ಸಬ್‍ಕೋ ಸನ್ಮತಿ ದೇ ಭಗವಾನ...!

ಸಬ್‍ಕೋ ಸನ್ಮತಿ ದೇ ಭಗವಾನ...!

   ಏನಪಾ ಬಸಣ್ಣಾ...... ಇದೇನೋ ಈ ನಮೂನಿ ಬಣ್ಣಾ ಬಡಕಂಡ ಹೊಂಟಿಯಲ್ಲೋ......? ಯಾಕೋ ಇನ್ನು ಇಲೇಕ್ಷನ ಗುಂಗಿನಿಂದ ಹೊರ್ಗ ಬಂದಿಲ್ಲಾ..! ಯಾವಾಗ್ಪಾ ನಿಮ್ಮ ಮೋದಿ ಸಾಹೇಬ್ರು ಪ್ರಧಾನಿ ಆಗಿ ಪ್ರಮಾಣ ವಚ್ನಾ ಸ್ವೀಕಾರ ಮಾಡೋದು...!
   ತಡ್ರೀ.... ಈಗರ ಚುನಾವಣೆ ಮುಗದೈತಿ.... ಐತಿವಾರ ಇಲ್ಲಾ ಸೋಮಾರ ನಮ್ಮ ಮೋದಿಯವ್ರು ಪ್ರಧಾನ ಮಂತ್ರಿ ಆಗಿ ಮತ್ತ ಓದ್ ತಗೋಳ್ಳತಾರ, ದಿಲ್ಲಿಗೆ   
   ನೀವು ಬರ್ತೀರೇನು....?
    ಒಲ್ಲಪಾ ಮಾರಾಯ...... ನನಗ ಕೆಲ್ಸಾ- ಬಗಸಿ ಅದಾವು,  ಈಗರ ಮಳಿ ಸುರುವಾಗೈತಿ.! ಇನ್ನು ಹೊಲ ಹರಿಗಿಸಿಲ್ಲ.... ಬಿತ್ತಾಡ ಸುಗ್ಗಿ ಚಲುವಾಗೇತಿ.  ಬೀಜ-ಗೊಬ್ಬರ ಇನ್ನು ತಂದಿಲ್ಲ..... " ಮಳೆಗಾಲ ಸುರುವಾಗೋದ್ರೊಳ್ಗ ಬ್ಯಾಂಕ್‍ಗೆ ಓಡಾಡಿ ಬೆಳೆಸಾಲ ತಗಾಬೇಕು..." "ಈಸಾಲಮನ್ನಾ ಗೋಟಾಳಿ ಇನ್ನು ಮುಗಿವಲ್ದು.  ಬ್ಯಾಂಕಿನವರು ಇವತ್ತ ಬಾ, ನಾಳೆಬಾ ಅಂತ ಓಡ್ಯಾಡ್ಸಾಕ ಹತ್ಯಾರ.....  ಬ್ಯಾಂಕಿಗೆ ಓಡಾಡಿ ಓಡಾದಿ ಕಾಲಾಗಿನ ಎರಡಜೊತೆ ಜೋಡು ಹರಿದು ಹೋಗ್ಯಾವು" "ರಾಜಕಾರಣಿಗಳ ಸಹವಾಸ ವರ್ಷವಿಡಿ ಉಪವಾಸ ಅನ್ನೋಹಂಗ ನಿಮ್ಮಂತ ರಾಜಕಾರಣ್ಗಿಗಳ ಸಹವಾಸ ಬ್ಯಾಡಪ್ಪೋ ಬಾಡ".!
ಹಂಗ್ಯಾಕಂತಿರೀ..... ನಮ್ಮ ಎಂಪಿ ಸಾಹೇಬ್ರ್ ಕಡಿಂದ ನಿಮ್ಮ ಬ್ಯಾಂಕ್ ಮ್ಯಾನೇಜರಿಗೆ ಪೋನಮಾಡ್ಸಿ  ನಿಮ್ಮ ಕೆಲ್ಸಾ ಮಾಡಿಕೊಡಾಕ ಹೇಳಸ್ತನ್ರೀ..ಬರ್ರೀ....ಅದೇನೂ ದೊಡ್ಡ ಮಹಾ ಕೆಲಸಾ ಅಂತೀರಿ?
