ಆರ್ಥಿಕ ಕುಸಿತ ಮತ್ತು 5 ಟ್ರಿಲಿಯನ್ ಆರ್ಥಿಕತೆಯ ಕನಸು   

-ಪ್ರೊ. ಕೃಷ್ಣ ರಾಜ್, (ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನ ಸಂಸ್ಥೆ (ಐಸೆಕ್), ಬೆಂಗಳೂರು)  

ಆರ್ಥಿಕ ಕುಸಿತ ಮತ್ತು 5 ಟ್ರಿಲಿಯನ್ ಆರ್ಥಿಕತೆಯ ಕನಸು   

ಕೇಂದ್ರ ಸಂಖ್ಯಾಶಾಸ್ತ್ರ ಸಂಸ್ಥೆ 2020 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ವರದಿಯಲ್ಲಿ ಬಿಡುಗಡೆ ಮಾಡಿದ ಅಧಿಕೃತ ಜಿಡಿಪಿ ದರವು ಆಶ್ಚರ್ಯಕರ ಬೆಳವಣಿಗೆಯ ದರವನ್ನು ಹೊಂದಿದ್ದು, ಶೇಕಡ 5 ಕ್ಕೆ ಕುಸಿದಿದೆ, ಇದು ಕಳೆದ 6 ವರ್ಷಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದ್ದು 
ಭಾರತೀಯ ಆರ್ಥಿಕ ಬೆಳವಣಿಗೆಯ ಭವಿಷ್ಯದ ಬಗ್ಗೆ ಗಂಭೀರ ಚಿಂತನೆಗೆ ಕಾರಣವಾಗಿದೆ.

2018-19ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಜಿಡಿಪಿಯ ಶೇ 7 ರ ಬೆಳವಣಿಗೆಗೆ ಹೋಲಿಸಿದರೆ 2019-20ರ ಏಪ್ರಿಲ್-ಜೂನ್‌ನಲ್ಲಿ ಶೇ 5 ಕ್ಕೆ ಇಳಿದಿರುವುದು 2024-25ರ ವೇಳೆಗೆ $ 5 ಟ್ರಿಲಿಯನ್ ಆರ್ಥಿಕತೆಯ ಸಾಧನೆಗೆ ತೀವ್ರ ಅಡಚಣೆಯಾಗಿದೆ. ಭಾರತದ ಆರ್ಥಿಕ ಬೆಳವಣಿಗೆಯ ಛಲ ಪರಿಮಾಣಗಳಲ್ಲಿ  
ರಚನಾತ್ಮಕ ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡಿರುವುದಿಲ್ಲ, ಹಾಗು ಕೇಂದ್ರ ಬಜೆಟ್ 2019 ರಲ್ಲಿ ಕಲ್ಪಿಸಲಾಗಿರುವ ಪ್ರಸ್ತುತ $ 2.8 ಟ್ರಿಲಿಯನ್‌ನಿಂದ $ 5 ಟ್ರಿಲಿಯನ್‌ ಆರ್ಥಿಕತೆಯನ್ನು ದ್ವಿಗುಣಗೊಳಿಸುವುದು ಅವಾಸ್ತವಿಕವಾಗಿದೆ.

