ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ‘ಶಿವಾರ್ಜುನ್’ ಚಿತ್ರ ಇಂದು ಬಿಡುಗಡೆ

ಸ್ಯಾಂಡಲ್ ವುಡ್ ಪ್ರಿನ್ಸ್ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ’ಶಿವಾರ್ಜುನ್’ ಚಿತ್ರ ಇಂದು ಬಿಡುಗಡೆಯಾಗಿದ್ದು, ಚಿತ್ರತಂಡ ಅಭಿಮಾನಿಗಳಿಗೆ ಸಂತಸ ನೀಡಿದೆ.

ಇದೊಂದು ಆ್ಯಕ್ಷನ್ ಕಂ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾವಾಗಿದೆ. ಚಿರು ಈಗಾಗಲೇ ‘ಸಿಂಗ’ ಮತ್ತು ‘ಖಾಕಿ’ಯಲ್ಲಿ ಅಬ್ಬರಿಸಿದ್ದು, ‘ಶಿವಾರ್ಜುನ’ ಮೇಲೆ ಪ್ರೇಕ್ಷಕರಿಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಜೊತೆಗೆ ಈ ಸಿನಿಮಾದಲ್ಲಿ ಮತ್ತೊಂದು ವಿಶೇಷತೆಯನ್ನು ಕಾಣಬಹುದು. ಸಿನಿಮಾ ಆ್ಯಕ್ಷನ್ ಕಂ ಫ್ಯಾಮಿಲಿ ಸೆಂಟಿಮೆಂಟೇ ಇರಬಹುದು ಆದ್ರೆ ಶಿವನ ವಿಚಾರ ತಾಂಡವವಾಡುತ್ತಿದೆ. ಟೈಟಲ್ ‘ಶಿವಾರ್ಜುನ’ ನಿರ್ಮಾಪಕರು ಶಿವಾರ್ಜುನ್, ನಿರ್ದೇಶಿಸಿರುವವರು ಕೂಡ ಶಿವತೇಜಸ್. ಹೀಗಾಗಿ ಸಿನಿಮಾದ ಮೇಲೆ ಶಿವನ ಆಶೀರ್ವಾದ ಕೊಂಚ ಹೆಚ್ಚೇ ಇರುವಂತಾಗಿದೆ.