     ಸಾಕಪ್ಪೋ ಸಾಕು ನಿಮ್ಮ ಎಂಪಿ ಸಹವಾಸ...!  "ಕೇಂದ್ರ ಸರ್ಕಾರದವ್ರು ಮನಿಕಟ್ಟಾಕ ರೊಕ್ಕಾ ಕೊಡತಾರ ಅಂತ ಹೇಳಿ ನನ್ನ ಕಡಿಂದ ಅರ್ಜಿ ಹಾಕ್ಸಿದ್ದಿ ನೆ
     ನೆನ್ಪೈತನು ನಿನಗ" "ನಿನ್ನ ಮಾತು ಕೇಳಿ ಸಾಲಸೂಲಾ ಮಾಡಿ ಸರ್ಕಾರದ ರೊಕ್ಕ ಬರತೈತಿ ಅಂತ ಮನಿ ಕಟ್ಸಾಕ ಹಾಕಿದ್ದೆ.....  ಎರಡ ವರ್ಷಆದ್ರು  
    ಕೇಂದ್ರ ಸರ್ಕಾರದ ರೊಕ್ಕ  ಬರಾಕ ವಲು"್ದ......! 
ತಡ್ರೀ ಕೇಂದ್ರದಾಗ ಮತ್ತ ನಮ್ಮ ಸರ್ಕಾರನ ಬಂದೈತಿ..... ನಮ್ಮ ಎಂಪಿ ಸಾಹೇಬ್ರಿಗೆ ಹೇಳಿ ಕೇಂದ್ರದಿಂದ ರೊಕ್ಕಾ ಬಿಡುಗಡೆ ಮಾಡ್ಸಾಕ ಹೇಳ್ತನಿ ಬಿಡ್ರೀ...!
ಆ ವಿಷಯಾ ಬಿಡ್ರೀ.... ನೀವು ಏನ... ಅನ್ರಿ ಕಾಕಾ... "ಎಂಪಿ ಚುನಾವಣೆ ಒಳ್ಗ ಗೌಡ್ರು,.... ಖರ್ಗೆ... ಮೊಯ್ಲಿ... ಉಗ್ರಪ್ಪ...ಮುನಿಯಪ್ಪ..... ಸೋಲಬಾರದಿತ್ತು"....?
   ಹಂಗ್ ಅಂದ್ರ ಹೆಂಗ್ಯೋ.....? "ಜನ್ರ ತೀರ್ಪು.... ದೊಡ್ಡೋರ ಇರ್ಲೀ. ಸಣ್ಣೋರು ಇರ್ಲೀ ಒಪ್ಪಾಕಬೇಕು. ದೇವೇಗೌಡ್ರು ಆದ್ರೇನು, ಖರ್ಗೆ ಆದ್ರೇನು. ಅವರು    
   ಮನುಷ್ಯರ ಹೌದಲ್ಲ"..?
ಹೌದ್ರೀ...ಆದ್ರ ನಾನು ಹೇಳಿದ್ದೂ ಖರ್ಗೆ, ಉಗ್ರಪ್ಪನಂತವರು ಅನುಭವ ಇದ್ದರಾಜಕಾರ್ಣಿಗಳು.... ಸಂವಿಧಾನದ ಬಗ್ಗೆ ತಿಳಕೊಂಡವ್ರು....."ಸಂಸತ್ತಿನೊಳಗ ಕೆಲವು ಎಡಬಿಡಂಗಿಗಳು ಸಂವಿಧಾದ ಬಗ್ಗೆ ಏನಾದ್ರು ಎಡವಟ್ಟು ಮಾತಾಡಿದ್ರ"  "ಅದು ಹಿಂಗಲ್ಲರೆಪಾ ಅಂತ ಅವರ ಕಿವಿ ಹಿಂಡತಿದ್ದರೂ.'...ಲೋಕಸಭೆ ಒಳ್ಗ ಹಿರೇರು ಇದ್ರ ಚೊಲೋ ಇರ್ತಿತ್ತು".....! "ಅನುಭವ ಇರುಕಡಿಗೆ  ಅಮೃತ ಇರತೈತಿ ಅಂತ ನಮ್ಮ ದೊಡ್ಡಪ್ಪ ಅದರಿ ಪಾಟೀಲ ಪುಟ್ಟಪ್ಪನವರು ಹೇಳ್ಯಾರ"....
