ರಾಮ್ ದೇವ್ ಅವರ ‘ತುಳಸಿ ವಿಜ್ಞಾನ’ವನ್ನು ಬುಡಮೇಲುಮಾಡಿದ ವಿಚಾರವಾದಿ ನರೇಂದ್ರ ನಾಯಕ್

ರಾಮದೇವ್ ಹೇಳುವಂತೆ, ತುಳಸಿ ಎಲೆಗಳು  ವಿಕಿರಣವನ್ನು ನಾಶಪಡಿಸಿಬಿಟ್ಟರೆ, ಫೋನ್ ಕರೆಗಳನ್ನು ಮಾಡುವುದಕ್ಕಾಗಿ ನಿಮ್ಮ ಫೋನ್ ಅನ್ನು ಬಳಸಲು ನಿಮಗೆ ಸಾಧ್ಯವೇ ಆಗುವುದಿಲ್ಲ. ಈಗ ವಿಚಾರವಾದಿ ನರೇಂದ್ರ ನಾಯಕ್ ಮೂಲತಃ ಇದನ್ನು ತಮ್ಮ ಮನೆಯಲ್ಲಿ ಹಲವಾರು ಪ್ರಯೋಗಗಳ ಮೂಲಕ ದೃಢಪಡಿಸಿದ್ದಾರೆ.

ರಾಮ್ ದೇವ್ ಅವರ ‘ತುಳಸಿ ವಿಜ್ಞಾನ’ವನ್ನು ಬುಡಮೇಲುಮಾಡಿದ ವಿಚಾರವಾದಿ ನರೇಂದ್ರ ನಾಯಕ್

ಉದ್ಯಮಿ ಮತ್ತು ಯೋಗ ಗುರು ಬಾಬಾ ರಾಮದೇವ್ ಈಗ ತಮ್ಮ ಪ್ರಶ್ನಾರ್ಹ ಹೇಳಿಕೆಯಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಾಮದೇವ್ ಅವರು ಶನಿವಾರ "ಯೋಗ ಫಾರ್ ಹಾರ್ಟ್ ಕೇರ್" ಕುರಿತ ಸಮಾವೇಶಕ್ಕಾಗಿ ಉಡುಪಿಯಲ್ಲಿದ್ದರು, ಅಲ್ಲಿ ಅವರು "ತುಳಸಿ ಎಲೆಗಳನ್ನು ನಿಮ್ಮ ಫೋನ್ ಕವರ್ನಲ್ಲಿ ಇರಿಸಿ, ಅದು ನಿಮ್ಮ ಫೋನ್ ಹೊರಸೂಸುವ ವಿಕಿರಣದಿಂದ ನಿಮ್ಮನ್ನು ರಕ್ಷಿಸುತ್ತದೆ” ಎಂದು ಹೇಳಿದ್ದರು. ಈ ವಾದವನ್ನು ತಿರಸ್ಕರಿಸಿರುವ ಕರ್ನಾಟಕದ ಪ್ರಗತಿಪರ ಚಿಂತಕ ನರೇಂದ್ರ ನಾಯಕ್ ಮೊಬೈಲ್ ಫೋನ್, ತುಳಸಿ ಎಲೆಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ಸರಣಿ ಪ್ರಯೋಗಗಳನ್ನು ನಡೆಸಿ ಯೋಗ ಗುರು ಮಾತು ಸುಳ್ಳು ಎಂದು ಸಾಬೀತುಪಡಿಸಿದ್ದಾರೆ.

