ಬದಲಾಗಲಿದೆ ಜಾಗತಿಕ ಆರ್ಥಿಕ ನೋಟ

ಬದಲಾಗಲಿದೆ ಜಾಗತಿಕ ಆರ್ಥಿಕ ನೋಟ

ಮುಂದಿನ ಐದು ವರ್ಷಗಳಲ್ಲಿ ವಿಶ್ವದ ಆರ್ಥಿಕ ನೋಟ ಬದಲಾಗಲಿದೆ. ಸದ್ಯಕ್ಕೇನು  ಚೀನಾ ಮತ್ತು ಅಮೆರಿಕಾ ಭಾರೀ ವ್ಯಾಪಾರ ಪೈಪೋಟಿ ನಡೆಸುತ್ತಿವೆಯೋ ಇದು ಕುಸಿತ ಕಾಣಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.

ಜಾಗತಿಕವಾಗಿ ಶೇ.3 ರಷ್ಟು ಇಳಿಕೆಯಾಗಿ ಶೇ.90 ರಷ್ಟು ದೇಶಗಳಿಗೆ ಇದರ ಬಿಸಿ ತಟ್ಟಲಿದೆ ಎಂದಿರುವ ಮುನ್ನೋಟದಲ್ಲಿ, ಪ್ರಸ್ತುತ ವಿಶ್ವದ ಜಿಡಿಪಿಗೆ ಶೇ. 32.7 ರಷ್ಟು ಕಾಣಿಕೆ ಕೊಡುತ್ತಿರುವ ಚೀನಾ 2024 ರ ವೇಳೆಗೆ 28.3 ಕ್ಕೆ ಕುಸಿಯುತ್ತೆ. ಭಾರತ ಶೇ. 15.5 ರಷ್ಟಕ್ಕೆ ವೃದ್ಧಿ ಕಂಡು, ಅಮೆರಿಕವನ್ನ ಹಿಂದಕ್ಕೆ ಸರಿಸಲಿದೆ. ಅಮೆರಿಕ ಮೂರನೆ ಸ್ಥಾನಕ್ಕೋದರೆ, ಇಂಡೋನೇಷಿಯಾ 4 ನೇ ಸ್ಥಾನಕ್ಕೇರಲಿದೆ.

ಯುಕೆ 13 ನೇ ಸ್ಥಾನ, ಜಪಾನ್ 9, ಬ್ರೆಜಿಲ್ 6, ಜರ್ಮನಿ 7 ನೇ ಸ್ಥಾನದಲ್ಲಿರಲಿದ್ದು, ಅತಿ ಪ್ರಮುಖ ಆರ್ಥಿಕತೆಯ ಇಪ್ಪತ್ತು ರಾಷ್ಟ್ರಗಳ ಪೈಕಿ ಟರ್ಕಿ, ಮೆಕ್ಸಿಕೊ, ಸೌದಿ, ಪಾಕೀಸ್ತಾನ ಇರಲಿದ್ದು, ಇದುವರೆಗೆ ಈ ಪಟ್ಟಿಯಲ್ಲಿದ್ದ ಸ್ಪೇನ್, ಪೋಲ್ಯಾಂಡ್, ಕೆನಡಾದಂಥ ರಾಷ್ಟ್ರಗಳು ಹೊರಗೋಗಲಿವೆ ಎಂದೂ ವರದಿ ಅಂದಾಜಿಸಿದೆ.