ಆರ್ಥಿಕತೆಯು ಸುರಕ್ಷಿತವಾದ ಕೈಗಳಲ್ಲಿದೆ : ರಾಮಚಂದ್ರ ಗುಹಾಗೆ ತಿರುಗೇಟು ನೀಡಿದ ನಿರ್ಮಲಾ ಸೀತಾರಾಮನ್‌

ಆರ್ಥಿಕತೆಯು ಸುರಕ್ಷಿತವಾದ ಕೈಗಳಲ್ಲಿದೆ : ರಾಮಚಂದ್ರ ಗುಹಾಗೆ ತಿರುಗೇಟು ನೀಡಿದ ನಿರ್ಮಲಾ ಸೀತಾರಾಮನ್‌

ದೆಹಲಿ: ಟ್ವೀಟರ್‌ನಲ್ಲಿ ಆರ್ಥಿಕತೆಯ ಕುರಿತು ಸುಧೀರ್ಘವಾಗಿ ಚರ್ಚೆಯಾದ ನಂತರ, ಇತಿಹಾಸಕಾರ ರಾಮಚಂದ್ರ ಗುಹಾ ಅವರಿಗೆ ನೀವು ಆರ್ಥಿಕತೆಯ ಕುರಿತು ಚಿಂತಿಸುವ ಅಗತ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀರಾಮನ್‌ ಹೇಳಿದ್ದಾರೆ.

ಇನ್ನೂ ಈ ಚರ್ಚೆಯಲ್ಲಿ ಗುಜರಾತಿನ ಮುಖ್ಯಮಂತ್ರಿ ವಿಜಯ್ ರೂಪಾಣಿ ಸಹ ತೊಡಗಿದ್ದರು. ಗುಹಾ ಅವರು ಬ್ರಿಟಿಷ್‌ ಬರಹಗಾರ ಫಿಲಿಪ್‌ ಸ್ಟ್ರಾಟ್‌ ಅವರು ಪಶ್ಚಿಮ ಬಂಗಾಳ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ತವರೂರನ್ನು ಹೋಲಿಸಿ ಬರೆದ ಬರಹವನ್ನು ಉಲ್ಲೇಖಿಸಿ ಟ್ವಿಟ್‌ ಮಾಡಿದ್ದಾರೆ. ಆ ಒಂದು ಟ್ವೀಟ್‌ ಮುಂದುವರೆದು ಟ್ವೀಟರ್‌ ಸಮರಕ್ಕೆ ಕಾರಣವಾಗಿದೆ.

ಗುರಜರಾತ್‌ ಆರ್ಥಿಕವಾಗಿ ಮುಂದಿದ್ದರೂ ಸಾಂಸ್ಕೃತಿಕವಾಗಿ ಹಿಂದುಳಿದ ಪ್ರಾಂತ್ಯವಾಗಿದೆ. ಇನ್ನೂ ಬಂಗಾಳವು ಆರ್ಥಿಕವಾಗಿ ಹಿಂದೂಳಿದರೂ, ಸಾಂಸ್ಕೃತಿಕವಾಗಿ ಮುಂದುವರೆದಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಸ್ಟ್ರಾ ಅವರು ಒಬ್ಬ ಭಾರತೀಯ ಮತ್ತು ಮುಕ್ತ ಮಾರುಕಟ್ಟೆ ಉದಾರವಾದ ಕಮ್ಯುನಿಷ್ಟ್‌ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಇದಕ್ಕೆ ಟ್ವೀಟರ್‌ ಮೂಲಕ ಪ್ರತಿಕ್ರಿಯಿಸಿದ್ದು, ಈ ಮೊದಲು ಒಡೆದು ಆಳಲು ಪ್ರಯತ್ನಿಸಿದ್ದರು. ಈಗ ಇದು ಭಾರತೀಯನ್ನು ವಿಭಜಿಸಲು ಬಯಸುತ್ತಿರುವ ಗಣ್ಯರ ಗುಂಪು. ಇವೆಲ್ಲವೂ ಭಾರತೀಯರನ್ನು ವಿಭಜಿಸುವ ತಂತ್ರಗಳಾಗಿವೆ ಎಂದು ಟ್ವಿಟ್‌ ಮಾಡಿದ್ದಾರೆ.