ಪ್ರಯೋಗದ ಬಗ್ಗೆ ಗಮನ ಹರಿಸುವ ಮೊದಲು ವಿಜ್ಞಾನ ಮತ್ತು ಅದರ ವ್ಯಾಖ್ಯಾನಗಳನ್ನು ಅರ್ಥಮಾಡಿಕೊಳ್ಳೋಣ. 'ವಿಕಿರಣ' ಎನ್ನುವುದು ಅಲೆಗಳು ಅಥವಾ ಕಣಗಳ ಹೊರಸೂಸುವಿಕೆಯನ್ನು ಸೂಚಿಸುತ್ತದೆ. ಮತ್ತು ಇದು ಸಂವಹನ ತಂತ್ರಜ್ಞಾನದಲ್ಲಿ ಬಳಸಲಾಗುವ ರೇಡಿಯೋ ತರಂಗಗಳು, ಮೈಕ್ರೋ ತರಂಗಗಳು ಮುಂತಾದ ವಿದ್ಯುತ್ಕಾಂತೀಯ ತರಂಗಗಳಿಗೆ ಮತ್ತು ಗಾಮಾ ಕಿರಣಗಳಿಗೆ ಬಳಸುವ ಪದವಾಗಿದೆ. ರೇಡಿಯೊ ಆವರ್ತನಗಳನ್ನು ಹೊರಸೂಸುವ ಮತ್ತು ಸ್ವೀಕರಿಸುವ ಮೂಲಕ ಸೆಲ್ ಫೋನ್ಗಳು ಕಾರ್ಯನಿರ್ವಹಿಸುವ ವಿಧಾನವು ಸಾಮಾನ್ಯವಾಗಿ 800-900 ಮೆಗಾಹರ್ಟ್ ವ್ಯಾಪ್ತಿಯಲ್ಲಿರುತ್ತದೆ. ಆದ್ದರಿಂದ, ನಿಮ್ಮ ನೆಚ್ಚಿನ ಎಫ್ಎಂ ರೇಡಿಯೊ ವಾಹಿನಿಗಳು 88-108 ಮೆಗಾಹರ್ಟ್ ವ್ಯಾಪ್ತಿಯಲ್ಲಿ ಆವರ್ತನಗಳನ್ನು ಸ್ವೀಕರಿಸಿದಂತೆ (ಅದು ಸಾಮಾನ್ಯವಾಗಿ ರೇಡಿಯೊ ವಾಹಿನಿಗೆ ಸಂಬಂಧಿಸಿದ ಸಂಖ್ಯೆ), ನಿಮ್ಮ ಸೆಲ್ ಫೋನ್ 800-900 ಮೆಗಾಹರ್ಟ್ ವ್ಯಾಪ್ತಿಯಲ್ಲಿ ಆವರ್ತನಗಳನ್ನು ಪಡೆಯುತ್ತದೆ. ಮತ್ತು ವಿಕಿರಣವನ್ನು ಸಹ ಹೊರಸೂಸುತ್ತದೆ ಇದರ ಮೂಲಕ ನಿಮ್ಮ ಧ್ವನಿಯನ್ನು ವಿದ್ಯುತ್ ಸಂಕೇತಗಳಾಗಿ ಪರಿವರ್ತಿತವಾಗುತ್ತದೆ ಆಗ ನೀವು ಇನ್ನೊಬ್ಬ ವ್ಯಕ್ತಿಯೊಂದಿಗೆ ಫೋನ್ನಲ್ಲಿ ಸಂವಹನ ಮಾಡಲು ಸಾಧ್ಯವಾಗುತ್ತದೆ.

ಈಗ, ರಾಮದೇವ್ ಹೇಳುವಂತೆ, ತುಳಸಿ ಎಲೆಗಳು  ವಿಕಿರಣವನ್ನು ನಾಶಪಡಿಸಿಬಿಟ್ಟರೆ, ಫೋನ್ ಕರೆಗಳನ್ನು ಮಾಡುವುದಕ್ಕಾಗಿ ನಿಮ್ಮ ಫೋನ್ ಅನ್ನು ಬಳಸಲು ನಿಮಗೆ ಸಾಧ್ಯವೇ ಆಗುವುದಿಲ್ಲ. ಈಗ ವಿಚಾರವಾದಿ ನರೇಂದ್ರ ನಾಯಕ್ ಮೂಲತಃ ಇದನ್ನು ತಮ್ಮ ಮನೆಯಲ್ಲಿ ಹಲವಾರು ಪ್ರಯೋಗಗಳ ಮೂಲಕ ದೃಢಪಡಿಸಿದ್ದಾರೆ.

ಈ ಪ್ರಯೋಗಗಳನ್ನು ನಡೆಸುವ ಸಲುವಾಗಿ ಸುದ್ದಿಗಾರರನ್ನು ಆಹ್ವಾನಿಸಿದ್ದ ನರೇಂದ್ರ ನಾಯಕ್ ವ್ಯಂಗ್ಯದ ಭಾಗವಾಗಿ ಪ್ರಯೋಗ ನಡೆಯುವ ಜಾಗಕ್ಕೆ ಬರುವಾಗ ನೀವು ನನ್ನ ಲ್ಯಾಂಡ್ ಲೈನ್ ಗೆ ಕರೆಮಾಡಿ ಬನ್ನಿ ನನ್ನ ಮೊಬೈಲ್ ಗೆ ಮಾಡಬೇಡಿ ಯಾಕೆಂದರೆ ರಾಮದೇವ್ ಹೇಳಿದಂತೆ ತುಳಸಿಯ ಕಾರಣಕ್ಕಾಗಿ ವಿಕಿರಣಗಳು ಸತ್ತುಹೋಗಿ ನನ್ನ ಮೊಬೈಲ್ ಕೆಲಸಮಾಡದಿದ್ದರೆ ಕಷ್ಟ ಎಂದು ಹೇಳಿದ್ದರು.

