ಜಿಡಿಪಿಯನ್ನು ಅತಿಯಾಗಿ ಅಂದಾಜಿಸಲಾಗಿತ್ತು ಎಂಬ ಮಾಜಿ ಮುಖ್ಯ ಆರ್ಥಿಕ ಸಲಹೆಗಾರನ ಹೇಳಿಕೆಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

ಜಿಡಿಪಿಯನ್ನು ಅತಿಯಾಗಿ ಅಂದಾಜಿಸಲಾಗಿತ್ತು ಎಂಬ ಮಾಜಿ ಮುಖ್ಯ ಆರ್ಥಿಕ ಸಲಹೆಗಾರನ ಹೇಳಿಕೆಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

ದೆಹಲಿ:  “ಸ್ವೀಕರಿಸಿದ ಕಾರ್ಯ ವಿಧಾನಗಳು ಮತ್ತು ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ" 2018- 19 ನೇ ಸಾಲಿನ ಜಿಡಿಪಿ ದರ ಶೇಕಡ 7 % ಆಗಬಹುದು ಎಂದು ನಿರೀಕ್ಷಿಸಲಾಗಿತ್ತು ಎಂದು ಕೇಂದ್ರ ಸರ್ಕಾರವು ಮಾಜಿ ಮುಖ್ಯ ಆರ್ಥಿಕ ಸಲಹೆಗಾರನ ಹೇಳಿಕೆಗೆ ಸ್ಪಷ್ಟನೆ ನೀಡಿದೆ.

2018-19 ನೇ ಸಾಲಿನ ಜಿಡಿಪಿ ದರದ ಬೆಳವಣಿಗೆ ವಾಸ್ತವವಾಗಿ ಶೇಕಡ 4.5% ಕ್ಕೆ ಹತ್ತಿರವಾಗಿತ್ತು ಆದರೆ ಸರ್ಕಾರವು ಆ ದರವನ್ನು ಶೇ. 7% ಎಂದು ಹೇಳಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಾಜಿ ಮುಖ್ಯ ಹಣಕಾಸು ಸಚಿವ ಅರವಿಂದ್ ಸುಬ್ರಮಣ್ಯನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸರ್ಕಾರವು ಈ ಸ್ಪಷ್ಟನೆ ನೀಡಿದೆ.

ರಾಷ್ಟ್ರೀಯ ಖಾತೆಗಳ ವ್ಯವಸ್ಥೆ- 2008, ರಾಷ್ಟ್ಟೀಯ ಖಾತೆಗಳಿಗೆ, ಅಂತರಾಷ್ಟ್ರೀಯ ಅಂಕಿ ಅಂಶಗಳ ಮಾನದಂಡದ ಇತ್ತೀಚಿನ ಆವೃತ್ತಿಯಾಗಿದೆ. ಇದನ್ನು ಅಮೇರಿಕಾದ ಅಂಕಿ ಅಂಶಗಳ ಆಯೋಗವು 2009 ರಲ್ಲಿ ಅಳವಡಿಸಿಕೊಂಡಿದೆ. ಇದು 1993 ರ ರಾಷ್ಟ್ರೀಯ ಖಾತೆಗೆಳ ವ್ಯವಸ್ಥೆಯ ನವೀಕರಣಗೊಂಡದ್ದಾಗಿದೆ.” ಎಂದು ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಹೇಳಿದೆ.

2014 ರಿಂದ 2018 ರವರೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದ ಸುಬ್ರಮಣ್ಯನ್ ಮಂಗಳವಾರ ದಿ ಹಿಂದೂ ಪತ್ರಿಕೆಗೆ ಬರೆದಿದ್ದ ಲೇಖನದಲ್ಲಿ ವಾಸ್ತವವಾಗಿ 2018 ಮತ್ತು 2019 ನೇ ಸಾಲಿನ ಜಿಡಿಪಿ ದರ ಶೇ. 4.5% ರಷ್ಟು ಎಂದು ಅಂದಾಜಿಸಲಾಗಿತ್ತು ಆದರೆ ಸರ್ಕಾರ ಅದನ್ನು ಶೇ.7 % ರಷ್ಟು ಆಗುತ್ತದೆ ಎಂದು ಹೇಳಿತ್ತು ಎಂದು ಹೇಳಿದ್ದರು.

ಅಸರ್ಮಕ ಅಂಕಿ ಅಂಶಗಳು ಆರ್ಥಿಕತೆಯ ಆರೋಗ್ಯದ ಮೇಲೆ ಅದರ ಸುಧಾರಣೆಯ ಪ್ರಚೋದನೆಯನ್ನು ತಗ್ಗಿಸುತ್ತದೆ, ಒಂದು ವೇಳೆ ಜಿಡಿಪಿ ದರವನ್ನು ಶೇ. 4.5 % ಎಂದೇ ಹೇಳಿದ್ದಾರೆ ಬ್ಯಾಕಿಂಗ್ ಮತ್ತು ಕೃಷಿಯಲ್ಲಿರುವ ಸವಾಲುಗಳ ಮೇಲೆ ಹೆಚ್ಚು ಗಮನಗರಿಸಿ ಕಾರ್ಯನಿರ್ವಹಿಸುವ ತುರ್ತು ಹೆಚ್ಚುತ್ತಿತ್ತು ಎಂದು ಸುಬ್ರಮಣ್ಯನ್ ತಮ್ಮ ಲೇಖನದಲ್ಲಿ ಹೇಳಿದ್ದರು.