7 ವರ್ಷಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾಗುವ ಅಪರಾಧಗಳು ಗಂಭೀರ ಪ್ರಕರಣಗಳೆಂದು ಪರಿಗಣನೆ; ಸುಪ್ರೀಂ ಕೋರ್ಟ್

ಶಾಸಕಾಂಗದ ಉದ್ದೇಶವು ಏಳು ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆಯನ್ನು ಹೊಂದಿರುವ ಎಲ್ಲಾ ಅಪರಾಧಗಳನ್ನು‘ ಘೋರ ಅಪರಾಧಗಳ ವಿಭಾಗದಲ್ಲಿ ಸೇರಿಸುವುದು ಎಂದು ಹೇಳುವುದನ್ನು ಒಪ್ಪಲಾಗುವುದಿಲ್ಲ. ವಿಭಾಗದ ಭಾಷೆ ವಿಷಯ ಸ್ಪಷ್ಟವಾಗಿದ್ದಾಗ ಮತ್ತು ಘೋರ ಅಪರಾಧಗಳನ್ನು ಮಾಡುವಾಗ ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದರೆ ಅದನ್ನು ನಾವು ‘ಕನಿಷ್ಠ’ ಎಂಬ ಪದವನ್ನು ಉಪಯೋಗಿಸದಿರಲು ಸಾಧ್ಯವಿಲ್ಲ ಎಂದು ಹೇಳಿದೆ.

7 ವರ್ಷಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾಗುವ ಅಪರಾಧಗಳು ಗಂಭೀರ ಪ್ರಕರಣಗಳೆಂದು ಪರಿಗಣನೆ; ಸುಪ್ರೀಂ ಕೋರ್ಟ್

ನವದೆಹಲಿ: ಅಪರಾಧಿಗಳಿಗೆ ಏಳು ವರ್ಷಕ್ಕಿಂತ ಹೆಚ್ಚಿನ ಕಾಲ ಸೆರೆಮನೆವಾಸ ನೀಡಿದ್ದರೆ ಅಥವಾ ಏಳು ವರ್ಷಕ್ಕಿಂತ ಕಡಿಮೆ ಜೈಲು ಶಿಕ್ಷೆ ವಿಧಿಸಿದ್ದರೆ ಅಂತಹ ಪ್ರಕರಣಗಳನ್ನು ಗಂಭೀರ ಪ್ರಕರಣಗಳು ಎಂದು ಪರಿಗಣಿಸಬೇಕೆ ಹೊರತು ಘೋರ ಅಪರಾಧಗಳು ಅನ್ನುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ ಬೋಸ್ ನೇತೃತ್ವದ ನ್ಯಾಯಪೀಠ  ಹೇಳಿದೆ.

ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರು ಬರೆದ ತೀರ್ಪಿನಲ್ಲಿ ನ್ಯಾಯಪೀಠವು ಶಾಸಕಾಂಗದ ಉದ್ದೇಶ ಸ್ಪಷ್ಟವಾದಾಗ ಮಾತ್ರ ಶಾಸನದಿಂದ ಪದಗಳನ್ನು ಸೇರಿಸಬಹುದು ಅಥವಾ ತಗೆಯಬಹುದು ಎಂದು ಅಭಿಪ್ರಾಯಪಟ್ಟಿದೆ. ಶಾಸಕಾಂಗದ ಉದ್ದೇಶವು ಸ್ಪಷ್ಟವಾಗಿದ್ದರೆ, ನ್ಯಾಯಾಲಯವು ಶಾಸನದ ನಿಷ್ಕ್ರಿಯ ಅಥವಾ ವಿಕಾರವಾದ ಪದಬಳಕೆಯನ್ನು ತಡೆಯಬಹುದು.