2019ನ ಕೇಂದ್ರ ಬಜೆಟ್, ಪ್ರಸ್ತುತ ಆರ್ಥಿಕ ಕುಸಿತ ವನ್ನು ಗಮನದಲ್ಲಿಟ್ಟುಕೊಂಡು ಶೇಕಡಾ 8 ರ ಬೆಳವಣಿಗೆಯ ದರವನ್ನು ಕಾಯ್ದುಕೊಳ್ಳಲು ಅಗತ್ಯವಾದ ರಚನಾತ್ಮಕ ಸುಧಾರಣೆಗಳನ್ನು ತರಲು ಮುನ್ನೆಚ್ಚರಿಕೆ ವಹಿಸಲಿಲ್ಲ. ಕಳೆದ 70 ವರ್ಷಗಳಿಗೆ ಹೋಲಿಸಿದರೆ ಆರ್ಥಿಕ ಹಿಂಜರಿತವು ಅನಿರೀಕ್ಷಿತ ಪರಿಣಾಮವನ್ನು ಬೀರಿದೆ ಎಂದು ಕೇಂದ್ರ ಸರ್ಕಾರವು ಮೊದಲ ಬಾರಿಗೆ ಒಪ್ಪಿಕೊಂಡಿದೆ. ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳುವಂತೆ ಹಣಕಾಸು ವಲಯದಲ್ಲಿನ ಸಮಸ್ಯೆಯು "ವಿಶ್ವಾಸದ ಕೊರತೆ" ಯನ್ನು ಎದುರಿಸುತ್ತಿದೆ.  

ಜಿಡಿಪಿ ಸೂಚಕದ ದರಗಳು [ಜಿಡಿಪಿ = ಅನುಭೋಗ + ಹೂಡಿಕೆ + ಸರ್ಕಾರದ ವೆಚ್ಚ + (ರಫ್ತು - ಆಮದು)] ಕ್ಷೀಣಿಸುತ್ತಿರುವುದರಿಂದ ಆರ್ಥಿಕತೆಯಲ್ಲಿನ ರಚನಾತ್ಮಕ ದೌರ್ಬಲ್ಯಗಳು ಕಂಡುಬಂದಿದೆ. ಈ ಮೂಲಭೂತ ಅಂಶಗಳಲ್ಲಿನ ಸಮಗ್ರ ಆರ್ಥಿಕ ಸ್ಥಿರತೆಯನ್ನು ಕಾಪಾಡುವುದು ಮತ್ತು ಆರ್ಥಿಕತೆಯನ್ನು ಸದೃಢವಾಗಿ ಪುನರುಜ್ಜೀವನಗೊಳಿಸುವುದು  ಅತ್ಯಗತ್ಯವಾಗಿದೆ.

ಇದಕ್ಕೆ ಮುಖ್ಯ ಕಾರಣ ಅನುಭೋಗ ವೆಚ್ಚವು ಪ್ರಮುಖ ಆರ್ಥಿಕ ಸೂಚಕಗಳಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ ಏಕೆಂದರೆ ಇದು ಆರ್ಥಿಕತೆಯಲ್ಲಿ ವಿವಿಧ ಸರಕು ಮತ್ತು ಸೇವೆಗಳ ಒಟ್ಟಾರೆ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ ಅಂತಿಮ ತ್ರೈಮಾಸಿಕದಲ್ಲಿ (ಜೂನ್) 2019 ರಲ್ಲಿ ಜಿಡಿಪಿಯ ಶೇಕಡಾವಾರು ಅಂತಿಮ ಖಾಸಗಿ ಬಳಕೆ ವೆಚ್ಚವು ಶೇಕಡಾ 59.3 ರಿಂದ ಶೇ 57.7 ಕ್ಕೆ ಇಳಿದಿದೆ ಎಂದು ಅಧಿಕೃತ ಅಂಕಿ ಅಂಶಗಳು ತೋರಿಸುತ್ತವೆ.