   ಹೂಂ... "ಅನುಭವ ಇರೋರ ಕೈಯಾಗ ಸಿಕ್ಕ  ನಮ್ಮ ದೇಶ ಹಿಂಗಾಗೇತಿ"..? "ಎಲ್ಲೆನೋಡಿದ್ರು ಜಾತಿ -ಜಾತಿ ನಡುವೆ ಹೊಡೆದಾಟ"... "ಜಾತಿಗಾಗಿ ದಂಗೆ, 
   ಲಂಚ್...., ನಿರುದ್ಯೋಗ ಸಮಸ್ಯಾ.... ಸುಳ್ಳು.... ಕಳವು....ಮೋಸಾ... ವಂಚನೆ.... ಅನಾಚಾರ,....ವಾಮಾಚಾರ... ಅಸುಯೇ.... ಒಂದ್-ಎರಡ, ಮೂರ...
  ನಾಲ್ಕ ಹಿಂಗ್ ಹೇಳ್ತ ಹೋದ್ರ ನೂರೇಂಟ್ ಅದಾವು."..... "ಊರಿಗೆ ಬೆಂಕಿ ಬಿದ್ರ ಆ ಬೆಂಕಿನ ಆರ್ಸೋದು ಬಿಟ್ಟು ಆ ಬೆಂಕಿಯೋಳ್ಗ ಕೈ ಕಾಯಿಸೋ ಜನಾನ 
  ಬಾಳಷ್ಟು ಅದಾರ" ....ಏನ್ ಮಾಡಾಕಾ ಆಕೈತಿ.. ಅನುಭವಿಗಳ ಕೈಯಾಗ ಸಿಕ್ಕ ದೇಶದೋಳ್ಗ ಜನಸಂಖ್ಯೆ ಅಷ್ಟ ಹೆಚ್ಚಾಗಿಲ್ಲ...... ಇವೇಲ್ಲಾನು ಹೆಚ್ಚಾಗ್ಯಾವು. 
  ನೋಡಲೇ "ಹೊಸಬ್ರು ರಾಜಕಾರಣಕ್ಕ ಬರಬೇಕು,.... ಅಂದ್ರ ಹೊಸಾ ವಿಚಾರ, ಹೊಸಾ ಆಲೋಚನ್ನೆಗಳ ಇಟಗೊಂಡು ಏನಾದ್ರು ಹೊಸಾ ಬದಲಾವಣೆ 
  ತರಾಕ ಆಕೈತಿ"....! "ಹೊಸಾ ನೀರು ಬಂದಾಗ ಹಳೆ ನೀರು ಕೊಚಿಗೆಂಡ ಹೋಗಬೇಕು" ಅದು ನಿಸರ್ಗದ ನಿಯಮ,,,,!
ಅಂದ್ರ...ಅಮೇತಿ ಒಳ್ಗ ರಾಹುಲ್‍ಗಾಂಧಿ ಸೋತು ಸೃತಿ ಇರಾನಿ ಆರ್ಸಿ ಬಂದಾಳಲ್ಲ ಹಂಗ್ ಅಂತಿರೇನು...? 
   "ಸೃತಿ ಇರಾನಿ ಹಳಬ್ಲು,... ಈಹಿಂದ ಅಂದ್ರ 2014ರೊಳ್ಗ ಆಕಿ ಲೋಕಸಭೆ ಇಲೇಕ್ಷನ್ ಒಳ್ಗ ಸೋತಿದ್ಲು.... ಆದ್ರು ಈಮೋದಿ ಸಾಹೇಬ್ರು ಅಕಿನ ಕೇಂದ್ರದ 
   ಮಂತ್ರಿಮಾಡಿದ್ರು..... ಈಗ ನೋಡಿದ್ರ ಆ ಹೆಣ್ಣಮಗ್ಳು 125 ವರ್ಷ ಇತಿಹಾಸ ಇರೋ ಕೈ ಪಕ್ಷದ ಅಧ್ಯಕ್ಷಗ ನೀರು ಕುಡ್ಸಿ ಆರ್ಸಿ ಬಂದಾಳ ಅಂದ್ರ ಅಕಿನ  
  ಹಗರ ತಿಳಕೋಬ್ಯಾಡ" ...? ಆ ಎಮ್ಮಾ ಕೇಂದ್ರದಾಗ ಮಂತ್ರಿ ಆದ್ರು ಆಗಬಹ್ದು...!
ಏ...ನಮ್ಮ "ಸುಮ್ಮಕ್ಕನು ಮುಖ್ಯಮಂತ್ರಿ ಕುಮಾರಣ್ಣಗ, ಅವರ ಮಗ ನಿಖಿಲ್‍ಗೆ ಒಟ್ಟಿಗೆ ನೀರು ಕುಡ್ಸಿ ಮಂಡ್ಯದಿಂದ ಎಂಪಿ ಆಗ್ಯಾಳಲ್ರೀ...ಅಕಿಗೂ ಮಂತ್ರಿ ಪಟ್ಟ ಸಿಗಬಹುದೇನ್ರೀ"...?
