ಸ್ಟಾರ್ ದಂಪತಿಗೆ ಕೃಷಿ ಜೀವನದತ್ತ ಒಲವು

ಸ್ಟಾರ್ ದಂಪತಿಗೆ ಕೃಷಿ ಜೀವನದತ್ತ ಒಲವು

ಬಣ್ಣದ ಬದುಕಿನಲ್ಲಿರೋ ಸಾಕಷ್ಟು ಮಂದಿ ಕೃಷಿ, ವ್ಯವಸಾಯದ ಬಗ್ಗೆ ಒಲವು ತೋರಿಸೋದನ್ನು ನಾವು ನೋಡಿರ್ತಿವಿ. ಕೆಲ ನಟ-ನಟಿಯರು ಕೃಷಿಕರಾಗಿ ಮಾರ್ಪಾಡಾಗಿರೋ ಉದಾಹರಣೆಗಳು ಇವೆ.

ಕನ್ನಡ ಚಿತ್ರರಂಗದ ವಿಚಾರವನ್ನೇ ನೋಡಿದ್ರೆ, ನಟ ಕಿಶೋರ್, ವಿನೋದ್ ರಾಜ್ ಹೀಗೆ ಕೆಲವರು ಕೃಷಿ ಬದುಕನ್ನು ಅವಲಂಬಿಸಿದ್ದಾರೆ. ಇದೀಗ ಬಾಲಿವುಡ್ ಸರದಿ. ಯಶಸ್ಸಿನ ಉತ್ತುಂಗದಲ್ಲಿರೋ ಪ್ರಿಯಾಂಕ ಛೋಪ್ರಾ ಹಾಗೂ ನಿಕ್ ಜೋನಸ್ ದಂಪತಿ ಕೃಷಿಯತ್ತ ಮುಖ ಮಾಡೋ ಮನಸ್ಸು ಮಾಡಿದ್ದಾರೆ.  

ಸಂದರ್ಶನವೊಂದ್ರಲ್ಲಿ ಮಾತನಾಡ್ತಾ, ಗಾಯಕ ನಿಕ್ ಜೋನಸ್ ಕೃಷಿ ಜೀವನವನ್ನು ಅವಲಂಬಿಸೋದಾಗಿ ಹೇಳಿದ್ದಾರೆ. ಕೃಷಿಕನಾಗಬೇಕು ಅನ್ನೋ ಆಲೋಚನೆ ಬಹಳ ಸಮಯದಿಂದ ನನಗಿದೆ. ಈ ಬಗ್ಗೆ ಪ್ರಿಯಾಂಕ ಬಳಿ ಕೂಡ ಪ್ರಸ್ತಾಪಿಸಿದ್ದೇನೆ. ನನ್ನ ಐಡಿಯಾ ಬಗ್ಗೆ ಅವಳು ಕೂಡ ಆಸಕ್ತಿ ಹೊಂದಿದ್ದಾಳೆ. ಆದ್ರೆ ಆಕೆ ಬಾಲಿವುಡ್ ಸ್ಟಾರ್ ಆಗಿ ಒಂದು ಸ್ಥಾನದಲ್ಲಿದ್ದಾಳೆ. ಇದು ಸ್ವಲ್ಪ ಅವಳಿಗೆ ಕಷ್ಟ ಎನಿಸಬಹುದು ಎಂದಿದ್ದಾರೆ.

ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರೋ ಸೆಲೆಬ್ರಿಟಿಗಳು ತಮ್ಮ ವೃತ್ತಿ ಜೀವನ ಬಿಟ್ಟು ಕೃಷಿ ಜೀವನಕ್ಕೆ ಧುಮುಕ್ತಾರೆ ಅಂದ್ರೆ ಖುಷಿಯ ಜತೆಗೆ ಆಶ್ಚರ್ಯವೂ ಆಗತ್ತೆ. ಆದ್ರೆ ಪ್ರಿಯಾಂಕ ಚೋಪ್ರಾ ಈಗಿನ ದಿನಗಳಲ್ಲಿ ತಾವು ತೊಡೋ ವಿವಿಧ ರೀತಿಯ ಕಾಸ್ಟ್ಯೂಮ್ಸ್ ಗಳಿಂದ ಪದೇ ಪದೇ ಟ್ರೋಲ್ ಆಗ್ತಿರ್ತಾರೆ. ಮೆಟ್ ಗಾಲಾ ಈವೆಂಟ್ ಗಾಗಿ ಪ್ರಿಯಾಂಕ ತೊಟ್ಟಿದ್ದ ಲಕ್ಷಗಟ್ಟಲೇ ಬೆಲೆ ಬಾಳೋ ಉಡುಗೆ ಹಾಗೂ ಹೇರ್ ಸ್ಟೈಲ್ ನಿಂದಲೂ ಪ್ರಿಯಾಂಕಾ ಸಾಕಷ್ಟು ಟೀಕೆಗೆ ಗುರಿಯಾಗಿದ್ರು. ಇನ್ನುಳಿದಂತೆ ಪಾರ್ಟಿ-ಫಂಕ್ಷನ್ ಗಳಿಗೆ ಧರಿಸೋ ಬಟ್ಟೆ, ಬ್ಲೌಸ್ ಹಾಕದೇ ಉಟ್ಟ ಸ್ಯಾರಿ, ಪ್ರಿಯಾಂಕ ಹಾಗೂ ಪತಿ ನಿಕ್ ಜೋನಸ್ ನಡುವಿನ ವಯಸ್ಸಿನ ಅಂತರವಂತು ನೆಟ್ಟಿಗರ ಬಾಯಿಗೆ ಆಹಾರವಾಗಿದೆ.