ಕೇಂದ್ರ ಸಂಖ್ಯಾಶಾಸ್ತ್ರ ಸಂಸ್ಥೆ ಅಂದಾಜಿನ ಪ್ರಕಾರ ಅಂತಿಮ ಖಾಸಗಿ ಅನುಭೋಗ ವೆಚ್ಚವು ಶೇಕಡಾ 3.1 ರ ಕಡಿಮೆ ದರದಲ್ಲಿ ಬೆಳೆಯುತ್ತಿದೆ. ಆರ್ಥಿಕತೆಯಲ್ಲಿ ಅನುಭೋಗ ಖರ್ಚಿನ ಪ್ರಮಾಣವು ಕುಟುಂಬಗಳ ಒಟ್ಟು ಬಳಸಬಹುದಾದ ಆದಾಯವನ್ನು ಅವಲಂಬಿಸಿರುತ್ತದೆ ಮತ್ತು ಸರ್ಕಾರದ ಬಳಕೆಯ ವೆಚ್ಚವು ಆರ್ಥಿಕತೆಯಲ್ಲಿ ಕಡಿಮೆ ಪಾತ್ರವನ್ನು ವಹಿಸುತ್ತದೆ. ಖಾಸಗಿ ವ್ಯಕ್ತಿಗಳ ಒಟ್ಟು ಬಳಸಬಹುದಾದ ಆದಾಯವು ಆರ್ಥಿಕತೆಯಲ್ಲಿನ  ಸಾಮಾನ್ಯ ಉದ್ಯೋಗದ ದರದ ಮೇಲೆ ನಿರ್ಧರಿಸುತ್ತದೆ. ಕೊರತೆ ಬೇಡಿಕೆಯು ಆರ್ಥಿಕತೆಯಲ್ಲಿ ನಿರುದ್ಯೋಗ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ನಿರುದ್ಯೋಗ ದರವು ಶೇಕಡಾ 6.1 ರಷ್ಟಿದ್ದು, ಇದು ಕಳೆದ 45 ವರ್ಷಗಳಲ್ಲಿ ಅತಿ ಹೆಚ್ಚು ಎಂದು ಇತ್ತೀಚಿನ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (ಎನ್‌ಎಸ್‌ಎಸ್ಒ) ದತ್ತಾಂಶವು ತೋರಿಸುತ್ತದೆ, 

ಇದು ಭಾರತದಲ್ಲಿ ಉದ್ಯೋಗರಹಿತ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ನೀತಿ ಆಯೋಗದ  ಸಿಇಒ ಅಮಿತಾಭ್ ಕಾಂತ್ ರವರು ಹೇಳಿದಂತೆ “ಬಹುಶಃ ನಾವು ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ವಿಶೇಷವಾಗಿ ಯುವಕರಿಗೆ ಸೃಷ್ಟಿಸುತ್ತಿಲ್ಲ” ಎಂದು ಒಪ್ಪಿಕೊಂಡಿದ್ದಾರೆ. ನಿರುದ್ಯೋಗವು ನಗರ ಪ್ರದೇಶಗಳಲ್ಲಿ ಇನ್ನೂ ಶೋಚನೀಯವಾಗಿ ಶೇಕಡಾ 7.8 ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ 5.3 ರಷ್ಟಿದೆ. 15-29 ವರ್ಷ ವಯಸ್ಸಿನ ಯುವಕರಲ್ಲಿ ನಿರುದ್ಯೋಗವು ಪುರುಷರಿಗೆ ಶೇಕಡಾ 18.7 ಮತ್ತು ನಗರದಲ್ಲಿ ಮಹಿಳೆಯರಿಗೆ 27.2 ಮತ್ತು ಗ್ರಾಮೀಣ ಪ್ರದೇಶದಲ್ಲಿ ಕ್ರಮವಾಗಿ 17.4 ಮತ್ತು 13.6 ರಷ್ಟಿದೆ. ನಿರುದ್ಯೋಗದ ಬೆಳವಣಿಗೆಯು ಒಂದು ವಾಸ್ತವವಾಗಿದೆ ಮತ್ತು ಇದರಿಂದ ಒಟ್ಟು ಖಾಸಗಿ ಬೇಡಿಕೆ ಕಡಿಮೆಯಾಗುತ್ತಿದೆ ಮತ್ತು ಒಟ್ಟು ಉಳಿತಾಯಕ್ಕೆ ವ್ಯತಿರಿಕ್ತ ಪರಿಣಾಮ ಬೀರಿದೆ. ಉಳಿತಾಯ ದರವು ಒಟ್ಟು ಜಿಡಿಪಿಗೆ  2011 ರಲ್ಲಿ ಶೇಕಡಾ 36.9 ರಿಂದ 2018 ರಲ್ಲಿ 30.5 ಕ್ಕೆ ಇಳಿದಿದೆ, ಇದು ಹೆಚ್ಚಿನ ನಿರುದ್ಯೋಗ ದರಕ್ಕೆ ಕಾರಣವಾಗಿದೆ. ಬಹು ಮುಖ್ಯವಾಗಿ, ಉಳಿತಾಯ ದರಗಳು ಉತ್ಪಾದನೆಯನ್ನು ತಡೆಹಿಡಿಯುವ ಶಕಿಯನ್ನು ಹೊಂದಿದೆ ಹಾಗು ದೇಶೀಯ ಹೂಡಿಕೆಯನ್ನು ನಿರ್ಧರಿಸುತ್ತವೆ. 