ನಾಲ್ಕನೇ ವರ್ಗವನ್ನು "ಭೀಕರ" ಅಪರಾಧಗಳ ಅಡಿಯಲ್ಲಿ ಸೂಚಿಸಬಹುದು ಎಂಬ ಮನವಿಗೆ, ಶಾಸನದ ಮಾತುಗಳು ಸ್ಪಷ್ಟವಾಗಿದ್ದರೂ ಶಾಸಕಾಂಗದ ಉದ್ದೇಶವು ಅಸ್ಪಷ್ಟವಾಗಿದ್ದಾಗ ನ್ಯಾಯಾಲಯವು ನ್ಯಾಯಾಂಗದ ಯೋಚನೆಯಲ್ಲಿ ಇರುವ ಪದಗಳ ಅರ್ಥವನ್ನು ಬೇರೆ ಸರಿಹೊಂದು ಪದದೊಂದಿಗೆ ಸೇರಿಸುತ್ತೇವೆ ಅಥವಾ ಕಳೆಯುತ್ತೇವೆ ಎಂಬುದು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

“ಶಾಸಕಾಂಗದ ಉದ್ದೇಶವು ಏಳು ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆಯನ್ನು ಹೊಂದಿರುವ ಎಲ್ಲಾ ಅಪರಾಧಗಳನ್ನು‘ ಘೋರ ಅಪರಾಧಗಳ ವಿಭಾಗದಲ್ಲಿ ಸೇರಿಸುವುದು ಎಂದು ಹೇಳುವುದನ್ನು ಒಪ್ಪಲಾಗುವುದಿಲ್ಲ. ವಿಭಾಗದ ಭಾಷೆ ವಿಷಯ ಸ್ಪಷ್ಟವಾಗಿದ್ದಾಗ ಮತ್ತು ಘೋರ ಅಪರಾಧಗಳನ್ನು ಮಾಡುವಾಗ ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದರೆ ಅದನ್ನು ನಾವು ‘ಕನಿಷ್ಠ’ ಎಂಬ ಪದವನ್ನು ಉಪಯೋಗಿಸದಿರಲು ಸಾಧ್ಯವಿಲ್ಲ ಎಂದು ಹೇಳಿದೆ.

2015 ರ ಕಾಯ್ದೆ ಜಾರಿಗೆ ಬಂದ ದಿನದಿಂದಲೇ, ನಾಲ್ಕನೇ ವರ್ಗಕ್ಕೆ ಸೇರುವ(ಗಂಭೀರ ಅಪರಾಧಗಳು) ಅಪರಾಧಗಳನ್ನು ಮಾಡಿದ ಎಲ್ಲ ಮಕ್ಕಳೊಂದಿಗೆ ಮಕ್ಕಳಂತೆಯೇ ವ್ಯವಹರಿಸಬೇಕು ಸಂವಿಧಾದ ನ್ಯಾಯಪೀಠ 142 ನೇ ವಿಧಿಯಡಿಯಲ್ಲಿ ನಿರ್ದೇಶಿಸಿದೆ. ಈ ಪ್ರಕರಣದಲ್ಲಿ ‘ಚೈಲ್ಡ್ ಇನ್ ಕಾನ್ಫ್ಲಿಕ್ಟ್ ವಿತ್ ಲಾ’ ಎಂಬ ಹೆಸರನ್ನು ಬಹಿರಂಗಪಡಿಸಿ ಅದರ ತೀರ್ಪನ್ನು ಸರಿಪಡಿಸುವಂತೆ ನಿರ್ದೇಶಿಸಿದೆ. ಹಾಗೆಯೇ 2015 ರ ಕಾಯ್ದೆಯ ಪ್ರಕಾರ ಹೆಸರನ್ನು ತೆಗೆದುಹಾಕಲಾಗಿದೆ. ಸೂಕ್ತ ತಿದ್ದುಪಡಿ ಮೂಲಕ ಕಾಯಿದೆಯಲ್ಲಿರುವ ದೋಷವನ್ನು ಸರಿಪಡಿಸಲು ನ್ಯಾಯಪೀಠ ಸಂಸತ್ತಿಗೆ ತಿಳಿಸಿದೆ.

