ರಾಜ್ಯಸಭೆ ಬಲ ವೃದ್ಧಿಗೆ ಶುರು ರಾಜಕೀಯ ಮೇಲಾಟ

ಯಾವ ರೀತಿಯಲ್ಲೂ ಕೈ ಸುಟ್ಟುಕೊಳ್ಳಬಾರದು, ರಾಜ್ಯಸಭೆಯಲ್ಲೂ ಬೇರೆಯವರ ಕೃಪಾಶ್ರಯ ಕೋರಬಾರದು ಎಂಬ ನಿಲುವು ಬಿಜೆಪಿಗಿದ್ದು, ಅದನ್ನು ಈ ವರ್ಷ ಮೇಲ್ಮನೆಯಲ್ಲೂ ಸಾಬೀತು ಪಡಿಸಿ ತನ್ನ ಬಲ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ.

ರಾಜ್ಯಸಭೆ ಬಲ ವೃದ್ಧಿಗೆ ಶುರು ರಾಜಕೀಯ ಮೇಲಾಟ

ಒಂದೊಂದೇ ರಾಜ್ಯ ಕಳೆದುಕೊಳ್ಳುತ್ತಾ, ಮೈಮೇಲೆ ವಿವಾದಗಳ ಮೂಟೆಯನ್ನೇರಿಕೊಳ್ಳುತ್ತಾ ಬಿಜೆಪಿ ಸಾಗಿದೆ. ಈ ವಿವಾದಗಳು ಕಾಯಿದೆ ರೂಪದಲ್ಲಿರುವಂಥದ್ದೇ ಹೆಚ್ಚು. ಇದರಲ್ಲಿಇದೇ ತಿಂಗಳು ಸರ್ವೋಚ್ಚ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿರುವ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯಂಥದ್ದೂ ಸೇರಿದೆ, ಇವಾಗ ಉಗ್ರರೂಪ ಪಡೆದಿರುವ ಪೌರತ್ವ ತಿದ್ದುಪಡಿ ಕಾಯಿದೆಯೂ ಸೇರಿದೆ. ಇಂಥ ಯಾವುದೆ ಕಾಯಿದೆಗಳಿರಲಿ ಅದರ ಹಿಂದಿನ ಸ್ವರೂಪವಾದ ಮಸೂದೆಗಳನ್ನು ಉಭಯ ಸದನಗಳಲ್ಲಿ ಅಂಗೀಕರಿಸಿಕೊಂಡಿದ್ದಾಗಿದೆ. ಲೋಕಸಭೆಯಲ್ಲಿ 303 ಸದಸ್ಯರನ್ನೊಂದಿರುವುದರಿಂದ  ಅಂಗೀಕಾರಕ್ಕೆ ಯಾವತೊಡಕೂ ಇಲ್ಲ. ಆದರೆ ಬಹುಮತ ಇಲ್ಲದಿದ್ದರೂ ರಾಜ್ಯಸಭೆಯಲ್ಲೂಇದನ್ನು ಗೆಲ್ಲಿಸಿಕೊಳ್ಳುವಲ್ಲಿ ಸಫಲವಾಗುತ್ತಿದೆ ಎಂಬುದು ವಿಶೇಷ ಮಾತ್ರವಲ್ಲ, ದೂರಗಾಮಿದೃಷ್ಟಿಯಿಂದ ನೋಡುವುದಾದರೆ ರಾಜ್ಯಸಭೆಯಲ್ಲೂ ಈ ಪಕ್ಷವೇ ಬಹುಮತ ಹೊಂದಿದರೆ ಇನ್ನು ಏನೇನೆಲ್ಲ ಮಸೂದೆಗಳನ್ನು ಗೆಲ್ಲಿಸಿಕೊಳ್ಳಬಹುದು ಎಂಬ ಆತಂಕಗಳೂ ಇವೆ.

ಈ ಆಂಥದಕ್ಕೊಂದು ಉದಾಹರಣೆ ನೋಡುವುದಾದರೆ, ರಾಷ್ಟ್ರದ ಮೂರನೇ ಅತಿದೊಡ್ಡದಾದ 39 ಸಂಸದರನ್ನು ಹೊಂದಿರುವ ರಾಜ್ಯ ತಮಿಳುನಾಡು. ಇಲ್ಲಿನ ಪ್ರಾದೇಶಿಕ ರಾಜಕಾರಣದ ಮುಂದೆ ಬಿಜೆಪಿ ಆಟ ನಡೆದೇ ಇಲ್ಲ. ಇದರಿಂದಾಗಿಯೇ 37 ಜಿಲ್ಲೆಗಳಿರುವ ರಾಜ್ಯವನ್ನು ವಿಭಜಿಸಿ ಬಿಟ್ಟರೆ ರಾಜಕೀಯವಾಗಿ ನೆಲೆಯೂರಬಹುದೇ ಎಂಬ ಲೆಕ್ಕಗಳು ಬಂದು ಕೂತಿವೆ ಎಂಬ ಆರೋಪಗಳು ಹೆಚ್ಚುತ್ತಿವೆ.