ದೇಶೀಯ ಮತ್ತು ವಿದೇಶಿ ನೇರ ಹೂಡಿಕೆಯು ಆರ್ಥಿಕ ಬೆಳವಣಿಗೆಯ ದರವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕತೆಯ ಉತ್ಪಾದಕ ಸಾಮರ್ಥ್ಯ ಮತ್ತು ದೀರ್ಘಾವಧಿಯ ಒಟ್ಟು ಪೂರೈಕೆಯ ಮೇಲೆ ಪ್ರಭಾವ ಬೀರುತ್ತದೆ. ಹೂಡಿಕೆಯ ಬೆಳವಣಿಗೆ ಪ್ರವೃತ್ತಿಗಳು ಜೂನ್ 2011 ರಲ್ಲಿ ಜಿಡಿಪಿಯ ಶೇಕಡಾ 34.7 ಕ್ಕೆ ಇಳಿದಿದ್ದು, 2011 ರ ಸೆಪ್ಟೆಂಬರ್‌ನಲ್ಲಿ ಇದು 41.2 ರಷ್ಟಿತ್ತು. ಅನಾಣ್ಯೀಕರಣ ನಂತರ ಮಾರ್ಚ್ 2017 ರಲ್ಲಿ ಹೂಡಿಕೆಯ ಅತ್ಯಂತ ಕಡಿಮೆ ಅಂದರೆ ಶೇಕಡಾ 29.5 ರಷ್ಟಿತ್ತು. ಜಿಡಿಪಿಗೆ ವಿದೇಶಿ ನೇರ ಹೂಡಿಕೆಯ ಶೇಕಡಾವಾರು ಪ್ರಮಾಣವು 2018 ರಲ್ಲಿ ಶೇಕಡಾ 1.6 ರಿಂದ 2019 ರಲ್ಲಿ 1.4 ಕ್ಕೆ ಇಳಿದಿದೆ. 
ಇದು ಒಟ್ಟು ಬಂಡವಾಳ ರಚನೆಯ ಮಂದಗತಿಯ ಮೇಲೆ ಪರಿಣಾಮ ಬೀರಿದೆ, ಇದು ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ 41.95 ರಿಂದ 2018 ರಲ್ಲಿ 30.98 ಕ್ಕೆ ತಲುಪಿದೆ. ಒಟ್ಟಾರೆ ಹೂಡಿಕೆ ಆರ್ಥಿಕ ಉತ್ಪಾದನೆಯ ಜಿಡಿಪಿ ಬೆಳವಣಿಗೆಯ ದರದ ಮೇಲೆ ಹಾಗು ಭಾರತದ ಆರ್ಥಿಕತೆಯ ಉತ್ಪಾದನೆ ಮೇಲೆ ಹೆಚ್ಚಾಗಿ ಪರಿಣಾಮ ಬೀರಿದೆ. 

