ನಾವು ಐಪಿಯಲ್ ಆಯೋಜನೆ ಮಾಡುತ್ತೇವೆ ಎಂಬುವುದು ಕೇವಲ ವದಂತಿ : ನ್ಯೂಜಿಲ್ಯಾಂಡ್

ನಾವು ಐಪಿಯಲ್ ಆಯೋಜನೆ ಮಾಡುತ್ತೇವೆ ಎಂಬುವುದು ಕೇವಲ ವದಂತಿ : ನ್ಯೂಜಿಲ್ಯಾಂಡ್

ಕ್ರೂರಿ  ಕೊರೊನಾ  ಸಾಂಕ್ರಾಮಿಕ ರೋಗದ ಕಾರಣ  ಮುಂದೂಡಲ್ಪಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿಯನ್ನು ಆಯೋಜಿಸಲು ತಾವು ಮುಂದಾಗಿದ್ದೇವೆ ಎಂಬ ವರದಿಯನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಳ್ಳಿ ಹಾಕಿದ್ದು,ಇದು‌ ಕೇವಲ‌ ವದಂತಿ ಎಂದು ತಿಳಿಸಿದೆ.

ಈ ಕುರಿತು  ರೇಡಿಯೋ ಸಂದರ್ಶನದಲ್ಲಿ ನ್ಯೂಜಿಲ್ಯಾಂಡ್​ ಕ್ರಿಕೆಟ್​ ಮಂಡಳಿಯ ವಕ್ತಾರ ರಿಚರ್ಡ್​ ಬುಕ್​ ‌ಪ್ರತಿಕ್ರಿಯೆ ನೀಡಿದ್ದು,ಐಪಿಎಲ್​ ಆಯೋಜಿಸುತ್ತೇವೆಂಬ ವರದಿ ಕೇವಲ ವದಂತಿಯಾಗಿದೆ. ನ್ಯೂಜಿಲ್ಯಾಂಡ್​ ಕ್ರಿಕೆಟ್ ಬೋರ್ಡ್ ಐಪಿಎಲ್​ ಆಯೋಜನೆ ಮಾಡಲು ಮುಂದಾಗಿಲ್ಲ. ನಾವು ಹಾಗೆ ಮಾಡುವ ವಿಧಾನವನ್ನು ಹೊಂದಿಲ್ಲ" ಎಂದು ಸ್ಪಷ್ಟ ಪಡಿಸಿದೆ.

13 ನೇ ಆವೃತ್ತಿಯ ಐಪಿಯಲ್ ಟೂರ್ನಮೆಂಟ್​ ಮಾರ್ಚ್‌ನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಕೊರೊನಾದಿಂದ  ಸೆಪ್ಟೆಂಬರ್ ಕೊನೆಯಿಂದ-ನವೆಂಬರ್ ಆರಂಭದೊಳಗೆ ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಈಗಾಗಲೇ ಯುಎಇ ಮತ್ತು ಶ್ರೀಲಂಕಾ ಕ್ರಿಕೆಟ್​ ಮಂಡಳಿಗಳಿ ಐಪಿಎಲ್​ ಆಯೋಜನೆ ಮಾಡುವುದಾಗಿ ಬಿಸಿಸಿಐಗೆ ಆಫರ್​ ಮಾಡಿದೆ.