ಅಂದಹಾಗೆ ವಣ್ಣಿಯಾರ್‌ ಜನಾಂಗ ಹೆಚ್ಚಿದ್ದರೂ, ರಾಜಕೀಯ ಅಧಿಕಾರ ಇವರಿಗೆ ದೊಡ್ಡ ಪ್ರಮಾಣದಲ್ಲಿ ಸಿಕ್ಕಿಲ್ಲ. ಅದಕ್ಕಾಗಿಯೇ ಉತ್ತರ ತಮಿಳುನಾಡು ರಾಜ್ಯವನ್ನಾಗಿಸಿ ಎಂಬ ಬೇಡಿಕೆ ಹಿಂದಿನಿಂದಲೂ ಇಟ್ಟಿದ್ದಾರೆ. ಅಂತೆಯೇ ವೆಲ್ಲಾಳ ಗೌಂಡರ್ ಮತ್ತು ಮುಕ್ಕುಲತರ್‌ ಜನಾಂಗದವರು ದಕ್ಷಿಣ ತಮಿಳುನಾಡಿಗಾಗಿ, ಆಗ್ರಹಿಸುತ್ತಿದ್ದರೆ ಕೊಂಗರು ಜಾಸ್ತಿಯಿರುವ ಭಾಗದವರು ಕೊಂಗನಾಡಿಗಾಗಿ ಒತ್ತಾಯಿಸುತ್ತಿದ್ದಾರೆ.

ಎಂ.ಜಿ.ರಾಮಚಂದ್ರನ್ ಮುಖ್ಯಮಂತ್ರಿಯಾಗಿದ್ದಾಗಲೇ, ಚೆನ್ನೈನಿಂದ ರಾಜಧಾನಿ ಬದಲಾಯಿಸಲು ಹೊರಟಿದ್ದುದೂ ಆಗಿರಲಿಲ್ಲ. 2002 ರಲ್ಲಿ ಪಿಎಂಕೆಯ ಅನ್ಬುಮಣಿ ರಾಮದಾಸ್ 15 ಜಿಲ್ಲೆಗಳನ್ನು ವಿಭಜಿಸಿ ಪ್ರತ್ಯೇಕರಾಜ್ಯ ಮಾಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದರು. ಜಾತಿ ಆಧಾರದಲ್ಲಿ ವಿಭಜನೆ ಆಗಲ್ಲ ಎಂದು ಆಗಿನ ಮುಖ್ಯಮಂತ್ರಿ ಜಯಲಲಿತಾ ಕೂಡ ಖಡಾಖಂಡಿತವಾಗಿ ಹೇಳಿದ್ದರು. ಆದರೂ ಸ್ಟ್ಲಾನ್ಲಿಭವಾನಿ ಜಲಾಶಯಗಳೂ ಇರುವ ಉತ್ತರ ತಮಿಳುನಾಡು ಪ್ರತ್ಯೇಕ ರಾಜ್ಯ ಮಾಡಿ ಎಂಬ ಕೂಗು ಮಾತ್ರ ಇದ್ದೇ ಇದೆ. ಅದರಲ್ಲೂ ಹಿಂದೆ ಬಿಹಾರದಿಂದ ಜಾರ್ಖಂಡ್, ಆಂಧ್ರದಿಂದ ತೆಲಂಗಾಣ, ಇದೀಗ  ಜಮ್ಮು ಮತ್ತು ಕಾಶ್ಮೀರದಲ್ಲಾಗಿರುವ ಪ್ರತ್ಯೇಕತೆಯ ಹಿನ್ನೆಲೆಯಲ್ಲಿ ತಮಿಳಿಗರ ಪ್ರತ್ಯೇಕತೆಯ ಕೂಗು ಹೆಚ್ಚುತ್ತಿದೆ.

