ವಿದ್ಯುತ್ ತಂತಿ ತುಳಿದು ಕುಟುಂಬದ ಮೂವರ ಸಾವು

ವಿದ್ಯುತ್ ತಂತಿ ತುಳಿದು ಕುಟುಂಬದ ಮೂವರ ಸಾವು

ಹಾಸನ: ವಿದ್ಯುತ್ ಅವಗಡ ಸಂಭವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಅಗಸರ ಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಭಾಗ್ಯಮ್ಮ (48) ದಾಕ್ಷಾಯಿಣಿ (30) ಹಾಗೂ ದಯಾನಂದ (23) ಮೃತರು. ಮನೆ ಮುಂದೆ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಈ ಮೂವರು ಮೃತರಾಗಿದ್ದಾರೆ. ಬಟ್ಟೆ ತೊಳೆದು ಒಣ ಹಾಲು ಹೋದಾಗ ಈ ದುರ್ಘಟನೆ ನಡೆದಿದೆ. ಮಗಳು ದಾಕ್ಷಯಿಣಿಯನ್ನು ರಕ್ಷಿಸಲು ಹೋದ ತಾಯಿ ಭಾಗ್ಯಮ್ಮ ಹಾಗೂ ಸಹೋದರ ದಯಾನಂದ ಅವರಿಗೂ ವಿದ್ಯುತ್ ತಗುಲಿದೆ.

ಈ ಕುರಿತು, ಚೆನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.