ಜಾಮಿಯ ವಿದ್ಯಾರ್ಥಿಗಳ ಪ್ರತಿಭಟನೆ ; ದೆಹಲಿ ಪೊಲೀಸ್ ವಿರುದ್ದ ಎಫ್ಐಅರ್ ದಾಖಲಿಸಲು ನಿರ್ಧಾರ

ಜಾಮಿಯ ವಿದ್ಯಾರ್ಥಿಗಳ ಪ್ರತಿಭಟನೆ ; ದೆಹಲಿ ಪೊಲೀಸ್ ವಿರುದ್ದ ಎಫ್ಐಅರ್ ದಾಖಲಿಸಲು ನಿರ್ಧಾರ

 

ನವದೆಹಲಿದೆಹಲಿ  ಪೊಲೀಸ್ ರು  ನಡೆಸಿದ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು  ಒತ್ತಾಯಿಸಿದ ನಂತರ ಜಾಮಿಯಾ ಮಿಲಿಯಾ ಇಸ್ಲಾಮಿಯಾ  ಉಪಕುಲಪತಿ ನಜ್ಮಾ ಅಖ್ತರ್  ಎಫ್ ಐ ಆರ್ ದಾಖಲಿಸಲು ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಡಿಸೆಂಬರ್ 15  ಪೊಲೀಸ್  ನಡೆಸಿದ ದೌರ್ಜನ್ಯದ ಬಗ್ಗೆ ಈಗಾಗಲೇ   ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿಕೊಂಡು  ತನಿಖೆ ಆರಂಭಿಸಿವೆ. ಇನ್ನೊಂದು ತಂಡವು  ಮಂಗಳವಾರ ಭೇಟಿ ನೀಡಿ ಸಂತ್ರಸ್ತರ ಹೇಳಿಕೆಗಳನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಿದರು.

  ಇದೇ ಸಂದರ್ಭದಲ್ಲಿ ಎಫ್ಐಆರ್ ದಾಖಲಿಸಲು ಗಡುವು ಬೇಡ ಎಂದು ನಜ್ಮಾ ಹೇಳಿದರು.

ಜನವರಿ 16ರೊಳಗೆ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಸೊಮವಾರ ವಿಶ್ವವಿದ್ಯಾಲಯ ಮುಖ್ಯ ಗೇಟ್‌ನ ಬೀಗ ಮುರಿದು ಉಪಕುಲಪತಿಯ  ವಿರುದ್ಧ ಘೋಷಣೆಗಳನ್ನು ಕೊಗಿದರು.

ಟೆಲಿಗ್ರಾಫ್  ವರದಿ ಮಾಡಿದ ಪ್ರಕರ  ವಿಶ್ವವಿದ್ಯಾಲಯವು ಸೋಮವಾರ ನಡೆಯಬೇಕಾಗಿದ  ಪರೀಕ್ಷೆಯನ್ನು ರದ್ದು ಮಾಡಿವೆ ತಿಳಿದು ಬಂದಿವೆ.