ನ್ಯಾಯಾಲಯದಲ್ಲಿದೆ ಬ್ರೂಸ್ ಲೀ ವಿವಾದ

ನ್ಯಾಯಾಲಯದಲ್ಲಿದೆ ಬ್ರೂಸ್ ಲೀ ವಿವಾದ

ಮಾರ್ಷಲ್‍ ಆರ್ಟ್ ನ ಹೊಸ ತಳಿಯ ಪ್ರವರ್ತಕ ಎಂದೇ ಹೆಸರಾಗಿ, ಸ್ಟಂಟ್ ಸಿನಿಮಾಗಳ ಮೂಲಕ ಪೂರ್ವ ಮತ್ತು ಪಶ್ಚಿಮ ದೇಶಗಳನ್ನ ಬೆಸೆದಿದ್ದ ಬ್ರೂಸ್ ಲೀ ಸತ್ತು 46 ವರ್ಷಗಳಾಗಿವೆ. ಆದರೂ ಇವರ ವಿಚಾರವೀಗ ಮತ್ತೆ ಸುದ್ದಿಗೆ ಬಂದಿದೆ.

ಚೀನಾದಲ್ಲಿ ನರಿಯಲ್ ಕುಂಗು ಫುಚೈನ್ ಎಂ ಹೋಟೆಲ್‍ ಉದ್ದಿಮೆಯೊಂದು ತನ್ನ ಜಾಹೀರಾತಿನಲ್ಲಿ ಬ್ರೂಸ್ ಲೀಯನ್ನು ಹೋಲುವ ಚಿತ್ರ ಬಳಸುತ್ತಿದೆ. ಇದನ್ನು ಬ್ರೂಸ್ ಲೀ ಮಗಳು ಶನ್ನನ್ ಲೀ ಷಾಂಘೈ ನ್ಯಾಯಾಲಯದಲ್ಲಿ ಪ್ರಶ್ನಿಸಿ, ನಮ್ಮ ಅನುಮತಿಯಿಲ್ಲದೆ ಈ ಚಿತ್ರ ಬಳಸಿರುವುದರ ಪರಿಹಾರವಾಗಿ 210 ಮಿಲಿಯನ್ ಯಾನ್‍ (214.07 ಕೋಟಿರು) ಮತ್ತು ನ್ಯಾಯಾಲಯದ ವೆಚ್ಚವಾಗಿ 88 ಸಾವಿರ ಯಾನ್‍ಗಳನ್ನ ಕೊಡಬೇಕೆಂದು ಕೋರಿದ್ದಾರೆ.

ಸದರಿ ಸಂಸ್ಥೆ ಅನೇಕ ವರ್ಷಗಳಿಂದ ಕಪ್ಪುಕೂದಲು, ಹಳದಿ ಟೀಷರ್ಟ್‍ ತೊಟ್ಟಿರುವ ಬ್ರೂಸ್ ಲೀಯನ್ನ ಹೋಲುವ ಚಿತ್ರವನ್ನು ವ್ಯಾಪಾರಿ ಲೋಗೋವಾಗಿ ಬಳಸುತ್ತಿದೆ. ಇದಕ್ಕೆ ತಕ್ಕ ವಿವರಣೆಕೊಡಬೇಕು, ಪರಿಹಾರ ಕೊಡಬೇಕು ಎಂದು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿದೆ.

60 ಮತ್ತು 70ರ ದಶಕದಲ್ಲಿ ಅತ್ಯಂತ ಹೆಸರಾದ, ದುಬಾರಿಯ ನಟನಾಗಿಯೂ ಇದ್ದ ಬ್ರೂಸ್ ಲೀ ಅನೇಕ ಮಾರ್ಷಲ್ ಆರ್ಟ್‍ಗಳನ್ನು ಸಮ್ಮಿಶ್ರಣಗೊಳಿಸಿ ಹೊಸ ಶೈಲಿಯನ್ನು ರೂಪಿಸಿ, ಅದರ ತರಬೇತಿಯನ್ನೂ ಕೊಡುತ್ತಿದ್ದರು, ಈ ಹೊಸ ಶೈಲಿಗೆ ಮಾನ್ಯತೆಯೂ ಇತ್ತು. ಸಿನಿಮಾ ನಟ, ನಿರ್ದೇಶಕ, ನಿರ್ಮಾಪಕನಾಗಿ ಜಗತ್ತಿನಾದ್ಯಂತ ಹೆಸರಾಗಿದ್ದ ಬ್ರೂಸ್ ಲೀ ತನ್ನ 34 ನೇ ವಯಸ್ಸಿನಲ್ಲೇ 1973 ರಲ್ಲೇ ಅನಾರೋಗ್ಯಕ್ಕೆ ಬಲಿಯಾಗಿದ್ದರು.