ಸರ್ಕಾರದ ಹೂಡಿಕೆ ಮತ್ತು ಖರ್ಚು ಜಿಡಿಪಿ ಬೆಳವಣಿಗೆಯ ದರದ ಮೇಲೆ ಪ್ರಭಾವ ಬೀರುತ್ತದೆ. 1970-2017ರ ಅವಧಿಯಲ್ಲಿ ಸರಾಸರಿ ಶೇಕಡಾ15.14 ಕ್ಕೆ ಹೋಲಿಸಿದರೆ ಸರ್ಕಾರದ ಖರ್ಚು ಜಿಡಿಪಿಯ ಶೇಕಡಾ 13.04 ರಷ್ಟಿದೆ. 2017-18ಕ್ಕೆ ಹೋಲಿಸಿದರೆ ಕೇಂದ್ರ ಸರ್ಕಾರದ ಖರ್ಚು 2018-19ರಲ್ಲಿ 0.3 ಶೇಕಡಾ ಕಡಿಮೆಯಾಗಿದೆ, ಇದು ಹಣಕಾಸಿನ ಕೊರತೆಯನ್ನು ಜಿಡಿಪಿಯ ಶೇಕಡಾ 3.4 ಕ್ಕೆ ಮತ್ತು ಸಾಲವನ್ನು ಜಿಡಿಪಿ ಅನುಪಾತಕ್ಕೆ 44.5 ಪ್ರತಿಶತದಷ್ಟು ಕಡಿಮೆ ಮಾಡಲು ಸಹಾಯ ಮಾಡಿದೆ. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 5.8 ಕ್ಕೆ ಪರಿಷ್ಕರಿಸುವ 
ಮೂಲಕ ಈಗಾಗಲೇ ನಿಗದಿಪಡಿಸಿದ ಆರ್ಥಿಕ ಹಿಂಜರಿತವನ್ನು ಕೇಂದ್ರ  ಬಜೆಟ್ 2019 ಊಹಿಸಿರಲಿಲ್ಲ ಎಂಬುದನ್ನು ಇದು ತೋರಿಸುತ್ತದೆ. 

ರಫ್ತುಗಳು ಆರ್ಥಿಕ ಬೆಳವಣಿಗೆಯ ಚಾಲಕಶಕ್ತಿಯಾಗಿ ಆಗಿ ಕಾರ್ಯನಿರ್ವಹಿಸುತ್ತವೆ ಆದರೆ ಭಾರತದ ಹೆಚ್ಚಿನ ಚಾಲ್ತಿ ಖಾತೆ ಕೊರತೆಯು 15.8 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದು, ಇದು ಆಮದು ಅವಲಂಬನೆ, ವಿಶೇಷವಾಗಿ ಕಚ್ಚಾ ತೈಲದ ಆಮದು ಮತ್ತು ರೂಪಾಯಿ ಡಾಲರ್ ವಿನಿಮಯ ದರದ ಕ್ಷೀಣತೆಯನ್ನು (ಪ್ರಸ್ತುತ ಖs. 72) ತೋರಿಸುತ್ತದೆ. ಬಾಹ್ಯ ಸಾಲವು ಶೇಕಡಾ 2.6 ರಷ್ಟು ಹೆಚ್ಚಾಗಿದೆ ಮತ್ತು ಭಾರತದ ಜಿಡಿಪಿಗೆ ಶೇಕಡಾ 19.7 ರಷ್ಟಿದೆ, ಇದು ಹೆಚ್ಚಿನ ಬಡ್ಡಿ ಪಾವತಿಸಲು ಹೊರೆಯಾಗಿದೆ.  

