸಂದೇಹ ವ್ಯಕ್ತಪಡಿಸಿದ್ದಾನೆ. ಚಾರಿತ್ರಿಕತೆಯ ಪ್ರಕ್ರಿಯೆ ಬಗ್ಗೆ, ಅದರ ಸಂಕೀರ್ಣತೆಯ ಬಗ್ಗೆ ಇರುವ ವಿಚಾರವನ್ನು ಬುದ್ಧಿಜೀವಿಗಳು ‘ಭಾಷಾಂತರ’ ಮಾಡಿ ಜನರಿಗೆ ತಲುಪಿಸಬೇಕೆಂಬ ಕರೆಯನ್ನು ಇವನು ನೀಡುತ್ತಾನೆ.


“ವರ್ಗಹಿತಾಸಕ್ತಿ” ಎನ್ನುವುದು ಸಮಾಜದ ಗುಂಪುಗಳ ಒಳಗೇ ಉದಯಿಸಬೇಕೇ ವಿನಾ ಯಾರೋ ಹೊರಗಿನಿಂದ ಬಂದು ಅದನ್ನು ಹೇಳಿ ಅರ್ಥೈಸುವುದಲ್ಲ. ಧುತ್ತನೆ ಭುಗಿಲೇಳುವ ಸಬಾಲ್ಟರ್ನ್‍ಗಳ ಸ್ವಭಾವವನ್ನು ಅರಿಯುವುದು ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಅದರ ಸ್ವರೂಪದ ಮಟ್ಟಿಗೆ ಇಂತಹ ರೈತರ ಸ್ವಭಾವ ಅಥವಾ ರೈತ ಸಮುದಾಯದ ರಚನೆ ಹಸಿಹಸಿಯಾಗಿರುತ್ತದೆ. ಅದು ಶಿಷ್ಟರೂಪದ ತಾರ್ಕಿಕತೆಯನ್ನು ಹೊಂದಿರುವುದಿಲ್ಲ. ಆದರೆ ಅದು ನಂಬಿಕೆಗಳ ಮತ್ತು ಭಾವನೆಗಳ ಅಬಿsವ್ಯಕ್ತಿಯಾಗಿರುತ್ತದೆ. ಏಕೆಂದರೆ ಅವು ತಾರ್ಕಿಕವಾಗಿ ಸರಿ ಅಥವಾ ತಪ್ಪು ಎನ್ನುವ ಕಾರಣಕ್ಕಾಗಿಯಲ್ಲ. ಬದಲಿಗೆ ಅವು ಜನಸಾಮಾನ್ಯರ ಹೃದಯದಿಂದ ಬಂದ ಅಬಿsವ್ಯಕ್ತಿಗಳೆಂಬ ಕಾರಣಕ್ಕಾಗಿ. ಹಾಗಾಗಿ ಇದನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ.


ಆಲ್ಬರ್ಟೋ ಮರಿಯಾ ಸೈರಸ್ ಅವರು ತನ್ನ “ಗ್ರಾಂಸೀಸ್ ಅಬ್ಸರ್ವೇಶನ್ಸ್ ಆನ್ ಫೆÇೀಕ್‍ಲೋರ್” ಎನ್ನುವ ಲೇಖನದಲ್ಲಿ ಗ್ರಾಂಸಿಯ ನಂತರದ ಬರವಣಿಗೆಗಳನ್ನು ವ್ಯಾಖ್ಯಾನಿಸುತ್ತ ಗ್ರಾಂಸಿಯು ಸಬಾಲ್ಟರ್ನ್ ಸಂವೇದನೆಗಳನ್ನು ಕುರಿತು ಮಾಡಿದ ಚರ್ಚೆಗೆ ತಾನೇ ಆ್ಯಂಟಿ ಥೀಸಿಸ್ಸನ್ನು ಮಾಡಿದ ವಿವರಗಳನ್ನು ನೀಡಿದ್ದಾನೆ(ಲಂಡನ್ 1982). ನಕಾರಾತ್ಮಕವಾಗಿ ರೈತರ ಸಂವೇದನೆಗಳನ್ನು ನೋಡುವುದಾದರೆ ಅದಕ್ಕಿರುವ ಮಿತಿಗಳನ್ನು ನೋಡಬೇಕಾಗುತ್ತದೆ ಎನ್ನುತ್ತಾನೆ ಗ್ರಾಂಸಿ. ಎಲ್ಲ ಕಡೆ ಚದುರಿಹೋಗಿರುವ ಮತ್ತು ಐಸೋಲೇಟ್ ಆಗಿರುವ ರೈತ ಸಮುದಾಯಗಳನ್ನು ಒಂದು ‘ಬೃಹತ್ ಸಂಘಟನೆಯ’ ರೂಪದಲ್ಲಿ ನೋಡುವುದು ಸಾಧ್ಯವಾಗುವುದಿಲ್ಲ.