ನ್ಯಾಯಾಲಯವು ಶಾಸನ ಮಾಡಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಾಗ, ನ್ಯಾಯಪೀಠವು ಈ ಸಮಸ್ಯೆಯನ್ನು ನಿಭಾಯಿಸದಿದ್ದರೆ, ನಾಲ್ಕನೇ ವರ್ಗದ ಅಡಿಯಲ್ಲಿ ಅಪರಾಧಗಳನ್ನು ಮಾಡಿದ ಮಕ್ಕಳೊಂದಿಗೆ ವ್ಯವಹರಿಸಲು ಮಂಡಳಿಗಳಿಗೆ ಯಾವುದೇ ಮಾರ್ಗದರ್ಶನ ನೀಡಿಲ್ಲ ಎಂದು ವಾದಿಸಿದರು. ಎರಡು ದೃಷ್ಟಿಕೋನಗಳು ಸಾಧ್ಯವಿರುವ ಕಾರಣ, ನಾವು ಮಕ್ಕಳ ಪರವಾಗಿರುವ ದೃಷ್ಟಿಕೋನವನ್ನು ತೆಗೆದುಕೊಳ್ಳಲು ಬಯಸುತ್ತೇವೆ ಎಂದು ನ್ಯಾಯಾಲಯ ಹೇಳಿದೆ.

ಅಪರಾಧವೊಂದರ ಪ್ರಕರಣದಲ್ಲಿ ಬಾಲಾಪರಾಧಿ ಎಸಗಿರುವ ಅಪರಾಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ರ ಅಡಿಯಲ್ಲಿ ಶಿಕ್ಷಾರ್ಹ ಎಂದು ಹೇಳಲಾಗಿದೆ. ಗರಿಷ್ಠ ಹತ್ತು ವರ್ಷಗಳವರೆಗೆ ಜೀವಾವಧಿ ಶಿಕ್ಷೆ ಹಾಗೂ ಮೊದಲ ಭಾಗದಲ್ಲಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಹಾಗೆಯೇ ಹತ್ತು ವರ್ಷಗಳು ಅಥವಾ ದಂಡವನ್ನು ಎರಡನೆಯ ವಿಭಾಗದಲ್ಲಿಯೂ ನೀಡಲಾಗುತ್ತದೆ. ಈ ನಿಬಂಧನೆಯ ಅಡಿಯಲ್ಲಿ ಯಾವುದೇ ಕನಿಷ್ಠ ಶಿಕ್ಷೆಯನ್ನು ಸೂಚಿಸಲಾಗಿಲ್ಲ.

ಉದ್ದೇಶಪೂರ್ವಕವಾಗಿ ಕೊಲೆ ಮಾಡಿದ್ದರೆ, ಕಾರಣವಾಗುವಂತಹ ದೈಹಿಕ ಗಾಯವನ್ನು ಉಂಟುಮಾಡಿ ಕೊಲೆ ಮಾಡಿದ್ದರೆ ಅಂತವರಿಗೆ ಸೆಕ್ಷನ್ 304 ರ ಮೊದಲ ಭಾಗವು ಕೊಲೆ ಅಪರಾಧಕ್ಕೆ ಕಾರಣವಾಗದ ನರಹಂತಕನಿಗೆ ಶಿಕ್ಷೆಯಾಗಲಿದೆ.
ಈ ಕೃತ್ಯವು ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾಗಬಹುದು ಎಂಬುವುದು ಗೊತ್ತಿದ್ದು ಮಾಡಿದರೆ, ಅದು ಉದ್ದೇಶ ಪೂರಿತವಲ್ಲದಿದ್ದರೂ ಸಾವಿಗೆ ಕಾರಣವಾಗುವಂತಹ ದೈಹಿಕ ಗಾಯವನ್ನು ಉಂಟುಮಾಡುವುದು ಇಂತಹ ಕೃತ್ಯಗಳಿಗೆಲ್ಲ ಸೆಕ್ಷನ್ 304 ರ ಎರಡನೇ ಭಾಗದಡಿಯಲ್ಲಿ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಇಲ್ಲವೇ ಶಿಕ್ಷೆ ಮತ್ತು ದಂಡವನ್ನು ಸಹ ನೀಡಲಾಗುತ್ತದೆ.