ರಾಜಕೀಯವಾಗಿಯೂ ಕಾಲೂರಲು ಸಾಧ್ಯವಾದೀತು ಎಂಬ ಲೆಕ್ಕಚಾರವನ್ನೂ ಬಿಜೆಪಿ ಹೊಂದಿದೆ ಎಂಬ ಮಾತುಗಳೀಗ ಆ ರಾಜ್ಯದಲ್ಲೀಗ ಬಿಸಿಬಿಸಿ ಚರ್ಚೆ ಹುಟ್ಟುಹಾಕಿದೆ. ಯಾವ ಕಾರಣಕ್ಕೂ ರಾಜ್ಯ ವಿಭಜನೆಗೆ ಬಿಡಲ್ಲ, ಇಂಥದ್ದೆಲ್ಲ ವದಂತಿ ಎಂಬ ನಿರಾಕರಣೆಗಳು ಇದ್ದೇ ಇವೆಯಾದರೂ, ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತಾಗಿಸಿದರೆ ಇನ್ನೆಲ್ಲೂಇಲ್ಲದ ನೆಲೆಯನ್ನು ವಿಸ್ತರಿಸಿಕೊಳ್ಳಲು ಕಮಲ ಪಕ್ಷ ತಮಿಳುನಾಡು ರಾಜ್ಯ ವಿಭಜಿಸುವಂಥದ್ದಕ್ಕೆ ಕೈ ಹಾಕೀತೇ ಎಂಬ ಪ್ರಶ್ನೆಗಳಿವೆ

ಇಂಥವೆಲ್ಲದಕ್ಕೂ ಕೈ ಹಾಕಿ, ಯಾವರೀತಿಯಲ್ಲು ಕೈ ಸುಟ್ಟುಕೊಳ್ಳಬಾರದು, ರಾಜ್ಯಸಭೆಯಲ್ಲೂ ಬೇರೆಯವರ ಕೃಪಾಶ್ರಯ ಕೋರಬಾರದು ಎಂಬ ನಿಲುವು ಬಿಜೆಪಿಗಿದ್ದು, ಅದನ್ನು ಈ ವರ್ಷ ಮೇಲ್ಮನೆಯಲ್ಲೂ ತನ್ನ ಬಲ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ.

ಈ ವರ್ಷದ ಫೆಬ್ರವರಿ, ಜೂನ್, ಜುಲೈ ಮತ್ತು ನವೆಂಬರ್ ತಿಂಗಳಲ್ಲಿ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ ಗಢ, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಝೊರಾಂ, ಒರಿಸ್ಸಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಾಖಾಂಡ, ಉತ್ತರ ಪ್ರದೇಶ,  ಪಶ್ಚಿಮ ಬಂಗಾಳ ಇವೆಲ್ಲ ರಾಜ್ಯಗಳಿಂದ ಒಟ್ಟು 73 ರಾಜ್ಯಸಭಾ ಸ್ಥಾನಗಳಿಗೆ  ಚುನಾವಣೆ ನಡೆಯಲಿದೆ.  ಇಷ್ಟೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತವೇ ಇಲ್ಲವಾದರೂ, ಮತ್ತೊಂದು ಮಾರ್ಗದಿಂದ ತನ್ನ ಗೆಲುವಿನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ದುಸ್ಸಾಹಸಕ್ಕೆ ಇಳಿಯದೇ ಇರುವುದಿಲ್ಲ ಎಂಬುದು ನಿಕ್ಕಿಯಾಗಿದೆ.  ಈ ವರ್ಷದಚುನಾವಣೆ ಮೂಲಕ ರಾಜ್ಯಸಭೆಯ ಬಲಾಬಲವನ್ನೂ ಹೆಚ್ಚಿಸಿಕೊಂಡರೆ, ಬಿಜೆಪಿ ಇನ್ನೇನೇನು ಮಸೂದೆಗಳನ್ನು ಬೇಕಾದರೂ ಲೀಲಾಜಾಲವಾಗಿ ಅನುಮೋದಿಸಿಕೊಳ್ಳಬಹುದು. ಅದು ಏಕಚಕ್ರಾಧಿಪತ್ಯ ಆಡಳಿತ ಶೈಲಿಯಾಗಿಬಿಡಬಹುದು ಎಂಬ ದುಗುಡದಿಂದಲೇ ವಿರೋಧ ಪಕ್ಷಗಳು ಏನಾದರಾಗಲಿ, ರಾಜ್ಯಸಭೆ ಚುನಾವಣೆಯಲ್ಲಿ ನಾವು ಯಾರೂ ಮುಗ್ಗರಿಸಬಾರದೆಂಬ ನಿಲುವಿಗೆ ಬದ್ಧವಾಗಲು ಹೊರಟಿವೆ. ಏನಾಗುತ್ತೆ ಮುಂದೆ ಎಂಬುದೇ ನಾಟಕೀಯ ರಾಜಕಾರಣಕ್ಕೆ ಮೂಲವಾಗಲಿವೆ.