    ಹೆಂಗ್ಯ ಹೇಳಾಕ ಆಕೈತೋ. ಎಲ್ಲಾ ಮೇಲ್ನವನಾಟ....?
 ಹಂಗಲ್ರೀ ಗೌಡ್ರ. ಇಗ ಚುನಾವಣೆ ಒಳ್ಗ ಸೋತು ದೊಡ್ಡ ದೊಡ್ಡ ಮನುಷಾರು ಮನಿಸೇರ್ಯಾರಲ್ಲ....! ಅವರು ಏನ್ ಮಾಡತಾರ. ಯಾವುದಾದ್ರು   ಮಠ ಸೇರ್ತಾರನು ... ಮತ್ತ..?
   ಅವರ್ಯಾಕ ಮಠ ಸೇರ್ತಾರಲೇ ಮಂಗ್ಯಾನಮಗನ್...? "ಮಠದಾಗ ಪಟ್ಟ ಕಾಲಿ ಇರಬೇಕಲ್ಲ...!. ಮಠದೋಳ್ಗ ನಡೆಯೋ ರಾಜಕಾರ್ಣಾ ಬೇರೆಲ್ಲೂ    
   ನಡೆಯೋದಿಲ್ಲ...! "ಕೆಲವು ಮಠಾಧೀಶರು ತಾವು ಹಾಕ್ಕೋಂಡಿರೋ ಖ್ಯಾವಿಬಟ್ಟಿನ ಖಾದಿ ಬಟ್ಟಿ ಅಂತತಿಳಕೊಂಡಾರೋ ಏನೋ."..? ಹಿಂಗಾಗಿ ಅವರು 
   ರಾಜಕಾರ್ಣಿಗಳಿಗೆ ಸಲಹೆ ಕೊಡ್ತಾರ..? ಹಿಂಗ ಮಾತಾಡ್ರೀ...ಹಿಂಗಿಂಗ ಹೇಳಿಕೆ ಕೊಡ್ರೀ...ಅಂತ ಹೇಳ್ತೀರ್ತಾರ..? ಇನ್ನ ಕೆಲವು ಮಠಗಳು ಸಮಾಜ ತಿದ್ದೋದು  
   ಒಂದ ಬಿಟ್ಟು ಎಲ್ಲಾ ಕೆಲ್ಸಾನು ಮಾಡ್ತಾವು"..... "ಸೋತ ರಾಜಕಾರ್ಣಿಗಳು ಮಠಕ್ಕ ಹೋದ್ರ ಪಾಪಾ ಮಠದವ್ರು ಎಲ್ಲಿಗೆ ಹೋಗಬೇಕಂತಿ."...?
 ಅಲ್ರೀ..."ಈ ಖ್ಯಾವಿ ಹಾಂಕ್ಕೋಂಡವ್ರು...ರಾಜಕಾರ್ಣಿಗಳು ಆಗಬಹುದು ಅಂದ್ರ,..... ರಾಜಕಾರಣಿಗಳು ಯಾಕ್ ಖ್ಯಾವಿ ಹಾಕ್ಕೋಬಾರ್ದು.".? ಹಂಗಂತ್ ಎಲ್ಲೇರ ಕಾಯ್ದೆ ಐತೇನೂ.....!
    ಈಗಯಾರ್ಪಾ ಖ್ಯಾವಿ ಹಕ್ಕೋಂಡು ರಾಜಕೀಯಕ್ಕ ಬಂದೋರು.....?
ಅದರಿ ಭೂಪಾಲದಾಗ ದಿಗ್ವೀಜಯಸಿಂಗ್‍ನ್ನ ಸೋಲಿಸಿ ಗೆದ್ದಬಂದಾಳಲ್ಲ ಪ್ರಜ್ಞಾಸಿಂಗ್ ಆ ಹೆಣ್ಣಮಗಳ ಬಗ್ಗೆ ,.... ಆಕಿ ಮಹಿಳಾ ಸ್ವಾಮಿ ಹೌದಲ್ಲ....?
    ಈಬಗ್ಗೆ ನನಗ ಹೆಚ್ಚಿನ ಮಾಹಿತಿ ಇಲ್ಪಾ....ಈಬಗ್ಗೆ ಗೊತ್ತಗಾಬೇಂದ್ರ ಆ ಪ್ರಣವಾನಂದ ಸ್ವಾಮಿನ ಕೇಳಬೇಕು. ....
