ಬೃಹತ್ ಕುಸಿತದ ನಂತರ ತೈಲ ಬೆಲೆಯಲ್ಲಿಇಂದು ಸ್ವಲ್ಪ ಚೇತರಿಕೆ

ಬೃಹತ್ ಕುಸಿತದ ನಂತರ ತೈಲ ಬೆಲೆಯಲ್ಲಿಇಂದು  ಸ್ವಲ್ಪ ಚೇತರಿಕೆ

ಸಿಂಗಾಪುರ್: ನಿನ್ನೆ ಶೇ. 30ಕ್ಕಿಂತ ಹೆಚ್ಚು ಕುಸಿತ ಕಂಡ ಕಚ್ಛಾ ತೈಲ ಬೆಲೆ ಇಂದು ಚೇತರಿಸಿಕೊಂಡಿದೆ. ಏಷ್ಯನ್ ಮಾರುಕಟ್ಟೆಯಲ್ಲಿ ತೈಲ ಬೆಲೆ ಶೇ. 6ಕ್ಕಿಂತ ಹೆಚ್ಚು ಬೆಲೆ ಹೆಚ್ಚಳವಾಗಿದೆ. ವೆಸ್ಟ್ ಟೆಕ್ಸಾಸ್ ಇಂಟರ್​ಮೀಡಿಯೇಟ್ ಮಾರುಕಟ್ಟೆಯಲ್ಲಿ ಶೇ. 6.1ರಷ್ಟು ಹೆಚ್ಚಳವಾಗಿದೆ. ಇಲ್ಲಿ ಒಂದು ಬ್ಯಾರಲ್​ಗೆ 33 ಡಾಲರ್​ ಬೆಲೆಯ ಗಡಿ ದಾಟಿದೆ. ಇನ್ನು, ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಶೇ. 6.6ರಷ್ಟು ಹೆಚ್ಚಾಗಿದೆ. ಇಲ್ಲಿ ಒಂದು ಬ್ಯಾರೆಲ್​ಗೆ 36 ಡಾಲರ್​ಗೆ ಮಾರಾಟವಾಗುತ್ತಿದೆ.

ನಿನ್ನೆ ವಿವಿಧ ಮಾರುಕಟ್ಟೆಗಳಲ್ಲಿ ಕಚ್ಛಾ ತೈಲ ಬೆಲೆ ದಿಢೀರ್ ಕುಸಿತ ಕಂಡಿತ್ತು. 1991ರಲ್ಲಿ ಗಲ್ಫ್ ಯುದ್ಧ ನಡೆದ ಸಂದರ್ಭದಲ್ಲಿ ತೈಲ ಬೆಲೆಯಲ್ಲಿ ಭಾರೀ ಕುಸಿತ ಉಂಟಾಗಿತ್ತು. ಅದಾದ ಬಳಿಕ ನಿನ್ನೆಯೇ ಅತೀ ಹೆಚ್ಚು ಕುಸಿತ ಕಂಡಿದ್ದು.

ಕೊರೋನಾ ವೈರಸ್ ರೋಗದಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಬೇಡಿಕೆ ತಗ್ಗಿತ್ತು. ಇದನ್ನು ಎದುರಿಸಲು ರಷ್ಯಾ ದೇಶ ತನ್ನ ತೈಲ ಉತ್ಪಾದನೆಯನ್ನು ತಗ್ಗಿಸುವಂತೆ ಒಪೆಕ್ ರಾಷ್ಟ್ರಗಳು ಮನವಿ ಮಾಡಿಕೊಂಡಿದ್ದವು. ಆದರೆ, ರಷ್ಯಾ ಇದಕ್ಕೆ ಒಪ್ಪಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸೌದಿ ಅರೇಬಿಯಾ ಕೂಡ ಬೆಲೆ ಸಮರಕ್ಕಿಳಿದಿತ್ತು. ತತ್​ಪರಿಣಾಮವಾಗಿ ತೈಲ ಬೆಲೆಗಳು ಸಾಕಷ್ಟು ಇಳಿಕೆ ಕಂಡವು.