ರೈತರು ತಮ್ಮೊಳಗೇ ತಾವು ಭೂ ಒಡೆಯರು, ತಾವು ಗೇಣಿದಾರರು ಮತ್ತು ತಾವು ಕೃಷಿ ಕೂಲಿಕಾರ್ಮಿಕರು ಎಂದು ರೈತ ಸಮುದಾಯದೊಳಗೇ ಒಡೆದುಹೋಗಿರುವುದರಿಂದ, ಜಮೀನ್ದಾರಿ ಶಕ್ತಿಗಳು ಇಂತಹ ಸನ್ನಿವೇಶದ ದುರ್ಲಾಭವನ್ನು ಪಡೆಯುತ್ತಾರೆ. ಇಟಲಿಯಲ್ಲಿನ ತನ್ನ ಅನುಭವದ ಹಿನ್ನೆಲೆಯಲ್ಲಿ ಕಂಡುಕೊಂಡಂತೆ ರೈತಾಪಿವರ್ಗಗಳು ಸಾಂಪ್ರದಾಯಿಕವಾಗಿ ಅರಾಜಕೀಯರಾಗಿ(ಎಪೆಂಲಿಟಿಕಲ್) ಮತ್ತು ಸೌಮ್ಯರಾಗಿರುವುದರಿಂದ ಆಡಳಿತಶಾಹಿಗಳು ತಮ್ಮ ರಾಜಕೀಯಕ್ಕೆ ಇವರನ್ನು ಬಹಳ ಸುಲಭವಾಗಿ ಬಳಸಿಕೊಳ್ಳುತ್ತಾರೆ.

ಸಬಾಲ್ಟರ್ನ್ ವರ್ಗದಿಂದ ಮುಖ್ಯವಾಗಿ ರೈತಾಪಿ ಸಮುದಾಯಗಳಿಂದ ಸೈನಿಕರನ್ನು ಹಾಗೂ ಮರ್ಸಿನರೀಸ್‍ಗಳನ್ನು (ನಿರ್ದಿಷ್ಟ ಉದ್ದೇಶಕ್ಕಾಗಿ ಹಣಕ್ಕಾಗಿ ಹತ್ಯೆಯನ್ನು ಮಾಡುವವರು) ಆಯ್ಕೆ ಮಾಡಿ ಅವರನ್ನು ತಮ್ಮ ಪುರೋಗಾಮಿ ಮತ್ತು ಗತಕಾಲದ ಪಳೆಯುಳಿಕೆಗಳನ್ನು ಕಾಪಾಡಲು ಬಳಸಿಕೊಂಡಿ ರುವುದನ್ನು ಗ್ರಾಂಸಿಯು ದಾಖಲು ಮಾಡಿದ್ದಾನೆ. ಒಗ್ಗಟ್ಟಾಗಿಲ್ಲದಿರುವುದು ಮತ್ತು ಸಮುದಾಯಪ್ರಜ್ಞೆಯ ಕೊರತೆ ಇಲ್ಲದಿರುವುದು ಸಬಾಲ್ಟರ್ನ್ ಸಿದ್ಧಾಂತದ ಪ್ರಮುಖ ಲಕ್ಷಣವಾಗಿದೆ. ಈ ಸಂಕೀರ್ಣತೆಗಳನ್ನು ರೈತ ಸಮುದಾಯಗಳು ಗ್ರಾಂಸಿಯು ಹೇಳುವ ‘ಕಾಮನ್ ಸೆನ್ಸ್’ ಮೂಲಕ ಅರ್ಥ ಮಾಡಿಕೊಳ್ಳಬೇಕೆನ್ನುತ್ತಾನೆ. ಅವರ ನಂಬಿಕೆಗಳು ಏಕಸ್ವರೂಪವಾಗಿಲ್ಲದಿರುವುದನ್ನು ನಾವು ನೋಡಬಹುದು. 