ಹೋಗ್ಲಿ ಬೀಡ್ರೀ ಅತ್ಲಾಗ,  ಸೋತೋರು ಈಗೇನಮಡ್ತಾರಿ...?
     ಈಗೇನಮಾಡ್ತಾರ ಅಂದ್ರ.... "ಕೋಣ್ಯಾಗ ಕುತಗಂಡ ಲೆಕ್ಕಾ ಹಾಕ್ತಾರೋ...ಲೆಕ್ಕ"...!
ಅಂದ್ರ "ಇವರು ಅಧಿಕಾರ ನಡೆಸಿದ ಹೊತ್ತಿನ್ಯಾಗ ಗಳಿಸಿದ ರೊಕ್ಕ ಎಷ್ಟು,..? ಆಸ್ತಿ ಎಷ್ಟು..? ಅದನ್ನ ಲೆಕ್ಕಾ ಮಾಡ್ತಾರ ಅಂತಿರೇನು"...? 
ನಾ ಎಲ್ಲಿ ಹಂಗ್ ಹೇಳ್ದೇ!..., ಯಾವ ಬೂತಿನ್ಯಾಗ ಇವರಿಗೆ ಮತಾ ಬಂದಿಲ್ಲ...! ಯಾವ ಬೂತಿನೊಳ್ಗ ಹೆಚ್ಚಿಗೆಮತಾ ಬಂದಾವು ಅನ್ನೋದನ್ನು ಕೂಡ್ಸಿ, ಕಳ್ದು ಗುಣಕಾರ, ಭಾಗಾಕಾರ ಮಾಡಿ ಲೆಕ್ಕಾಮಾಡ್ತೀರತಾರ ಅಂದೆ. ....ಅಷ್ಟ.
ಹಂಗೇನ್ರೀ...ಕಾಕಾ,  ನಿಮ್ಮ "ಸಿದ್ರಾಮಣ್ಣ, ಕುಮಾರಣ್ಣ, ಶಿವಕುಮಾರಣ್ಣ, ಜಮೀರಣ್ಣನ ಗತಿ ಏನ್ರೀ."...?
    ಅವ್ರಿಗೇನಾಗೇತೋ..ಇಲೇಕ್ಷನ್ ಅಂದ್ರ ಸೋಲು-ಗೆಲ್ವು ಅವ್ರಿಗೆ ಹೊಸಾದೇನಲ್ಲ....!
ಅದು ಎಲ್ಲಾರಿಗೂ ಗೊತ್ತಿರೋ ಸಂಗತಿ ಬಿಡ್ರೀ..ಮುಂದ ಅವ್ರ ರಾಜಕೀಯ ಭವಿಷ್ಯಾ ಎನೂ ಅಂತ..?
    ನೋಡಲೇ ಗೌಡ್ರು ಅಂತೂÀ ಮೋಲಿ ಸೇರಿದ್ರು."..? ಇನ್ನ "ಸಿದ್ದ್ರಾಮಣ್ಣ ಯಾರನ್ನ ಎಲ್ಲಿಗೆ ಸೇರಸಬೇಕೋ ಅಲ್ಲಿಗೆ ಸೇರಿಸಿಬಿಟ್ಟಾನ."....., 
ಅಲ್ರೀ... "ರಾಜ್ಯದೊಳ್ಗ ದೋಸ್ತಿ ಮಾಡಿಕೊಂಡು ಇಲೇಕ್ಷನ ಮಾಡಿದ್ರು ಇವ್ರಿಗೆ ಸಿಕ್ಕೇದ್ದೇನು? ಎಂತಿಂತವರೆಲ್ಲಾ ಮಣ್ಣು ಮುಕ್ಕಿಹೋಗ್ಯಾರ."..!, "ಎರಡುಪಕ್ಷದವ್ರು ದೋಸ್ತಿ ಮಾಡಿ ಕುಸ್ತಿ ಆಡಿದ್ರು ಎರಡಸೀಟು ಗೆಲ್ಲಾಕ ಆಗಲಿಲ್ಲಾ" ಅಂದ್ರ ಜನ್ರಿಗೆ ಮುಸಡಿನರ ಹೆಂಗ್ಯ ತೋರಸ್ಥಾರ ಇವ್ರು. ದೋಸ್ತಿ ಸರ್ಕರದ ಗತಿ ಏನ್ರೀ...
