ಮತದಾನೋತ್ತರ ಸಮೀಕ್ಷೆಗಳ ಮೇಲೆ ಕೇಂದ್ರ ಸರ್ಕಾರದ ಪ್ರಭಾವ: ಹಿರಿಯ ಪತ್ರಕರ್ತನ ಆರೋಪ ಸತ್ಯವೆ?

ಮತದಾನೋತ್ತರ ಸಮೀಕ್ಷೆಗಳ ಮೇಲೆ ಕೇಂದ್ರ ಸರ್ಕಾರದ ಪ್ರಭಾವ: ಹಿರಿಯ ಪತ್ರಕರ್ತನ ಆರೋಪ ಸತ್ಯವೆ?
ಚಿತ್ರ ಕೃಪೆ: ನ್ಯೂಸ್‌ ಕ್ಲಿಕ್‌

ದೆಹಲಿ: ಪ್ರಜಾಪ್ರಭುತ್ವ ಹಾಗೂ ರಾಜನೀತಿ ಬಗ್ಗೆ ನಿಮಗೆ ವಿಶ್ವಾಸವಿದ್ದಲ್ಲಿ, ಮಾಧ್ಯಮಗಳು ಹಾಗೂ ಸಮೀಕ್ಷಾ ಏಜೆನ್ಸಿಗಳ ಮೇಲೇಕೆ ಪರಿಣಾಮ ಬೀರಬೇಕು. ಈ ರೀತಿ ಮಾಡುವುದಾದರೆ, ವಾಕ್‌ ಸ್ವಾತಂತ್ರ್ಯದ ಅಗತ್ಯವೇನಿದೆ ಎಂದು ಹಿರಿಯ ಪತ್ರಕರ್ತ ಅಭಿಸಾರ್‌ ಶರ್ಮಾ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎನ್‌ಡಿಎಗೆ ಸ್ಪಷ್ಟ ಬಹುಮತ ಬರಲಿದೆ ಎಂದು ಎಲ್ಲ ಸುದ್ದಿ ಸಂಸ್ಥೆಗಳ ಸಮೀಕ್ಷೆಗಳು ಹೇಳುತ್ತಿವೆ.  ಆದರೆ, ಈ ಬಾರಿ ಎನ್‌ಡಿಎ ಕೇವಲ 166 ಸ್ಥಾನಗಳಲ್ಲಿ ಮಾತ್ರ ಜಯಗಳಿಸುತ್ತದೆ ಎಂದು ನ್ಯೂಸ್‌ ಕ್ಲಿಕ್‌ ವಿಶ್ಲೇಷಣೆ ನಡೆಸಿದೆ. ಇತರ ಎಲ್ಲ ಸುದ್ದಿವಾಹಿನಿಗಳು ಹಾಗೂ ಸಮೀಕ್ಷಾ ಏಜನ್ಸಿಗಳು ಎನ್‌ಡಿಎ ಸರ್ಕಾರ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೇರಲಿದೆ ಎಂದು ತಿಳಿಸಿವೆ. ಈ ಹಿನ್ನೆಲೆ ಅಭಿಸಾರ್‌ ಶರ್ಮಾ ಅವರು ಏಜೆನ್ಸಿಗಳು ಹಾಗೂ ಸುದ್ದಿವಾಹಿನಿಗಳ ವಾದವನ್ನು ಅಲ್ಲಗಳೆದಿದ್ದು, ಎನ್‌ಡಿಎ ಕೇವಲ  166 ಸ್ಥಾನಗಳಲ್ಲಿ ಮಾತ್ರ ಜಯಗಳಿಸಲಿದೆ, ಯುಪಿಎ 200 ಸ್ಥಾಗಳನ್ನು ಪಡೆಯಲಿದೆ, ಇತರೆ ಪಕ್ಷಗಳು 176 ಕ್ಷೇತ್ರರಗಳಲ್ಲಿ ಗೆಲುವು ಸಾಧಿಸುತ್ತವೆ ಎಂದು ಹೇಳಿದ್ದಾರೆ.