ಪ್ರಸ್ತುತ ಪ್ರಕರಣ

ನ್ಯಾಯಾಲಯದ ಮುಂದೆ ಇರುವ ಪ್ರಕರಣದಲ್ಲಿ, ಬಾಲಾಪರಾಧಿಗಳು ವೇಗವಾಗಿ ವಾಹನವನ್ನು ಓಡಿಸುವುದರಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಹೀಗಾಗಿ ಇಂತಹ ಪ್ರಕರಣಗಳಿಗೆ ಸೆಕ್ಷನ್ 304 ರ ಎರಡನೇ ಭಾಗದಡಿಯಲ್ಲಿ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಬಾಲಾಪರಾಧಿ ಅಪಘಾತದ ಸಮಯದಲ್ಲಿ, 16 ವರ್ಷಕ್ಕಿಂತ ಮೇಲ್ಪಟ್ಟಿದ್ದರೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿದ್ದ. ಬಾಲಾಪರಾಧಿ ‘ಎಕ್ಸ್’ ಭೀಕರ ಅಪರಾಧ ಮಾಡಿದ್ದಾನೆ ಹಾಗಾಗಿ ವಯಸ್ಕರಂತೆ ವಿಚಾರಣೆಗೆ ಒಳಪಡಿಸಬೇಕು ಎಂದು 2016, ಏಪ್ರಿಲ್ 6 ರಂದು ಜುವೆನೈಲ್ ಜಸ್ಟೀಸ್ ಬೋರ್ಡ್ ಅಭಿಪ್ರಾಯಪಟ್ಟಿದೆ.

ಮಕ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ ಮೇಲ್ಮನವಿಯನ್ನು ಸಹ ಫೆಬ್ರವರಿ 11, 2019 ರಂದು ವಜಾಗೊಳಿಸಲಾಗಿತ್ತು. ನಂತರ ಬಾಲಾಪರಾಧಿ 'ಎಕ್ಸ್' ತನ್ನ ತಾಯಿಯ ಮೂಲಕ ದೆಹಲಿ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದ. ಇದೊಂದು ಪ್ರಶ್ನಾರ್ಹ ಅಪರಾಧವಾಗಿದ್ದು,  ಕನಿಷ್ಠ ಶಿಕ್ಷೆಯನ್ನು ವಿಧಿಸಲಾಗಿಲ್ಲವಾದ್ದರಿಂದ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ರ ಸೆಕ್ಷನ್ 2 (33) ರ ವ್ಯಾಪ್ತಿಗೆ ಬರುವುದಿಲ್ಲ.

ಇದಕ್ಕಾಗಿ ಭಾರತೀಯ ದಂಡ ಸಂಹಿತೆ ಅಥವಾ ಯಾವುದೇ ಕಾನೂನಿನಡಿಯಲ್ಲಿ ಕನಿಷ್ಠ ಶಿಕ್ಷೆ ಜಾರಿಯಲ್ಲಿರುವ ಏಳು ವರ್ಷಗಳ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಯಾಗಿರುವುದನ್ನು ಸೆಕ್ಷನ್ 2 (33)ರ ಅಡಿಯಲ್ಲಿ "ಭೀಕರ ಅಪರಾಧಗಳು" ಎಂದು ಹೇಳಲಾಗುತ್ತದೆ.ಹಾಗೆಯೇ ಸೆಕ್ಷನ್ 2 (35) 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವುಗೆ “ಬಾಲಾಪರಾಧಿ” ಎಂದು ಪರಿಗಣಿಸಲಾಗುತ್ತದೆ.