   ಯಾರಿಗೆ ಗೊತ್ತಲೇ ತಮ್ಮ... ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಂದ್ರ ರಂಗನಾಥನ್ನ ಕೇಳಬೇಕು, ಅವಾ ನೋಡಿದ್ರ ಈಗ ಬಾಳಾ ಬೀಜಿ ಆಗ್ಯಾನ,ಭ  
   ವಿಷ್ಯಾಕೇಳಾಕ ಸಣ್ಣೋರು, ದೊಡ್ಡೋರು ಅವನ ಮನಿ ಮುಂದ ಪಾಳೆ ಹಚ್ಚಿರತಾರ. ಅದು ಆಗದ ಕೆಲ್ಸಾ.!
ಅಲ್ರೀ ಕಾಕಾ "ಕೇಂದ್ರದೊಳ್ಗ ಕಮಲಪಕ್ಷದವ್ರಿಗೆ ಇಷ್ಟು ದೊಡ್ಡ ಬಹುಮತ ಬಂದೆತೈಲ್ಲ. ನನಗ ಹೆದ್ರಿಕಿ ಆಗಾಗ ಹತ್ತೇತಿ... ಈಹಿಂದ ಸಂವಿಧಾನ ಬದಲಾಯಿಸತೇವಿ..... ನಾವು ಬಂದಿರೋದ ಸಂವಿಧಾನ ಬದಲಾಯಿಸಾಕ ಅಂತ ಹೇಳಿದವ್ರು,... ಡಾ.ಅಂಬೇಡ್ಕರ ಬಗ್ಗೆ ಹಗರುನ ಮಾತಾಡಿದವ್ರು ಈಗ ಎಂಪಿ ಆಗ್ಯಾರ ಮುಂದೇನು ಗತಿ ಅಂತ.....?
  ಹಂಗೇಲ್ಲ ಹೆದ್ರಬ್ಯಾಡೋ ಅಂತೇದ್ದೇನು ಆಗೋದಿಲ್ಲ.... ಯಾಕಂದ್ರ "ದೇಶ ಯಾರಪ್ಪನ ಸೊತ್ತು ಅಲ.್ಲ"..... ಇಲ್ಲೇ ಎಲ್ಲಾರಿಗೂ ಬದ್ಕೋ ಹಕ್ಕೈತಿ.  
  "ಯಾರೋ ಒಬ್ಬಿಬ್ರು ಹೇಳಿದ್ರು ಅಂತ ಅಂವಿಧಾನ ಬದಲಾಯಿಸಾಕ ಬರೋದಿಲ"್ಲ..... "ಹಂಗೇನರ  ಆದ್ರ ಅದ್ರ ಪರಿಣಾಮ ನೆಟ್ಟಗ ಇರೋದಿಲ್ಲ". "ಸರ್ಕಾರ  
  ಯಾವುದಾದ್ರ ಏನು".... "ಅದು ಸಂವಿಧಾನದ ಆಶಯದಮ್ಯಾಲ ನಡಿಬೇಕು", ಹಂಗ್ ನಡದ ನಡಿತೈತಿ. ಒಟ್ಟಿನ್ಯಾಗ "ದೇಶದ ಜನ್ರು ನೆಮ್ಮದಿಯಿಂದ  
  ಇರೋವಾತಾವರ್ಣ ದೇಶದೊಳ್ಗ ಇರ್ಲಿ" ಅನ್ನೋದೊಂದ ನನ್ನ ಬೇಡ್ಕಿ, ಮಹಾತ್ಮಾಗಾಂಧೀಜಿಯವ್ರು ಹೇಳಿದಂಗ್ "ಸಭಕೋ ಸನ್ಮತಿ 
  ದೇ ಭಗವಾನ" ಅನ್ನು ಪ್ರಾರ್ಥನೆ ಈಗ ಜಾರಿಗೆ ಬರಬೇಕಾಗೈತಿ..."ಎಲ್ಲಾರನ್ನು ಒಂದೇ ತರಾ ನೋಡೋ ಬುದ್ದಿ ಆಭಗವಂತ ನಮ್ಮನ್ನ ಆಳೋ ಜನಪ್ರತಿನಿಧೀಗಳ್ಗೆ ಕೊಡ್ಲಿ" ... ಹೊತ್ತಾತು ಕೆರಿಕಡಿಗೆ ಹೋಗಿಬರೋಣ ನಡಿ ಎನ್ನುತ್ತಾ ಇಬ್ಬರು ಮಾತಿಗೆ ಪೂರ್ಣವಿರಾಮ ನೀಡಿದರು.