ಸುಮಲತಾ ಅಂಬರೀಷ್ ಗೆ ಮತ್ತೆ ಅಗ್ನಿಪರೀಕ್ಷೆ

ಸುಮಲತಾ ಅಂಬರೀಷ್ ಗೆ ಮತ್ತೆ ಅಗ್ನಿಪರೀಕ್ಷೆ

ಮಂಡ್ಯ ಲೋಕಸಭಾ ಚುನಾವಣಾ ಬಳಿಕ ಸುಮಲತಾ ಅಂಬರೀಷ್ಗೆ ಮತ್ತೆ ಅಗ್ನಿಪರೀಕ್ಷೆ ಎದುರಾಗ್ತಿದೆ.  ಇದೇ ತಿಂಗಳ 23ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಮರುದಿನವೇ ತಾವು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರೋ ಡಾಟರ್ ಆಫ್ ಪಾರ್ವತಮ್ಮ ಸಿನಿಮಾ ತೆರೆಕಾಣಲಿದೆ. ತಾಯಿ-ಮಗಳ ಬಾಂಧವ್ಯ ಹಾಗೂ ಕ್ರೈಂ-ಥ್ರಿಲ್ಲರ್ ಕಥಾ ಎಳೆ ಸಿನಿಮಾದಲ್ಲಿದೆ. ಡಾಟರ್ ಆಫ್ ಸಿನಿಮಾದಲ್ಲಿ ಹರಿಪ್ರಿಯಾ ವೈದೇಹಿ ಹೆಸರಿನ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಹರಿಪ್ರಿಯಾರ ತಾಯಿ ಪಾತ್ರದಲ್ಲಿ ಸುಮಲತಾ ಅಂಬರೀಶ್ ಅಭಿನಯಿಸಿದ್ದಾರೆ. ಹರಿಪ್ರಿಯಾ ಅಭಿನಯದ 25ನೇ ಸಿನಿಮಾ ಇದಾಗಿದೆ. ಡಾಲಿ ಧನಂಜಯ್ ಈ ಸಿನಿಮಾದ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಸಾಕಷ್ಟು ವಿಶೇಷತೆಗಳಿಂದ ಡಾಟರ್ ಆಫ್ ಪಾರ್ವತಮ್ಮ ಕೂಡಿರೋದ್ರಿಂದ ಅಭಿಮಾನಿಗಳ ನಿರೀಕ್ಷೆ ಕೊಂಚ ಜಾಸ್ತಿಯೇ ಇದೆ.
ಕಾನ್ಫಿಡೆನ್ಸ್ ಇದೆ.. ಓವರ್ ಕಾನ್ಫಿಡೆನ್ಸ್ ಇಲ್ಲ..!
ಇವತ್ತು ಡಾಟರ್ ಆಫ್ ಪಾರ್ವತಮ್ಮ ಸಿನಿಮಾದ ಪ್ರೆಸ್ಮೀಟ್ನಲ್ಲಿ ಮಾತನಾಡಿದ ಸುಮಲತಾ ಅಂಬರೀಶ್ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ್ರು. ಚುನಾವಣೆ ರಿಸಲ್ಟ್ ಎದುರಾಗ್ತಿದೆ ಅನ್ನೋವಾಗ ಅಂಬರೀಶ್‌ ಬಿಂದಾಸ್‌ ಆಗಿರ್ತಿದ್ರು. ಆದ್ರೆ ನನಗೆ ಫಲಿತಾಂಶದ ಬಗ್ಗೆ ಕುತೂಹಲವಿದೆ. ಎಲೆಕ್ಷನ್ ರಿಸಲ್ಟ್ ಕುರಿತಾಗಿ ದಿನಕ್ಕೊಂದು ಸರ್ವೆ ಹೊರಬೀಳ್ತಿದೆ. ನನಗೆ ರಿಸಲ್ಟ್‌ ಬಗ್ಗೆ ಕಾನ್ಫಿಡೆಂಟ್ ಇದೆ. ಆದ್ರೆ ಓವರ್‌ ಕಾನ್ಫಿಡೆನ್ಸ್ ಇಲ್ಲ. ಮಂಡ್ಯ ಜನತೆಯ ರೆಸ್ಪಾನ್ಸ್ ನನಗೆ ಪಾಸಿಟಿವ್‌ ವೈಬ್ಸ್ ನೀಡಿದೆ ಅಂದ್ರು.
ನಿಖಿಲ್ ಎಲ್ಲಿದ್ದೀಯಪ್ಪಾ, ಜೋಡೆತ್ತು ಸಿನಿಮಾಗಳಿಗೆ ಸುಮಲತಾ ವಿಶ್:
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಾಪ್ಯುಲರ್ ಆಗಿದ್ದ ನಿಖಿಲ್ ಎಲ್ಲಿದ್ದೀಯಪ್ಪಾ, ಜೋಡೆತ್ತು, ಕಳ್ಳೆತ್ತು ಪದಗಳು ಸಿನಿಮಾಗಳಾಗ್ತಿವೆ.  ಈ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್, ‘ಜೋಡೆತ್ತು ಮತ್ತು ಎಲ್ಲಿದ್ದೀಯಪ್ಪಾ ಸಿನಿಮಾ ನಿರ್ಮಾಣವಾಗ್ತಿದೆ ಎಂದು ಕೇಳ್ಪಟ್ಟೆ. ಆ ಎರಡು ಚಿತ್ರಗಳಿಗೂ ಒಳ್ಳೆಯದಾಗಲಿ ಎಂದ್ರು.