ಮುಂಬೈನಲ್ಲಿ ಭಾರೀ ಮಳೆಯಿಂದಾಗಿ 22 ವಿಮಾನಗಳ ಮಾರ್ಗ ಬದಲಾವಣೆ

ಮುಂಬೈನಲ್ಲಿ ಭಾರೀ ಮಳೆಯಿಂದಾಗಿ 22 ವಿಮಾನಗಳ ಮಾರ್ಗ ಬದಲಾವಣೆ

ಮುಂಬೈ: ಮುಂಬೈ ಮತ್ತು ಉಪನಗರ ಪ್ರದೇಶಗಳಲ್ಲಿ ಸುರಿದ ಮುಂಗಾರು ಪೂರ್ವ ಭಾರೀ ಮಳೆಯಿಂದಾಗಿ ಹಲವು ವಿಮಾನ ಮತ್ತು ಸ್ಥಳೀಯ ರೈಲು ಸೇವೆಗಳಿಗೆ ತೊಡಕುಂಟಾಗಿದೆ.

ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಯ ಪ್ರಕಾರ, ಕನಿಷ್ಠ 22 ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ದೆಹಲಿ, ಹೈದರಾಬಾದ್ ಮತ್ತು ಅಹಮದಾಬಾದ್‍ ಗಳಲ್ಲಿ ಆರು ಅಂತಾರಾಷ್ಟ್ರೀಯ ಮತ್ತು 16 ದೇಶೀಯ ವಿಮಾನಗಳ ಮಾರ್ಗ ಬದಲಿಸಲಾಗಿದೆ.

ದಕ್ಷಿಣ ಮುಂಬೈನಲ್ಲಿನ ಕೋಲಾಬಾ, ಸ್ಯಾಂಟಕ್ರೂಜ್, ಮಲಾಡ್, ಕಂಡಿವಲಿ ಮತ್ತು ಬೊರಿವಲಿ ಪಶ್ಚಿಮದ ಉಪನಗರಗಳಾದ ಕುರ್ಲಾ, ಘಾಟ್ಕೋಪರ್ ಮತ್ತು ವಿಕ್ರೊಲಿಯಂತಹ ಪ್ರದೇಶಗಳು ಗುಡುಗು ಮತ್ತು ಮಿಂಚಿನಿಂದ ಕೂಡಿದ ಭಾರೀ ಮಳೆಗೆ ಸಾಕ್ಷಿಯಾಗಿವೆ.

ನಗರದ ಪೂರ್ವ ಭಾಗಗಳಲ್ಲಿ ಈಗಾಗಲೇ ಗುಡುಗು ಮತ್ತು ಮಿಂಚಿನಿಂದ ಕೂಡಿದ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ದೃಢಪಡಿಸಿದರು.