ಇನ್ನೂ ಇದಕ್ಕೆ ಗುಹಾ, ನಿಜಕ್ಕೂ ಗುಜರಾತ್‌ ಸುರಕ್ಷಿತರ ಕೈಯಲ್ಲಿದೆ ಎಂದು ವ್ಯಂಗ್ಯವಾಡಿದ ಅವರು, ನೀರಸವಾದ ಇತಿಹಾಸಕಾರರ ಟ್ವೀಟರ್‌ಗಳನ್ನು ಮುಖ್ಯಮಂತ್ರಿಗಳನ್ನು ತುಂಬಾ ಉತ್ಸುಕರಾಗಿ ಗಮನಿಸುತ್ತಾರೆ. ಇದರೊಂದಿಗೆ ಸತ್ತ ಬರಹಗಳನ್ನು ಉಲ್ಲೇಖಿಸಿ ಇತಿಹಾಸಕಾರರನ್ನು ಸುಲಭವಾಗಿ ಗೊಂದಲಗೊಳಿಸುತ್ತಾರೆ ಎಂದರು.

ಕೆಲವು ಸಮಯದ ನಂತರ ಈ ಚರ್ಚೆಯಲ್ಲಿ ತೋಡಗಿದ ನಿರ್ಮಲಾ ಸೀತಾರಾಮನ್‌, ಎರಡನೇ ಮಹಾಯುದ್ದ ಸಮಯದಲ್ಲಿ 1,000 ಪೋಲಿಷ್ ಮಕ್ಕಳಿಗೆ ಆಶ್ರಯ ನೀಡಿದ್ದಕ್ಕಾಗಿ ಮಹಾರಾಜ ಜಾಮ್ ಸಾಹೇಬ್ ದಿಗ್‌ವಿಜಯ್‌ ಸಿಂಗ್‌ಜಿ ಅವರನ್ನು ಪೋಲೆಂಡ್‌ ಸರ್ಕಾರ ಗೌರವಿಸಿದ ಕುರಿತಾಗಿ 2018 ಸೆಪ್ಟಂಬರ್‌ನಲ್ಲಿ ಪ್ರಕಟಗೊಂಡ ಲೇಖನವನ್ನು ಹಂಚಿಕೊಂಡಿದ್ದಾರೆ.

ಆ ಸಮಯದಲ್ಲಿ ಜಡೇಜಾ ಅವರು ಜಮಾನಗರದ ಮಾಜಿ ರಾಜರಾಗಿದ್ದರು. ಈ ಕುರಿತಾಗಿ 1939 ರಲ್ಲಿ, ಕಮ್ಯುನಿಸ್ಟ್ ಇಂಟರ್‌ನ್ಯಾಷನಲ್‌ಗೆ ಸೇರಿದ ಬ್ರಿಟನ್‌ನ ಫಿಲಿಪ್ ಸ್ಪ್ರಾಟ್ ಬರೆದಿದೆ. ಇದು ಗುಜರಾತಿನಲ್ಲಿ ನಡೆದದ್ದು ಎಂದು ಅವರು ಬರೆದುಕೊಂಡಿದ್ದಾರೆ.

ಇದಕ್ಕೆ ಮಗದೊಂದು ಟ್ವೀಟ್‌ ಮಾಡಿರುವ ಗುಹಾ, “ಆರ್ಥಿಕತೆಯು ಖಂಡಿತವಾಗಿಯೂ ಸುರಕ್ಷಿತ ಕೈಯಲ್ಲಿದೆ" ಏಕೆಂದರೆ ಹಣಕಾಸು ಸಚಿವರು, ನೀರಸವಾದ ಇತಿಹಾಸಕಾರರ ಟ್ವೀಟರ್‌ಗಳ ಗೀಳನ್ನು ಹಚ್ಚಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಸ್ತುತ ರಾಷ್ಟ್ರೀಯ ಸಂವಾದದ ಆಲೋಚನೆಗಳ ಅರಿವು ಮತ್ತು ನನ್ನ ಜವಾಬ್ದಾರಿಯುತ ಕೆಲಸಗಳು ಎರಡು ಪ್ರತ್ಯೇಕವಲ್ಲ. ಆರ್ಥಿಕತೆಯು ಸುರಕ್ಷಿತವಾದ ಕೈಯಲ್ಲಿವೆ ಎಂದು ಅವರು ಗುಹಾ ಅವರಿಗೆ ಭರವಸೆ ನೀಡಿದರು.