ವರದಿಗಾರರು ಜಾಗಕ್ಕೆ ತಲುಪಿದ ನಂತರ ನರೇಂದ್ರ ನಾಯಕ್ ಅವರು ಹಲವಾರು ಪ್ರಯೋಗಗಳನ್ನು ಮಾಡಲು ಪ್ರಾರಂಭಿಸಿದರು. ಮೊದಲಿಗೆ, ಅವರು ಮೈಕ್ರೊವೇವ್ ಓವನ್ ಒಳಗೆ ಸೆಲ್ ಫೋನ್ ಅನ್ನು ಇಟ್ಟುಕೊಂಡರು, ಬಾಗಿಲು ಮುಚ್ಚಿದರು, ಮತ್ತು ಅವರ ಸಹಾಯಕರನ್ನು ಸಂಖ್ಯೆಗೆ ಕರೆ ಮಾಡಲು ಕೇಳಿದರು. ವಿಕಿರಣವು ಆಗ ಕಾರ್ಯನಿರ್ವಹಿಸಿತ್ತು ಮತ್ತು ಸೆಲ್ ಫೋನ್ ಇನ್ನೂ ಸಿಗ್ನಲ್ ಪಡೆಯುತ್ತಿದೆ ಎಂದು ಸಾಬೀತುಪಡಿಸುವ ಮೂಲಕ ಫೋನ್ ರಿಂಗಾಯಿತು.

ನಂತರ ಫೋನ್ ಅನ್ನು ಒಂದು ತಟ್ಟೆಯಲ್ಲಿ ಇಟ್ಟುಕೊಂಡು ಫೋನ್ ಅನ್ನು ತುಳಸಿ ಎಲೆಗಳಿಂದ ಮುಚ್ಚಿದರು. ಮತ್ತೊಮ್ಮೆ, ಸಂಖ್ಯೆಯನ್ನು ಡಯಲ್ ಮಾಡಲಾಯಿತು - ಮತ್ತು ಆಶ್ಚರ್ಯಕರವಾಗಿ ಫೋನ್ ರಿಂಗಾಯಿತು, ತುಳಸಿ ಎಲೆಗಳಿಂದ ವಿಕಿರಣವನ್ನು ‘ನಾಶಪಡಿಸಲಾಗಿಲ್ಲ’ ಎಂಬುದು ಸಾಬೀತಾಯಿತು.

ನರೇಂದ್ರ ನಾಯಕ್ ಅದೇ ಫಲಿತಾಂಶದೊಂದಿಗೆ ಇತರ ಕೆಲವು ಎಲೆಗಳೊಂದಿಗೆ ಪ್ರಯೋಗವನ್ನು ಪುನರಾವರ್ತಿಸಿದರು. ನಂತರ ಅವರು ಸೆಲ್ ಫೋನ್ ಅನ್ನು ಅಲ್ಯೂಮಿನಿಯಂ ಕಾಗಗದದಲ್ಲಿ ಸುತ್ತಿದರು. ಇದರಿಂದಾಗಿ ಫೋನ್ ಸಿಗ್ನಲ್ ಸಿಗದೆ ಕರೆಯನ್ನು ನಿರ್ಬಂಧಿಸಿತು.

"ನೀವು ಕರೆಗಳನ್ನು ಮಾಡಿದಾಗ ಮತ್ತು ಕರೆಗಳನ್ನು ಸ್ವೀಕರಿಸುವಾಗ, ವಿಕಿರಣ ಇದ್ದೇ ಇರುತ್ತದೆ ಎಂದು ನರೇಂದ್ರ ನಾಯಕ್ ವಿವರಿಸುತ್ತಾರೆ, ರಾಮ್ ದೇವ್ ಸುಮ್ಮನೆ ಭಯವನ್ನು ಸೃಷ್ಟಿಸುತ್ತಿದ್ದಾರೆ ಮತ್ತು ತುಳಸಿ ಎಲೆಗಳು ಈ ವಿಕಿರಣವನ್ನು ನಿರ್ಬಂಧಿಸುವುದಾದರೂ ಹೇಗೆ, ಒಂದು ವೇಳೆ ವಿಕಿರಣವನ್ನು ನಿರ್ಬಂಧಿಸಿದರೆ, ಮೊಬೈಲ್ ಕಾರ್ಯನಿರ್ವಹಿಸುವುದಾದರೂ ಹೇಗೆ ಎಂಬುದು ನರೇಂದ್ರ ನಾಯಕ್ ಅವರ ಪ್ರಶ್ನೆ.

ಸೆಲ್ ಫೋನ್ ವಿಕಿರಣವು ಮಾನವ ದೇಹಕ್ಕೆ ಹಾನಿಕಾರಕವೇ ಎಂಬ ಬಗ್ಗೆ ವಿಶ್ವದಾದ್ಯಂತ ಸಾಕಷ್ಟು ಚರ್ಚೆಗಳು ನಡೆದಿವೆ, ಮತ್ತ ನಡೆಯುತ್ತಿವೆ. ಈ ಚರ್ಚೆಯ ಪರವಾಗಿ ಮತ್ತು ವಿರುದ್ದವಾಗಿ ಅನೇಕ ಮಂದಿ ಹಲವಾರು ಪುರಾವೆಗಳನ್ನು ಮುಂದಿಟ್ಟಿದ್ದಾರೆ. ಆದರೆ ಇದು ನಿಜವೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ತೀರ್ಮಾನ ಇನ್ನೂ ಆಗಿಲ್ಲ.