ಕೆಂಗೇರಿಯ ಸಂತ ಫ್ರಾನ್ಸಿಸ್ ಅಸೀಸಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ

ಬೆಂಗಳೂರು ನಗರದ ಕೆಂಗೇರಿ ಸ್ಯಾಟಲೈಟ್​ ಟೌನ ಸಂತ ಫ್ರಾನ್ಸಿಸ್​ ಅಸೀಸಿ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ  ಘಟನೆ ನಡೆದಿದೆ.

ಚರ್ಚ್ ಒಳಗೆ ನುಗ್ಗಿದ ಕೆಲವು ಕಿಡಿಗೇಡಿಗಳು, ಗಾಜಿನ ಆವರಣವನ್ನು ಪುಡಿಪುಡಿ ಮಾಡಿದ್ದು, ಕೆಲವು ಧಾರ್ಮಿಕ ವಸ್ತುಗಳ ಮೇಲೆ ದಾಳಿ ನಡೆಸಿದ್ದಾರೆ.