ರೈತನೊಬ್ಬನ ಆಲೋಚನೆಗಳಲ್ಲಿ ತಾರ್ಕಿಕತೆಯಾಗಲಿ, ಸಿದ್ಧ ಸಿದ್ಧಾಂತಗಳಾಗಲಿ ಇರುವುದಿಲ್ಲ. ಅವನ ಆಲೋಚನೆಗಳಲ್ಲಿ ದ್ವಂದ್ವಗಳಿರುತ್ತವೆ. ಸಾಮಾಜಿಕ ಮತ್ತು ಪ್ರಸ್ತುತ ಸನ್ನಿವೇಶಗಳಲ್ಲಿ ಕಂಡುಬರುವ ಇಂತಹ ಆಲೋಚನೆಗಳು ಒಂದು ತತ್ವವಾಗಿ ಜನಸಾಮಾನ್ಯರಲ್ಲಿ ಗೋಚರಿಸುತ್ತವೆ. ಯಾವುದಾದರೂ ಒಂದು ಹೊಸ ವಿಚಾರಕ್ಕೆ ರೈತರು ತಮ್ಮನ್ನು ತೆರೆದುಕೊಳ್ಳುವುದು ವಿರಳ. ಆದರೆ, ಅವರು ಬಹಳಷ್ಟು ವಿಚಾರಗಳನ್ನು ಮತ್ತು ಬಹು ಬಗೆಯ ವಿನ್ಯಾಸಗಳನ್ನು ತಲೆಯಲ್ಲಿ ತುಂಬಿಕೊಳ್ಳಲು ಯತ್ನಿಸುವುದನ್ನು ಕಾಣಬಹುದಾಗಿದೆ.

ತಾವಿರುವ ಸನ್ನಿವೇಶವು ಬದಲಾದರೂ ಅದರೊಂದಿಗೆ ತಮ್ಮ ವಿಚಾರಗಳು ಬದಲಾಗಲು ಸಮಯ ತೆಗೆದುಕೊಳ್ಳುವ ಮಂದಿ ರೈತರು. ಬಹುತೇಕ ಸಂದರ್ಭಗಳಲ್ಲಿ ರೈತರು ತಮ್ಮೂರಿನ ಜಮೀನ್ದಾರರ ಅಥವಾ ಪೆಟಿ ಬೂಜ್ರ್ವಾಗಳ ವಿರುದ್ಧ ತಗಾದೆ ತೆಗೆಯುವುದಕ್ಕಿಂತ ಹೆಚ್ಚಾಗಿ ನಗರದ ಅದಿsಕಾರಿಗಳ ವಿರುದ್ಧವೇ ತಗಾದೆ ತೆಗೆದಿದ್ದನ್ನು ಗಮನಿಸಬಹುದು ಎನ್ನುತ್ತಾನೆ ಗ್ರಾಂಸಿ.

(ಹಿಂದಿನ ಸಂಚಿಕೆಯಲ್ಲಿ _ ಗ್ರಾಂಸಿಯ ಜೈಲು ದಿನಗಳು)