ಐಪಿಸಿ ಅಥವಾ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯಾಗಿದ್ದರೆ, ಅದನ್ನು ಸೆಕ್ಷನ್ 2 (45)ಅಡಿಯಲ್ಲಿ "ಸಣ್ಣ ಅಪರಾಧಗಳು" ಎಂದು ಹೇಳಲಾಗುತ್ತದೆ. ಐಪಿಸಿ ಅಥವಾ ಇತರ ಯಾವುದೇ ಕಾನೂನಿನ ಅಡಿಯಲ್ಲಿ ಶಿಕ್ಷೆ ಮೂರರಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯಾಗಿದ್ದಲ್ಲಿ ಇದನ್ನು ಸೆಕ್ಷನ್ 2 (54)ರ ಅಡಿಯಲ್ಲಿ "ಗಂಭೀರ ಅಪರಾಧಗಳನ್ನು" ಎಂದು ಹೇಳಲಾಗುತ್ತದೆ.

2015 ರ ಕಾಯಿದೆಯ ಸೆಕ್ಷನ್ 15ರ ಅನ್ವಯ, ಬಾಲಾಪರಾಧಿಯಾದವನು ಘೋರ ಅಪರಾಧ ಎಸಗಿದ್ದರೆ, ಅಪರಾಧವನ್ನು ಎಸಗಲು ಮಗುವಿಗಿರುವ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ, ಅಪರಾಧದ ಪರಿಣಾಮ ಮತ್ತು ಅದು ಎಸಗಿದ ಸಂದರ್ಭಗಳು, ಮಗುವನ್ನು  ಅರ್ಥಮಾಡಿಕೊಳ್ಳುವ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಬಾಲಾಪರಾಧಿ ನ್ಯಾಯ ಮಂಡಳಿಯು ಪ್ರಾಥಮಿಕ ಮೌಲ್ಯಮಾಪನವನ್ನು ನಡೆಸುತ್ತದೆ.

ಸೆಕ್ಷನ್ 19ರ ಅನ್ವಯ ಮಂಡಳಿಯ ಪ್ರಾಥಮಿಕ ಮೌಲ್ಯಮಾಪನವನ್ನು ಮರು ಮೌಲ್ಯಮಾಪನ ಮಾಡಲು ಮಕ್ಕಳ ನ್ಯಾಯಾಲಯಕ್ಕೆ ಅಧಿಕಾರ ನೀಡುತ್ತದೆ. ಮಗುವನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು ಮತ್ತು ಮಗುವಿಗೆ 21 ವರ್ಷ ತುಂಬುವವರೆಗೆ ಜೈಲಿಗೆ ಕಳುಹಿಸುವಂತಿಲ್ಲ ಎಂದು ಸೆಕ್ಷನ್ 19 ರ ಉಪವಿಭಾಗ (2) ರ ಅಡಿಯಲ್ಲಿ ತಿಳಿಸಲಾಗಿದೆ.
ಇಷ್ಟಾದರೂ 2015 ರ ಕಾಯಿದೆಯು ಸಣ್ಣ, ಗಂಭೀರ ಮತ್ತು ಘೋರ ವರ್ಗಗಳ ಅಡಿಯಲ್ಲಿ ಬರದ ನಾಲ್ಕನೇ ವರ್ಗದ ಅಪರಾಧಗಳನ್ನು ಪರಿಗಣಿಸಲು ವಿಫಲವಾಗಿದೆ.

2015 ರ ಕಾಯ್ದೆಯ ಯೋಜನೆಯು ‘ಮಕ್ಕಳನ್ನು ರಕ್ಷಿಸುವುದು’ ರಕ್ಷಿಸುವುದಗಿದೆ. ಮಕ್ಕಳನ್ನು ವಯಸ್ಕರಂತೆ ನೋಡಿಕೊಳ್ಳುವುದು ನಿಯಮಕ್ಕೆ ಒಂದು ಅಪವಾದ ಇದು ಶಾಸನಬದ್ಧ ವ್ಯಾಖ್ಯಾನದ ತತ್ವವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.