ಬರಹಗಾರ ಫಿಲಿಪ್ ಸ್ಪ್ರಾಟ್‌ನನ್ನು ಹೆಚ್ಚು ಪ್ರಸಿದ್ಧನನ್ನಾಗಿ ಮಾಡಲು ನಾನು ಮೂವತ್ತು ವರ್ಷಗಳಿಂದ ಯಶಸ್ವಿಯಾಗದೆ ಪ್ರಯತ್ನಿಸುತ್ತಿದ್ದೇನೆ ಇಂದು ಅದನ್ನು ಸಾಧಿಸಲು ಅನುವು ಮಾಡಿಕೊಟ್ಟ ರಾಕ್ಷಸ ಸೈನ್ಯಕ್ಕೆ ಧನ್ಯವಾದಗಳು ಎಂದು ಹೇಳುವ ಮೂಲಕ ಗುಹಾ ಅವರ ಟ್ವೀಟರ್ ಸಮರ ಅಂತ್ಯಗೊAಡಿತು.

ಈಗ ನಡೆಯುತ್ತಿರುವ ಕರೋನವೈರಸ್ ಬಿಕ್ಕಟ್ಟು ಭಾರತದ ಆರ್ಥಿಕತೆಗೆ ಭಾರಿ ಹೊಡೆತ ನೀಡಿದೆ. ಮಾರ್ಚ್ 25 ರಂದು ವಿಧಿಸಲಾದ ಲಾಕ್‌ಡೌನ್‌ನಿಂದ ಭಾರತದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ನಿರುದ್ಯೋಗಿಗಳಾಗಿದ್ದರು.

ಕಳೆದ ತಿಂಗಳು ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಭಾರತದ ಆರ್ಥಿಕ ಬೆಳವಣಿಗೆಯ ದರವು 2019 -20 ರ ನಾಲ್ಕನೇ ತ್ರೈಮಾಸಿಕದಲ್ಲಿ 3.1% ರಷ್ಟಿದೆ. ಅಕ್ಟೋಬರ್ ನಿಂದ ಡಿಸೆಂಬರ್ 2019 ರ ತ್ರೈಮಾಸಿಕದಲ್ಲಿ, ದೇಶದ ಆರ್ಥಿಕ ಬೆಳವಣಿಗೆ 4.7% ರಷ್ಟಿದೆ - ಇದು ಏಳು ವರ್ಷಗಳ ಕಡಿಮೆ. ಆದಾಗ್ಯೂ, ಮೂರನೇ ತ್ರೈಮಾಸಿಕದಲ್ಲಿ ಬಿಡುಗಡೆಯಾದ ಅಂತಿಮ ಅಂಕಿ ಅಂಶಗಳು ಕಳೆದ ವರ್ಷದ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಭಾರತದ ಜಿಡಿಪಿ 4.1% ಕ್ಕೆ ಏರಿದೆ ಎಂದು ತೋರಿಸಿದೆ.

ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರವು ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಪದೇ ಪದೇ ಟೀಕಿಸುತ್ತಿವೆ ಮತ್ತು ಸರ್ಕಾರದ ಆರ್ಥಿಕ ಪ್ಯಾಕೇಜುಗಳು ಸಾಕಷ್ಟಿಲ್ಲ ಎಂದು ಹೇಳಿದ್ದಾರೆ. ಕಳೆದ ತಿಂಗಳು, ಕರೋನವೈರಸ್ ಬಿಕ್ಕಟ್ಟಿನ ಕುಸಿತವನ್ನು ಎದುರಿಸಲು ಕೇಂದ್ರದ ಕ್ರಮಗಳನ್ನು ಚರ್ಚಿಸಲು ಪಕ್ಷವು ಹಲವಾರು ವಿರೋಧ ಪಕ್ಷಗಳ ಸಭೆಯನ್ನು ಕರೆದಿದೆ.