ಇದೇ ವೇಳೆ ನ್ಯೂಸ್‌ ಕ್ಲಿಕ್‌ನ ಸಂದರ್ಶನದಲ್ಲಿ ಮಾತನಾಡಿರುವ ಅವರು, ಚುನಾವಣೋತ್ತರ ಸಮೀಕ್ಷೆಗಳ ಮೇಲೂ ಕೇಂದ್ರ ಸರ್ಕಾರ ಪ್ರಭಾವ ಬೀರುತ್ತದೆ ಎನ್ನುವುದಾದರೆ, ಮಾಧ್ಯಮಗಳು ಹಾಗೂ ಪತ್ರಕರ್ತರ ಸ್ಥಿತಿ ಅಧೋಗತಿಯತ್ತ ತಲುಪಿದೆ. ಪ್ರಭಾವಕ್ಕೊಳಗಾಗಿ ಕೆಲಸ ಮಾಡುವುದಾದರೆ, ವಾಕ್‌ ಸ್ವಾತಂತ್ರ್ಯಕ್ಕೆ ಬೆಲೆ ಎಲ್ಲಿದೆ ಎಂದು ಅಭಿಸಾರ್‌ ಶರ್ಮಾ ಅವರು ಪ್ರಶ್ನಿಸಿದ್ದಾರೆ.  

ಅಲ್ಲದೆ, ಒಂದು ವೇಳೆ ಎನ್‌ಡಿಎ ಸರ್ಕಾರ ಮುಂದೆ ಅಧಿಕಾರಕ್ಕೆ ಬಂದರೆ ದೇಶದ ಸ್ಥಿತಿ ಏನಾಗಬಹುದು. ವಾಕ್‌ ಸ್ವಾತಂತ್ರ್ಯ ಕುರಿತ ನಂಬಿಕೆ ಏನಾಗಬಹುದು ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ಸಂಪಾದಕರು, ನಿರೂಪಕರು, ವರದಿಗಾರರು, ಪತ್ರಕರ್ತರು ವೈಚಾರಿಕ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಹೆದರಿಕೆ ಇದೆ. ಯಾವುದೇ ಪತ್ರಕರ್ತ ರೈತರು, ದಲಿತರು, ಶೋಷಿತರ ಕುರಿತು ಧ್ವನಿ ಎತ್ತುತ್ತಿಲ್ಲ.

ಚಂದೋಲಿಯಲ್ಲಿ ದಲಿತರ ಬಳಿ 500 ರೂ. ನೋಟು ತೆಗೆದುಕೊಂಡರೆ ಅವರಿಗೆ ಬಲವಂತವಾಗಿ ಶಾಯಿ ಹಾಕಲಾಗುತ್ತದೆ. ಗೋರಕ್‌ಪುರದಲ್ಲಿ ಮುಸ್ಲಿಮರನ್ನು ಮನಬಂದಂತೆ ಥಳಿಸಿ ಪೊಲೀಸ್‌ ಠಾಣೆಗೆ ಕಳುಹಿಸಲಾಗುತ್ತಿದೆ. ಇದಕ್ಕಿಂತ ಇನ್ನೂ ಉದಾಹರಣೆಗಳು ಬೇಕೆ. ಇಂತಹ ಸ್ಥಿತಿಯಲ್ಲೂ ಮಾಧ್ಯಮಗಳು ದೇಶದ ಸಮಸ್ಯೆಗಳತ್ತ ಗಮನಹರಿಸುತ್ತಿಲ್ಲ. ಸರ್ಕಾರಗಳೂ ಸಹ ಮಾಧ್ಯಮಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದರೆ, ವಾಕ್‌ ಸ್ವಾತಂತ್ರ್ಯ ಅಧೋಗತಿಗೆ ಸಾಗುವುದು ಖಚಿತ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.