ಸಮಗ್ರ ಆರ್ಥಿಕ ಕುಸಿತದಲ್ಲಿ ಪ್ರಸ್ತುತ ಇರುವ ಅಸ್ಥಿರತೆಯನ್ನು ವ್ಯಾಪಾರ ಅಥವಾ ಆರ್ಥಿಕ ಚಕ್ರದಂತೆ ಪರಿಗಣಿಸದೆ ಅದನ್ನು ರಚನಾತ್ಮಕವೆಂದು ಪರಿಗಣಿಸಬೇಕು. ಪರಿಣಾಮಕಾರಿ ಹಣಕಾಸಿನ ಮತ್ತು ವಿತ್ತೀಯ ನೀತಿಯೊಂದಿಗೆ ಆರ್ಥಿಕತೆಯ ಪೂರೈಕೆ ಮತ್ತು ಬೇಡಿಕೆಯ ನಿರ್ವಹಣೆ ಅಗತ್ಯವಾಗಿದೆ. ಆರ್ಥಿಕತೆಯ ಉತ್ಪಾದಕ ಸಾಮರ್ಥ್ಯವನ್ನು ಉತ್ತೇಜಿಸಲು ಸರ್ಕಾರದ ಹಣಕಾಸಿನ ನೀತಿ ಮತ್ತು ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಹೂಡಿಕೆ, MGNREGA ರೀತಿ, , MSME, ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯ ಮತ್ತು ಕೈಗಾರಿಕೆಗಳು ನಿರ್ಣಾಯಕ. 1.76 ಲಕ್ಷ ಕೋಟಿ ರೂ.ಗಳ RBI ಹಣವು ಈ ಕ್ಷೇತ್ರಗಳಿಗೆ ಹೆಚ್ಚಿನ ಖರ್ಚು ಮಾಡಲು ಸರ್ಕಾರಕ್ಕೆ ಅನುಕೂಲವಾಗಿದೆ. ಬ್ಯಾಂಕುಗಳಲ್ಲಿನ ಅನುತ್ಪಾದಕ ಆಸ್ತಿಗಳು (NPA) ಮತ್ತು ಆರ್ಥಿಕ ಹಿಂಜರಿತದ ಬಗ್ಗೆ ಕಡಿಮೆ ವಿಶ್ವಾಸದ ಕೊರತೆ ಯ ಭಾವನೆಗಳಿಂದಾಗಿ ಸಾಲವನ್ನು ಮರುಪಾವತಿಸಲು ಅಸಮರ್ಥತೆಯಿಂದಾಗಿ ರೆಪೊ ದರವನ್ನು ಶೇಕಡಾ 5.4 ಕ್ಕೆ ಇಳಿಸಿದರೂ ಆರ್‌ಬಿಐ ನ ಹಣಕಾಸು ನೀತಿಯು ಹೆಚ್ಚಿನ ಫಲಿತಾಂಶವನ್ನು ನೀಡಿಲ್ಲ. ಸರಕು ಮತ್ತು ಸೇವೆಗಳ ಬೇಡಿಕೆಯನ್ನು ಹೆಚ್ಚಿಸಲು ವೈಯಕ್ತಿಕ ಆದಾಯದ ಮೇಲಿನ ತೆರಿಗೆಯನ್ನು ಪರಿಶೀಲಿಸಬೇಕಾಗಿದೆ. ಜಿಎಸ್‌ಟಿಯನ್ನು ಸರಳ ಗೊಳಿಸುವುದು ಅವಶ್ಯಕ ಏಕೆಂದರೆ ಪ್ರಸ್ತುತ ರೂ 93,960 ಕೋಟಿ ರೂ. ಕಡಿಮೆ ತೆರಿಗೆ ಸಂಗ್ರಹವಾಗಿದೆ. ಮುಖ್ಯವಾಗಿ ಆರ್ಥಿಕತೆಗೆ ಆಘಾತಗಳು ಸಂಭವಿಸಿದಾಗ ಆರ್ಥಿಕ ಕುಸಿತವನ್ನು ಹಿಮ್ಮೆಟ್ಟಿಸಲು ವಿಶ್ವಾಸದ ಕೊರತೆಯನ್ನು ಗ್ರಾಹಕರು ಮತ್ತು ಹೂಡಿಕೆದಾರರಲ್ಲಿ ಪುನಃಸ್ಥಾಪಿಸಬೇಕಾಗಿದೆ. 

 -ವಿಜಯಲಕ್ಷ್ಮಿ ( ಸಂಶೋಧನಾ ವಿದ್ಯಾರ್ಥಿ ಐಸೆಕ್ ಬೆಂಗಳೂರು)